ಚಂಡಿಗಢ: ಪ್ರವಾಸಿ ತಾಣ ವೀಕ್ಷಣೆಗೆ ಬಂದಿದ್ದ ಎಂಟು ಮಂದಿ ಪ್ರವಾಸಿಗರು ಕೇಬಲ್​​ ಕಾರಿನಲ್ಲಿ ಸಿಲುಕಿದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಪುರ್ವಾನೋ ಪ್ರವಾಸಿ ತಾಣ ವೀಕ್ಷಣೆಗೆ ಬಂದಿದ್ದ ವೇಳೆ ಮಧ್ಯದಲ್ಲೇ ಕೇಬಲ್​ ಕಾರು ನಿಂತುಹೋಗಿದೆ. ಇದರಿಂದ ಕಂಗಾಲಾದ ಪ್ರವಾಸಿಗರ ರಕ್ಷಣೆಗೆ ಸೇನೆ ಹೆಲಿಕಾಪ್ಟರ್​​ನೊಂದಿಗೆ ಧಾವಿಸಿತು.
ಸೋಮವಾರ ಮಧ್ಯಾಹ್ನ ರಕ್ಷಣಾ ಕಾರ್ಯಾಚರಣೆ ಕೈಗೊಂಡಿರುವ ಸೇನೆ ಕೊನೆಗೂ ಎಂಟು ಮಂದಿಯನ್ನು ಹೆಲಿಕಾಪ್ಟರ್​ ಮೂಲಕ ಪ್ರವಾಸಿಗರನ್ನು ರಕ್ಷಿಸಲಾಯಿತು.
ಪುರ್ವಾನೋದಲ್ಲಿರುವ ಪ್ರಸಿದ್ಧ ಖಾಸಗಿ ರೆಸಾರ್ಟ್​ ವೀಕ್ಷಣೆಗೆ ಇದೇ ಕೇಬಲ್​ ಕಾರು ಮೂಲಕ ಹೋಗಲಾಗುತ್ತದೆ. ಈ ವೇಳೆ ತಾಂತ್ರಿಕ ದೋಷದಿಂದ ಅರ್ಧದಲ್ಲೇ ನಿಂತು ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಳೆದ ಏಪ್ರಿಲ್​ ತಿಂಗಳಿನಲ್ಲಿ ಜಾರ್ಖಂಡ್​​ನಲ್ಲಿ ಕೇಬಲ್​ ಕಾರು ದುರಂತ ಸಂಭವಿಸಿತ್ತು. ಈ ವೇಳೆ ಮೂವರು ಮೃತಪಟ್ಟಿದ್ದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − four =
Remember me
