ಲಿಥಿಯಂ, ನಿಯೋಬಿಯಂ ಮತ್ತು ಭೂಮಿಯಲ್ಲಿನ ಅಪರೂಪದ ಮೂಲಧಾತು (ಆರ್​ಇಇ- ರೇರ್ ಅರ್ತ್ ಎಲೆಮೆಂಟ್ಸ್) ಸೇರಿದಂತೆ ಮೂರು ಪ್ರಮುಖ ಖನಿಜಗಳ ಗಣಿಗಾರಿಕೆಯನ್ನು ದೇಶದಲ್ಲಿ ಕೈಗೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟವು ರಾಯಧನ (ರಾಯಲ್ಟಿ) ದರಗಳನ್ನು ನಿಗದಿಪಡಿಸಿದೆ.
ಲಿಥಿಯಂ ಮತ್ತು ನಿಯೋಬಿಯಂ ಸೇರಿದಂತೆ ಆರು ಖನಿಜಗಳನ್ನು ’ನಿರ್ದಿಷ್ಟ’ ಪರಮಾಣು ಖನಿಜಗಳ ಪಟ್ಟಿಯಿಂದ ತೆಗೆದುಹಾಕಿದ ನಂತರ ರಾಯಧನ ಕುರಿತ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ಶುದ್ಧ ಶಕ್ತಿಯ ಉತ್ಪಾದನೆ ಹಾಗೂ ತನ್ಮೂಲಕ ಶೂನ್ಯ ಮಾಲಿನ್ಯ ಹೊರಸೂಸುವಿಕೆಯ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಈ ಕ್ರಮವು ಮಹತ್ವದ್ದಾಗಿದೆ. ವಿದ್ಯುತ್ ವಾಹನಗಳಿಗೆ ಅವಶ್ಯವಿರುವ ಬ್ಯಾಟರಿಗಳನ್ನು ತಯಾರಿಸಲು ಅಗತ್ಯವಿರುವ ಲಿಥಿಯಂ ಅನ್ನು ಸಳೀಯವಾಗಿಯೇ ಉತ್ಪಾದಿಸುವ ಉದ್ದೇಶದೊಂದಿಗೆ ಸರ್ಕಾರವು ಈ ಖನಿಜಗಳ ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸುತ್ತಿದೆ.
ದೇಶೀಯವಾಗಿ ಲಿಥಿಯಂ ಉತ್ಪಾದನೆ ಮಾಡಿದರೆ ಲಿಥಿಯಂ ಹಾಗೂ ಬ್ಯಾಟರಿಗಳ ಆಮದು ಅವಲಂಬನೆ ತಗ್ಗಿಸಲು ಸಾಧ್ಯವಾಗುತ್ತದೆ. ಅಲ್ಲದೆ, ದೇಶದಲ್ಲಿಯೇ ಬ್ಯಾಟರಿಗಳ ತಯಾರಿಕೆಗೆ ಪ್ರೋತ್ಸಾಹ ನೀಡಿದರೆ ಸ್ವಾವಲಂಬನೆ ಸಾಧಿಸಲು ಹಾಗೂ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಸಾಧ್ಯವಾಗುತ್ತದೆ ಎಂಬ ಲೆಕ್ಕಾಚಾರ ಕೇಂದ್ರ ಸರ್ಕಾರದ್ದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 1957ರ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ (ಎಂಎಂಆರ್​ಡಿ ಕಾಯ್ದೆ) ಎರಡನೇ ಪರಿಚ್ಛೇದಕ್ಕೆ ತಿದ್ದುಪಡಿ ತರುವ ಮೂಲಕ ರಾಯಧನದ ದರ ನಿಗದಿಪಡಿಸಲು ಅನುಮೋದಿಸಿದೆ. ಎಂಎಂಆರ್​ಡಿ ತಿದ್ದುಪಡಿ ಕಾಯ್ದೆಯು ಕಳೆದ ಆಗಸ್ಟ್ 17ರಿಂದ ಜಾರಿಗೆ ಬಂದಿದೆ. ರಾಯಧನ ದರದ ಈ ಅನುಮೋದನೆಯು ದೇಶದಲ್ಲಿ ಮೊದಲ ಬಾರಿಗೆ ಲಿಥಿಯಂ, ನಿಯೋಬಿಯಂ ಮತ್ತು ಆರ್​ಇಇ ಗಣಿಗಾರಿಕೆಗಾಗಿ ಬ್ಲಾಕ್​ಗಳನ್ನು ಹರಾಜು ಮಾಡಲು ಅವಕಾಶ ಕಲ್ಪಿಸುತ್ತದೆ.
