ಹೊಸೂರು:ಕೃಷ್ಣಗಿರಿ ನಗರದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ 4.66 ಕೋಟಿ ರೂ.ಮೌಲ್ಯದ ನಕಲಿ ನೋಟುಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ತಮಿಳುನಾಡು ಹಾಗೂ ಆಂಧ್ರಮೂಲದ 11 ಮಂದಿಯನ್ನು ಬಂಧಿಸಿದ್ದಾರೆ.
50 ಲಕ್ಷ ರೂ. ಅಸಲಿ ನೋಟು ನೀಡಿದರೆ 2 ಕೋಟಿ ರೂ.ನಕಲಿ ನೋಟು ನೀಡುವ ವ್ಯವಹಾರ ಮಾಡುತ್ತಿದ್ದ ಆರೋಪಿಗಳು ಕಲರ್ ಜೆರಾಕ್ಸ್ ಮೂಲಕ ನಕಲಿ ನೋಟು ಮುದ್ರಿಸುತ್ತಿದ್ದರು. ಇದಕ್ಕಾಗಿಯೇ ತಂಡ ಕಟ್ಟಿಕೊಂಡಿದ್ದ ಆರೋಪಿಗಳು ಪರಿಚಯಸ್ಥರ ಮೂಲಕ ವ್ಯವಹಾರ ಕುದುರಿಸುತ್ತಿದ್ದರು. ಅಸಲಿ ನೋಟಿನಂತೆ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಖದೀಮರು ಕೆಲವು ವರ್ಷಗಳಿಂದ ದಂಧೆಯಲ್ಲಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಕಾರಿನಲ್ಲೇ ಓಡಾಟ:ಕೃಷ್ಣಗಿರಿ ನಗರದ ರಾಯಕೋಟ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಐದಾರು ಕಾರುಗಳು ನಿಂತಿರುವುದು ಪೊಲೀಸರ ಕಣ್ಣಿಗೆ ಬಿದ್ದಿತ್ತು. ಪೊಲೀಸರನ್ನು ಗಮನಿಸಿದ ಆರೋಪಿಗಳು ಕಾರನ್ನು ತೆಗೆದುಕೊಂಡು ಸ್ಪಲ್ಪ ದೂರಕ್ಕೆ ಹೋಗಿ ಮತ್ತೆ ಅಲ್ಲಿ ಪಾರ್ಕ್ ಮಾಡಿ ರಹಸ್ಯವಾಗಿ ಮಾತನಾಡುತ್ತಿದ್ದರು. ಕಾರುಗಳನ್ನೇ ಹಿಂಬಾಲಿಸಿದ ಪೊಲೀಸರು ಆರೋಪಿಗಳನ್ನು ಸುತ್ತುವರಿದು ಪ್ರಶ್ನಿಸಿದಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅನುಮಾನ ಬಲಗೊಂಡ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ತನಿಖೆ ನಡೆಸಿದ ವೇಳೆ ನಕಲಿ ನೋಟು ದಂಧೆ ಬೆಳಕಿಗೆ ಬಂದಿದೆ.
ಕಷ್ಟಗಿರಿ ಜಿಲ್ಲೆ ರಾಯಕೋಟೆ ರಸ್ತೆಯ ಶಂಕರ್ (28), ಕೇರಳದ ಜೋಸ್ (30), ಈರೋಡಿನ ಮುರುಗೇಶನ್ (32) ಕಾವೇರಿಪಟ್ಟಣಂ ನಿವಾಸಿ ನಾಗರಾಜ್ (35) ಸೇರಿ 11 ಮಂದಿಯನ್ನು ಪೊಲೀಸರು ಬಂದಿಸಿದ್ದಾರೆ. ಬಂಧನದ ಬಳಿಕ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದ ವೇಳೆ ಕೋಟ್ಯಂತರ ರೂಪಾಯಿ ನಕಲಿ ನೋಟುಗಳನ್ನು ದಾಸ್ತಾನು ಮಾಡಿರುವುದು ಪೊಲೀಸರಿಗೆ ಕಂಡುಬಂದಿದೆ. ನಕಲಿ ನೋಟುಗಳನ್ನು ಜಪ್ತಿ ಮಾಡಿರುವ ಕೃಷ್ಣಗಿರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಡಿಎಸ್ಪಿ ಶರವಣನ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕುಡಿವ ನೀರಲ್ಲಿ ಸತ್ತ ಮಹಿಳೆ ಕಾಲು ಪತ್ತೆ: ದೇಹದ ಉಳಿದ ಭಾಗವೆಲ್ಲಿ? ಖಾಕಿಗೆ ಕಗ್ಗಂಟಾದ ಕೇಸ್​

ಬಹಿರ್ದೆಸೆಗೆಂದು ಹೋದ ಅಣ್ಣ-ತಮ್ಮ ಇಬ್ಬರೂ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆ!

ಜೂಜು ಅಡ್ಡೆ ಮೇಲೆ ದಾಳಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಜಿಗಿದಿದ್ದ ವ್ಯಕ್ತಿ ಸಾವು

ಮಗು ಸಾಯುವ ಭಯದಲ್ಲಿ 8 ತಿಂಗಳ ಗರ್ಭಿಣಿ ಆತ್ಮಹತ್ಯೆ! ಈ ಸಾವಿಗೆ ಹಿಂದಿನ ದುರ್ಘಟನೆಯೇ ಕಾರಣವಾಯ್ತಾ?

ಮದ್ವೆಯಾದ 6 ತಿಂಗಳಿಗೆ ಯುವತಿ ದುರಂತ ಸಾವು: ಗಂಡನಿಗೆ ಹಣದಾಹ, ಮೈದುನನಿಗೆ ಕಾಮದಾಹ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
