ಚೆನ್ನೈ:ತಮಿಳುನಾಡಿನಲ್ಲಿ ಬಸ್ಸು ಮತ್ತು ಬೈಕಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್​ ಸವಾರನ ಮೇಲೆ ಬಸ್ಸು ಹರಿದಿರುವ ಹಿನ್ನೆಲೆಯಲ್ಲಿ ಆತ ಮೃತನಾಗಿದ್ದಾನೆ. ಇನ್ನೋರ್ವ ವ್ಯಕ್ತಿ ಗಂಭೀರ ಗಾಯಾಳುವಾಗಿದ್ದು, ಸ್ಥಳೀಯರ ಆಕ್ರೋಶ ಹೆಚ್ಚಾಗಿದೆ.
ಇದನ್ನೂ ಓದಿ:ಅಮ್ಮನಿಗೆ 118 ಬಾರಿ ಚಾಕು ಇರಿದು ಕೊಂದ ಮಗ! ಪೊಲೀಸರಿಗೆ ಕರೆ ಮಾಡಿ ಬಾಡಿ ಬ್ಯಾಗ್​ ತರಲು ಹೇಳಿದ
ತಾಂಡುರೈ-ಪೂನಮಲ್ಲಿ ಹೈ ರಸ್ತೆಯ ಅಮುತುರ್ಮೇಡು ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಸೋಮವಾರ ಸಂಜೆ 6.15ರ ಸಮಯಕ್ಕೆ ಕಾರ್ತಿಕೇಯನ್​ ಹಾಗೂ ರಾಜೇಂದ್ರನ್​ ಬೈಕ್​ನಲ್ಲಿ ಸಂಸ್ಥೆಯಿಂದ ಮನೆಗೆ ವಾಪಾಸಾಗುತ್ತಿದ್ದರು. ಈ ಸಮಯದಲ್ಲಿ ಖಾಸಗಿ ಬಸ್ಸು ಬೈಕಿಗೆ ಡಿಕ್ಕಿ ಹೊಡೆದಿದೆ. ಕಾರ್ತಿಕೇಯನ್​ ಬಸ್ಸಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಾಜೇಂದ್ರನ್​ ಸ್ಥಿತಿ ಗಂಭೀರವಾಗಿದ್ದು, ಆತನಿಗೆ ಶ್ರೀ ರಾಮಚಂದ್ರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:ಎಲ್​ಪಿಜಿ ಸಿಲಿಂಡರ್​ ದರ ಹೆಚ್ಚಳ! ಈಗ ಎಷ್ಟು ಬೆಲೆ ತೆರಬೇಕು ಗೊತ್ತೇ?
ಅಪಘಾತ ಸಂಭವಿಸುತ್ತಿದ್ದಂತೆ ಗಾಬರಿಯಾದ ಬಸ್ಸಿನ ಚಾಲಕ, ಗಾಡಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸಿಟ್ಟಿಗೆದ್ದ ಸ್ಥಳೀಯರು ಬಸ್ಸಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎಂದು ವರದಿಯಾಗಿದೆ. ಬೆಂಕಿ ಹಚ್ಚುವಾಗ ಬಸ್ಸಿನಲ್ಲಿ ಪ್ರಯಾಣಿಕರಿರಲಿಲ್ಲ ಎನ್ನಲಾಗಿದೆ. (ಏಜೆನ್ಸೀಸ್​)
ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಸ್ನೇಕ್​ ಡ್ಯಾನಿ ದುರಂತ ಸಾವು: 75 ಬಾರಿ ಬಚಾವ್​ ಆದ್ರೂ ಬೆಂಬಿಡದ ಮೃತ್ಯು!

https://www.vijayavani.net/bride-leaves-from-marriage-hall/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