ಲಿಥಿಯಂ ಒಂದು ಕ್ಷಾರ ಲೋಹವಾಗಿದೆ. ಮೊಬೈಲ್​ಫೋನ್, ಲ್ಯಾಪ್​ಟಾಪ್, ಎಲೆಕ್ಟ್ರಿಕ್ ವಾಹನಗಳು ಮತ್ತು ಪೇಸ್​ವೆುೕಕರ್​ಗಳಂತಹ ವೈದ್ಯಕೀಯ ಸಾಧನಗಳಲ್ಲಿ ಬಳಸಲಾಗುವ ಪುನರ್​ಭರ್ತಿ ಮಾಡಬಹುದಾದ ಬ್ಯಾಟರಿಗಳ ತಯಾರಿಕೆಯಲ್ಲಿನ ಪ್ರಮುಖ ಸಾಮಗ್ರಿ ಇದಾಗಿದೆ. ಇದನ್ನು ವಿದ್ಯುಚ್ಛಕ್ತಿ ಶೇಖರಣಾ ಸಾಧನವಾಗಿಯೂ ಬಳಸಲಾಗುತ್ತದೆ.
ಇನ್ನು ನಿಯೋಬಿಯಮ್ ಅನ್ನು ಜೆಟ್ ಇಂಜಿನ್​ಗಳು, ರಾಕೆಟ್​ಗಳು, ಕಟ್ಟಡಗಳಲ್ಲಿನ ಅಡ್ಡದೊಲೆಗಳು, ತೈಲ ರಿಗ್​ಗಳು (ಭೂಮಿಯಿಂದ ತೈಲ ತೆಗೆಯುವ ಸಾಧನ) ಹಾಗೂ ತೈಲ ಮತ್ತು ಅನಿಲ ಪೈಪ್​ಲೈನ್​ಗಳಲ್ಲಿ ಬಳಸಲಾಗುತ್ತದೆ. ಈ ಲೋಹವು ಸೂಪರ್ ಕಂಡಕ್ಟಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಕಣ ವೇಗವರ್ಧಕಗಳು, ಎಂಆರ್​ಐ ಸ್ಕಾ್ಯನರ್​ಗಳು ಮತ್ತು ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಉಪಕರಣಗಳ (ಸ್ಪೆಕ್ಟ್ರೋಸ್ಕೋಪಿ) ಸೂಪರ್ ಕಂಡಕ್ಟಿಂಗ್ ಮ್ಯಾಗ್ನೆಟ್​ಗಳಲ್ಲಿ ಬಳಸಲಾಗುತ್ತದೆ.
ಅಪರೂಪದ ಭೂಮಿಯ ಅಂಶಗಳು (ಆರ್​ಇಇ) ಸ್ಕಾ್ಯಂಡಿಯಮ್ ಯಟ್ರಿಯಮ್ ಮತ್ತು ಸಿರಿಯಮ್ ಮುಂತಾದ 17 ಖನಿಜಗಳ ಗುಂಪನ್ನು ಒಳಗೊಂಡಿವೆ. ಇವುಗಳಲ್ಲಿ ಹೆಚ್ಚಿನವುಗಳನ್ನು ವೇಗವರ್ಧಕಗಳು ಮತ್ತು ಆಯಸ್ಕಾಂತಗಳಾಗಿ ಬಳಸಲಾಗುತ್ತದೆ. ಮಿಶ್ರಲೋಹಗಳು, ಗಾಜು, ಎಲೆಕ್ಟ್ರಾನಿಕ್ಸ್, ಪೆಟ್ರೋಲಿಯಂ ಹೊರತೆಗೆಯುವಿಕೆ, ಹೈಬ್ರಿಡ್ ಮತ್ತು ವಿಂಡ್ ಟರ್ಬೆನ್​ಗಳ ಎಲೆಕ್ಟ್ರಿಕ್ ಮೋಟಾರ್ ಮುಂತಾದವುಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಅತಿಹೆಚ್ಚು ಆರ್​ಇಇ ಸಂಪನ್ಮೂಲ ಹೊಂದಿದ ದೇಶಗಳ ಪೈಕಿ ಭಾರತ ಐದನೇ ಸ್ಥಾನದಲ್ಲಿದೆ.
