ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರ ಮಾನ್ಯತೆಯ ಶ್ರೇಯಾಂಕದಲ್ಲಿ ಮತ್ತೊಮ್ಮೆ ಮೊದಲ ಸ್ಥಾನ ಪಡೆದಿದ್ದಾರೆ. ಮೋದಿ ಅವರು ಶೇ. 75 ಅನುಮೋದನೆಯೊಂದಿಗೆ ಅಗ್ರ ಸ್ಥಾನ ಪಡೆದಿದ್ದಾರೆ ಎಂದು ಮಾರ್ನಿಂಗ್​ ಕನ್ಸಲ್ಟ್​ ಸಮೀಕ್ಷೆ ತಿಳಿಸಿದೆ.
ಮೆಕ್ಸಿಕೊದ ಅಧ್ಯಕ್ಷ ಆಂಡ್ರೆಸ್​ ಮ್ಯಾನುಯೆಲ್​ ಲೋಪೇಜ್​ ಒಬ್ರಡಾರ್​ ಮತ್ತು ಇಟಲಿಯ ಪ್ರಧಾನಿ ಮಾರಿಯೋ ಡ್ರಾಘಿ ಕ್ರಮವಾಗಿ ಶೇ.63 ಮತ್ತು ಶೇ. 54 ರೇಟಿಂಗ್​ಗಳೊಂದಿಗೆ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟು 32 ವಿಶ್ವ ನಾಯಕರ ಹೆಸರನ್ನು ಒಳಗೊಂಡಿರುವ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಶೇ.41 ರೇಟಿಂಗ್​ನೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಕೆನಡಾ ಅಧ್ಯಕ್ಷ ಜಸ್ಟಿನ್​ ಟ್ರುಡೊ ಶೇ.30, ಜಪಾನ್​ ಪ್ರಧಾನಿ ಫ್ಯೂಮಿಯೊ ಕಿಶಿಡಾ ಶೇ.38ರಷ್ಟು ರೇಟಿಂಗ್​ ಪಡೆದಿದ್ದಾರೆ. 2022ರ ಜನವರಿ ಮತ್ತು 2021ರ ನವೆಂಬರ್​ನಲ್ಲಿ ನಡೆದ ಸಮೀಕ್ಷೆಯಲ್ಲೂ ಪ್ರಧಾನಿ ಮೋದಿ ಅತ್ಯಂತ ಜನಪ್ರಿಯ ವಿಶ್ವನಾಯಕರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರು.
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಈ ಸರ್ವೇಯನ್ನು ನಡೆಸಲಾಗಿದ್ದು, ಆಯಾ ದೇಶಗಳಲ್ಲಿನ ವಯಸ್ಕರಿಂದ ಸುಮಾರು 7 ದಿನಗಳ ಕಾಲ ಸಂಗ್ರಹಿಸಿದ ಅಂಕಿ-ಅಂಶಗಳನ್ನು ಆಧರಿಸಿ ಈ ಫಲಿತಾಂಶ ಪ್ರಕಟಿಸಿದೆ.
ಏನಿದು ಮಾರ್ನಿಂಗ್​ ಕನ್ಸಲ್ಟ್​?:ಅಮೆರಿಕದ ಮಾನಿಂಗ್​ ಕನ್ಸಲ್ಟ್​ ಪೊಲಿಟಿಕಲ್​ ಇಂಟೆಲಿಜೆನ್ಸ್​ ಸಂಸ್ಥೆಯು ಪ್ರಸ್ತುತ ಆಸ್ಟ್ರೆಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಜರ್ಮನಿ, ಭಾರತ, ಮೆಕ್ಸಿಕೊ, ನೆದರ್ಲೆಂಡ್​, ದಣ ಕೊರಿಯಾ, ಸ್ಪೇನ್​, ಸ್ವೀಡನ್​ ಮತ್ತು ಅಮೆರಿಕದಲ್ಲಿ ಆಯಾಯ ದೇಶಗಳ ನಾಯಕರ ಅನುಮೋದನೆ ರೇಟಿಂಗ್​ಗಳನ್ನು ಟ್ರ್ಯಾಕ್​ ಮಾಡುವ ಕೆಲಸ ಮಾಡುತ್ತಿದೆ.
ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟ ಹೈಕೋರ್ಟ್

ತಂದೆ ಜತೆ ದೂರು ನೀಡಲು ಬಂದಿದ್ದ ಪತ್ನಿ, ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಕೊಂಡು ಠಾಣೆಗೆ ನುಗ್ಗಿದ ಪತಿ!

ಅತ್ಯಾಚಾರ ಆರೋಪಿಯನ್ನೇ ಮದ್ವೆಯಾದ ಯುವತಿ! ಪೋಕ್ಸೋ ಪ್ರಕರಣ ರದ್ದುಪಡಿಸಿದ ಹೈಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + one =
Remember me
