ರಾಜಸ್ತಾನ:ಗಂಗರಾರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬೈಕ್​ ಮತ್ತು ಅಪರಿಚಿತ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಗರ್ಭಿಣಿಯೊಬ್ಬಳ ಹೊಟ್ಟೆ ಮೇಲೆ ವಾಹನ ಹರಿದು ಸ್ಥಳದಲ್ಲೇ ಮಗು ಸಹಿತ ತಾಯಿ ದುರ್ಮರಣಕ್ಕೀಡಾಗಿದ್ದಾರೆ. ಜತೆಗಿದ್ದ ಗಂಡ ಮತ್ತು 7 ವರ್ಷದ ಮಗನ ಸ್ಥಿತಿ ಗಂಭೀರವಾಗಿದೆ.
ಧೋಲಿ ಮೊಹಲ್ಲಾ ನಿವಾಸಿ ಬಾಲರಾಜ್​ ಎಂಬುವರ ಪತ್ನಿ, ತುಂಬುಗರ್ಭಿಣಿ ಹೇಮಲತಾ ಮತ್ತು ಈಕೆಯ ಹೊಟ್ಟೆಯಲ್ಲಿದ್ದ ಮಗು ಮೃತ ದುರ್ದೈವಿಗಳು. ಈ ದಂಪತಿಗೆ 7 ವರ್ಷದ ಮಗನಿದ್ದು, ಅವನೊಂದಿಗೆ ಬೈಕ್​ನಲ್ಲಿ ಗಂಗರಾರ್​ನಿಂದ ಚಿತ್ತೋರಗಢದತ್ತ ಸೋಮವಾರ ಸಂಜೆ ಬೈಕ್​ನಲ್ಲಿ ಬರುತ್ತಿದ್ದರು.ಇದನ್ನೂ ಓದಿರಿಸತ್ತು ಮಲಗಿದ್ದವ ಕರುಳ ಕೂಗಿಗೆ ಓಗೊಟ್ಟು ಮತ್ತೆ ಬದುಕಿದ! ಅಂತ್ಯಸಂಸ್ಕಾರ ವೇಳೆ ನಡೆದ ಪವಾಡ ಕೇಳಿದ್ರೆ ಶಾಕ್​ ಆಗ್ತೀರಿ
ಈ ವೇಳೆ ಹಿಂಬದಿಯಿಂದ ಬಂದ ವಾಹನವೊಂದು ಬೈಕ್​ಗೆ ಡಿಕ್ಕಿಹೊಡೆದಿದ್ದು, ರಸ್ತೆಗೆ ಬಿದ್ದ ಗರ್ಭಿಣಿ ಮೇಲೆ ವಾಹನ ಹರಿದಿದೆ. ಮಹಿಳೆ ಮೃತಪಟ್ಟಿದ್ದು, ಆಕೆಯ ಹೊಟ್ಟೆಯಿಂದ ಹೊರ ಬಂದ ಮಗುವನ್ನ ಉಳಿಸಲು ಸ್ಥಳಕ್ಕೆ ವೈದ್ಯರು ದೌಡಾಯಿಸಿದ್ದರಾದರೂ ಮಗು ಬದುಕಲಿಲ್ಲ. ಬೈಕ್​ ಸವಾರ ಬಾಲರಾಜ್​ ಬೈಕ್​ ಸಹಿತ ರಸ್ತೆಬದಿಗೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದಾರೆ. 7 ವರ್ಷದ ಮಗನ ಸ್ಥಿತಿಯೂ ಚಿಂತಾಜನಕವಾಗಿದೆ. ಅಪ್ಪ-ಮಗ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ನಡುರಸ್ತೆಯಲ್ಲಿ ವಾಹನಕ್ಕೆ ಗರ್ಭಿಣಿ ಬಲಿಯಾದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಮಗು ಹುಟ್ಟಿದ ಮೂರೇ ದಿನಕ್ಕೆ ರೈಲಿಗೆ ತಲೆ ಕೊಟ್ಟ ಗಂಡ! ಪತ್ನಿಯ ಆ ನಿರ್ಧಾರವೇ ಇಷ್ಟಕ್ಕೆಲ್ಲ ಕಾರಣ

ತಡರಾತ್ರಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆತ್ಮಹತ್ಯೆ! ಮುದ್ದಾದ ಯುವತಿ ಬಾಳಿಗೆ ಕೊಳ್ಳಿ ಇಟ್ಟಿದ್ಯಾರು?

ವರದಕ್ಷಿಣೆಗೆ ವೈದ್ಯೆ ಬಲಿ! ಸಾವಿಗೂ ಮುನ್ನ ಸೋದರನ ಬಳಿ ಆಕೆ ಬಿಚ್ಚಿಟ್ಟ ನೋವಿನ ಸಂದೇಶ ಇಲ್ಲಿದೆ

ಪೊಲೀಸರ ಕಿರುಕುಳ ಸಹಿಸಲಾಗ್ತಿಲ್ಲ, ನನಗೆ ದಯಾಮರಣ ಕೊಡಿ: ಮಧುಗಿರಿಮೋದಿ

ಮೂತ್ರ ವಿಸರ್ಜನೆ ಮಾಡುತ್ತಲೇ ಯುವಕರಿಬ್ಬರು ದುರಂತ ಸಾವು! ದೇವರೇ ಈ ಸಾವು ನ್ಯಾಯವೇ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − three =
Remember me