ಕಾಶ್ಮೀರದಲ್ಲಿ ನಿಕ್ಷೇಪ: ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ತಯಾರಿಸಲು ಬಳಸುವ ನಿರ್ಣಾಯಕ ಕಚ್ಚಾ ವಸ್ತುವಾದ ಲಿಥಿಯಂ ಸರಬರಾಜುಗಳನ್ನು ಸುರಕ್ಷಿತಗೊಳಿಸುವ ಮಾರ್ಗಗಳನ್ನು ಭಾರತ ಕಂಡುಕೊಳ್ಳಲು ಮುಂದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂನ ಮೊದಲ ನಿಕ್ಷೇಪಗಳನ್ನು ಕಂಡುಬಂದಿವೆ. ಜಮ್ಮು ಮತ್ತು ಕಾಶ್ಮೀರವಲ್ಲದೆ, ರಾಜಸ್ಥಾನ ಮತ್ತು ಗುಜರಾತ್​ನ ಉಪ್ಪುನೀರಿನ ಕೊಳಗಳು, ಒಡಿಶಾ ಮತ್ತು ಛತ್ತೀಸ್​ಗಢದ ಮೈಕಾ ಬೆಲ್ಟ್​ಗಳಿಂದ ಲಿಥಿಯಂ ಅನ್ನು ಹೊರತೆಗೆಯಲು ಸಂಶೋಧನೆಗಳು ನಡೆಯುತ್ತಿವೆ. ಇದಲ್ಲದೆ, ಅರ್ಜೆಂಟೀನಾ, ಆಸ್ಟ್ರೇಲಿಯಾದಂತಹ ದೇಶಗಳಿಂದ ಲಿಥಿಯಂ ಸರಬರಾಜುಗಳನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತವು ಮಾತುಕತೆಗೆ ಮುಂದಾಗಿದೆ.
ಸ್ಪರ್ಧಾತ್ಮಕ ರಾಯಧನ ನಿಗದಿ: ಗಣಿಗಳ ಸಚಿವಾಲಯವು ಈ ಮೂರೂ ಖನಿಜಗಳ ಸರಾಸರಿ ಮಾರಾಟ ಬೆಲೆಯನ್ನು (ಎಎಸ್​ಪಿ) ಲೆಕ್ಕಾಚಾರ ಮಾಡಲು ಒಂದು ವಿಧಾನವನ್ನು ರೂಪಿಸಿದೆ. ತಿದ್ದುಪಡಿಗೆ ಮೊದಲು, ಎಂಎಂಆರ್​ಡಿ ಕಾಯ್ದೆಯ ಎರಡನೇ ಪರಿಚ್ಛೇದದ ಪ್ರಕಾರ ಎಲ್ಲಾ ಖನಿಜಗಳಿಗೆ ಎಎಸ್​ಪಿಯ ಶೇಕಡಾ 12ರಷ್ಟು ರಾಯಧನ ದರವನ್ನು ನಿಗದಿಪಡಿಲಾಗಿತ್ತು. ಹೀಗಾಗಿ, ಈ ದರಗಳು ಸ್ಪರ್ಧಾತ್ಮಕವಾಗಿರಲಿಲ್ಲ ಹಾಗೂ ಜಾಗತಿಕ ಮಾನದಂಡಗಳಿಗೆ ಸಮನಾಗಿರಲಿಲ್ಲ. ಆದ್ದರಿಂದ, ಲಿಥಿಯಂ, ನಿಯೋಬಿಯಂ ಮತ್ತು ಆರ್​ಇಇಗಳಿಗೆ ಸಮಂಜಸವಾದ ರಾಯಧನ ದರವನ್ನು ನಿಗಡಿಪಡಿಸಲು ನಿರ್ಧರಿಸಲಾಗಿದೆ. ಲಿಥಿಯಂ ಹೊರತೆಗೆಯಲು ಗಣಿ ಕಂಪನಿಗಳಿಗೆ ರಾಯಧನ ದರಗಳನ್ನು ಲಂಡನ್ ಮೆಟಲ್ ಎಕ್ಸ್​ಚೇಂಜ್​ನಲ್ಲಿ ಚಾಲ್ತಿಯಲ್ಲಿರುವ ಬೆಲೆಗಳಿಗೆ ಅನುಗುಣವಾಗಿ ಶೇಕಡಾ 3ಕ್ಕೆ ನಿಗದಿಪಡಿಸಲಾಗುತ್ತಿದೆ. ನಿಯೋಬಿಯಂ ಗಣಿಗಾರಿಕೆಗೆ ರಾಯಧನ ದರಗಳನ್ನು ಎಎಸ್​ಪಿಯ 3 ಪ್ರತಿಶತಕ್ಕೆ ಅನುಮೋದಿಸಲಾಗಿದೆ. ಅಪರೂಪದ ಭೂಮಿಯ ಆಕ್ಸೈಡ್​ನ ಸರಾಸರಿ ಮಾರಾಟ ಬೆಲೆಯ 1 ಪ್ರತಿಶತದಷ್ಟು ರಾಯಧನವನ್ನು ಆರ್​ಇಇಗೆ ನಿಗದಿಪಡಿಸಲಾಗಿದೆ.
