ಅಹಮದಾಬಾದ್​:ಪೌರಾಣಿಕ ಧಾರಾವಾಹಿ ‘ರಾಮಾಯಣ’ದಲ್ಲಿ ರಾವಣನ ಪಾತ್ರ ನಿರ್ವಹಿಸಿದ್ದ ಅರವಿಂದ ತ್ರಿವೇದಿ ಅವರು ಮಂಗಳವಾರ ರಾತ್ರಿ ನಿಧನರಾದರು. ಇವರಿಗೆ 82 ವರ್ಷ ವಯಸ್ಸಾಗಿತ್ತು.
ಬಿಜೆಪಿಯ ಮಾಜಿ ಸಂಸದರೂ ಆದ ತ್ರಿವೇದಿ, ಗುಜರಾತಿ ಸಿನಿಮಾದ ಭೀಷ್ಮ ಎಂದೇ ಖಾತಿಯಾಗಿದ್ದರು. ಗುಜರಾತಿ ರಂಗಭೂಮಿಯಿಂದ ಆರಂಭವಾದ ತ್ರಿವೇದಿ ಅವರ ಸಿನಿ ಜರ್ನಿ, ನಾಲ್ಕು ದಶಕಕಾಲ ಸಿನಿಮಾ ರಂಗದಲ್ಲೇ ಮುಂದುವರಿಯಿತು. ಹಿಂದಿ ಮತ್ತು ಗುಜರಾತಿ ಭಾಷೆಯಲ್ಲಿ ಸುಮಾರು 300 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ರಾಷ್ಟ್ರಮಟ್ಟದಲ್ಲಿ ಇವರನ್ನು ಗುರುತಿಸುವಂತೆ ಮಾಡಿದ್ದು, ಹಿಂದಿ ಭಾಷೆಯಲ್ಲಿ ಪ್ರಸಾರವಾದ ರಾಮಾಯಣ ಧಾರಾವಾಹಿಯ ರಾವಣ ಪಾತ್ರ. ‘ವಿಕ್ರಮ್​ ಔರ್​ ಬೇತಾಳ್’​ ಧಾರಾವಾಯಿಯಲ್ಲೂ ಇವರ ಅಭಿನಯ ಜನ ಮನ್ನಣೆ ಪಡೆದಿತ್ತು.
ಸಬರ್​ಕಂಟಾ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ 1991ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತ್ರಿವೇದಿ ಅವರು ಜಯಶಾಲಿಯಾಗಿದ್ದರು. ಕರೊನಾ ಲಾಕ್​ಡೌನ್​ ವೇಳೆ ‘ರಾಮಾಯಣ’ ಧಾರಾವಾಹಿಯನ್ನು ಮರುಪ್ರಸಾರ ಮಾಡಿದಾಗ ಈ ಸೀರಿಯಲ್​ ನಟರೆಲ್ಲರೂ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದರು.
#RIP#ArvindTrivedi🙏
Veteran Gujarati actor, former lawmaker,#Ravanof#Ramayan, Arvind Trivedi passed away at the age of 82.#RestInPeace#OMShantiOm Shanti!pic.twitter.com/TfdQXzUuNg
— Movies N Memories (@BombayBasanti)October 6, 2021

ಇತ್ತೀಚಿಗೆ ಅನಾರೋಗ್ಯಕ್ಕೀಡಾಗಿದ್ದ ತ್ರಿವೇದಿ ಅವರು ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಕೊನೆಯುಸಿರೆಳೆದರು.
ಮಾಲೀಕನ ಎಡವಟ್ಟಿಗೆ ರಾತ್ರೋರಾತ್ರಿ 32 ಕುಟುಂಬಗಳನ್ನ ಬೀದಿಗೆ ದಬ್ಬಿ ಮನೆಗಳಿಗೆ ಬೀಗ ಜಡಿದ ಬ್ಯಾಂಕ್ ಅಧಿಕಾರಿಗಳು

ಹಲ್ಲುಗಳಿಗೆ ಕ್ಲಿಪ್​ ಹಾಕಿಸಲು ಆಸ್ಪತ್ರೆಗೆ ಹೋದ ಯುವಕ ಸಾವು! ಕೋಮಾಗೆ ದೂಡಿ ಸಾವಿಗೆ ಕಾರಣವಾದ್ರಾ ವೈದ್ಯರು?

ಬಿಜೆಪಿ ಮುಖಂಡರು ಯಾರಾದ್ರೂ ಸತ್ತರೆ ಕಾಂಗ್ರೆಸ್​ನಿಂದ 1 ಕೋಟಿ ರೂ. ಪರಿಹಾರ ಕೊಡ್ತೀವಿ: ಶಾಸಕ ಬಯ್ಯಾಪೂರ

ಸಾರಿಗೆ ಬಸ್​ ಡ್ರೈವರ್​-ಕಂಡಕ್ಟರ್​ ಮೇಲೆ ಡಿಪೋ ಮ್ಯಾನೇಜರ್​ ದಬ್ಬಾಳಿಕೆ: ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eleven =
Remember me