ಆಮದು ಅವಲಂಬನೆ: ಭಾರತವು ಪ್ರಸ್ತುತ ತನಗೆ ಅಗತ್ಯವಿರುವ ಎಲ್ಲಾ ಲಿಥಿಯಂ ಅನ್ನು ಆಮದು ಮಾಡಿಕೊಳ್ಳುತ್ತದೆ. 2016-17 ಮತ್ತು 2019-20 ಹಣಕಾಸು ವರ್ಷಗಳ ನಡುವೆ ಅಂದಾಜು 3.3 ಬಿಲಿಯನ್ ಡಾಲರ್ (27,530 ಕೋಟಿ ರೂಪಾಯಿ) ಮೊತ್ತದ 165 ಕೋಟಿಗೂ ಅಧಿಕ ಲಿಥಿಯಂ ಬ್ಯಾಟರಿಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ. ಈ ಪೈಕಿ ಚೀನಾದಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗಿದೆ.
ಗಣಿಗಾರಿಕೆ ವಲಯದಲ್ಲಿ ಉದ್ಯೋಗಾವಕಾಶ:ಲಿಥಿಯಂ ಮತ್ತು ಆರ್​ಇಇ ರೀತಿಯ ನಿರ್ಣಾಯಕ ಖನಿಜಗಳು 2070ರ ವೇಳೆಗೆ ಶಕ್ತಿ ಪರಿವರ್ತನೆ ಮತ್ತು ಮಾಲಿನ್ಯ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಸಾಧಿಸುವ ಭಾರತದ ಬದ್ಧತೆಯ ದೃಷ್ಟಿಯಿಂದ ಮಹತ್ವವನ್ನು ಪಡೆದಿವೆ. ಸ್ಥಳೀಯವಾಗಿ ಈ ಖನಿಜಗಳ ಗಣಿಗಾರಿಕೆಯನ್ನು ಪೋ›ತ್ಸಾಹಿಸುವುದರಿಂದ ಆಮದು ಕಡಿಮೆ ಮಾಡಲು ಮತ್ತು ಸಂಬಂಧಿತ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಯೋಜನೆಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ಈ ಮೂಲಕ ಗಣಿಗಾರಿಕೆ ವಲಯದಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸುವ ನಿರೀಕ್ಷೆಯೂ ಕೇಂದ್ರ ಸರ್ಕಾರದ್ದಾಗಿದೆ. ಲಿಥಿಯಂ, ಆರ್​ಇಇ, ನಿಕಲ್, ಪ್ಲಾಟಿನಂ ಗ್ರೂಪ್ ಆಫ್ ಎಲಿಮೆಂಟ್ಸ್, ಪೊಟ್ಯಾಶ್, ಗ್ಲಾಕೊನೈಟ್, ಫಾಸ್ಪೊರೈಟ್, ಗ್ರಾ್ಯಫೈಟ್, ಮಾಲಿಬ್ಡಿನಮ್ಂತಹ ಮಹತ್ವದ ಮತ್ತು ಕಾರ್ಯತಂತ್ರದ ಖನಿಜಗಳ ಹರಾಜಿನ ಮೊದಲ ಹಂತವನ್ನು ಶೀಘ್ರದಲ್ಲೇ ಪ್ರಾರಂಭಿಸಲು ಕೇಂದ್ರ ಉದ್ದೇಶಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − eleven =
Remember me
