ನವದೆಹಲಿ:ಸೀರೆ ಭಾರತೀಯ ಸಂಪ್ರದಾಯದ ಉಡುಗೆ. ದೇಶ ಮಾತ್ರವಲ್ಲದೆ ವಿದೇಶಿ ಹೆಣ್ಣು ಮಕ್ಕಳೂ ಸಹ ಸಂತಸದಿಂದ ತೊಡುವ ಸೀರೆಯನ್ನು ಉಟ್ಟು ಹೋಗಿದ್ದಕ್ಕೆ ರೆಸ್ಟೋರೆಂಟ್​ನಲ್ಲಿ ರೂಂ ಕೊಡಲು ನಿರಾಕರಿಸುವ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರಸಿದ್ಧ ಕೈಲಿನ್​ ಮತ್ತು ಐವಿ ರೆಸ್ಟೋರೆಂಟ್​ನಲ್ಲಿ ಸೀರೆ ಉಟ್ಟ ಮಹಿಳೆಗೆ ನೀವು ಸೀರೆ ಉಟ್ಟು ಬಂದಿರುವುದರಿಂದ ನಿಮಗೆ ರೂಂ ಕೊಡಲಾಗುವುದಿಲ್ಲ ಎಂದಿರುವ ವಿಡಿಯೋ ಇದೀಗ ಸಖತ್​ ವೈರಲ್​ ಆಗಿದೆ.
ಗುರುಗಾಂವ್​ನ ಪಾಥ್​ವೇಸ್​ ಸೀನಿಯರ್​ ಸ್ಕೂಲ್​ನ ಪ್ರಾಂಶುಪಾಲಕಿಯಾಗಿರುವ ಸಂಗೀತ ಕೆ. ನಾಗ್​ ಮಾರ್ಚ್​ 10ರಂದು ಕೈಲಿನ್​ ಮತ್ತು ಐವಿ ರೆಸ್ಟೋರೆಂಟ್​ಗೆ ತೆರಳಿದ್ದಾರೆ. ಆದರೆ ಆಕೆಯನ್ನು ರೆಸ್ಟೋರೆಂಟ್​ನಲ್ಲಿ ತಡೆಯಲಾಗಿದೆ. ನೀವು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದಿರುವ ಕಾರಣ ನಿಮಗೆ ಇಲ್ಲಿ ಅನುಮತಿ ಇಲ್ಲ ಎಂದು ಅಲ್ಲಿನ ಸಿಬ್ಬಂದಿ ತಡೆದಿದ್ದಾನೆ. ಇದನ್ನು ವಿಡಿಯೋ ಮಾಡಲಾಗಿದ್ದು ಸಂಗೀತ ಅವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸಾಂಪ್ರದಾಯಿಕೆ ಉಡುಗೆ ಎಂಬ ಕಾರಣಕ್ಕೆ ನಿರಾಕರಿಸಿದ್ದಾರೆ. ಭಾರತದಲ್ಲಿರುವ ರೆಸ್ಟೋರೆಂಟ್​ಗಳಲ್ಲಿ ಸ್ಮಾರ್ಟ್​ ಕ್ಯಾಶುಯಲ್​ಗಳನ್ನು ಅನುಮತಿಸಲಾಗುತ್ತದೆ ಆದರೆ ಭಾರತೀಯ ಉಡುಗೆಯನ್ನಲ್ಲ! ಭಾರತೀಯನೆಂದು ಹೆಮ್ಮೆ ಪಡಲು ಏನುಳಿದಿದೆ? ಎಂದು ಟ್ವೀಟ್​ನಲ್ಲಿ ಅವರು ಪ್ರಶ್ನಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿತ್ತಿದ್ದಂತೆ ಎಚ್ಚೆತ್ತುಕೊಂಡ ಕೈಲಿನ್​ ಮತ್ತು ಐವಿ ರೆಸ್ಟೋರೆಂಟ್​ನ ನಿರ್ದೇಶಕ ಸೌರಭ್​ ಖನಿಜೋ, ತಮ್ಮ ರೆಸ್ಟೋರೆಂಟ್​ನ ಸಿಬ್ಬಂದಿಯ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಇದು ಆತನ ತಪ್ಪು ಗ್ರಹಿಕೆಯಷ್ಟೇ, ನಮ್ಮಲ್ಲಿ ಭಾರತೀಯ ಉಡುಗೆ ನಿಷಿದ್ಧ ಎನ್ನುವುದಿಲ್ಲ. ನಾವು ಸ್ಲಿಪ್ಪರ್​ ಮತ್ತು ಶಾರ್ಟ್ಸ್​ ತೊಟ್ಟವರಿಗೆ ಒಳಗೆ ಅನುಮತಿ ನೀಡುವುದಿಲ್ಲವಷ್ಟೇ. ಅದನ್ನು ರೆಸ್ಟೋರೆಂಟ್​ನ ಗೇಟ್​ನಲ್ಲೇ ಹಾಕಿದ್ದೇವೆ. ನಮ್ಮ ಸಿಬ್ಬಂದಿ ಮಾಡಿರುವ ತಪ್ಪಿಗೆ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ. ಸಂಗೀತಾ ಅವರಿಗೆ ಈ ರೀತಿಯ ಕ್ಷಮಾಪಣಾ ಸಂದೇಶವನ್ನು ಅವರು ಕಳಿಸಿದ್ದನ್ನು ಸಂಗೀತಾ ಅವರು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಚಾರವಾಗಿ ಕಾಂಗ್ರೆಸ್​ನ ಶರ್ಮಿಸ್ತಾ ಮುಖರ್ಜಿ ಕೂಡ ಟ್ವೀಟ್​ ಮಾಡಿದ್ದು, “ಕೈಲಿನ್​ ಮತ್ತು ಐವಿ ಅಥವಾ ಇನ್ನಾವುದೇ ರೆಸ್ಟೋರೆಂಟ್​ನಲ್ಲಿ ಭಾರತೀಯ ಉಡುಗೆ ಧರಿಸಲು ಅತಿಥಿಗಳಿಗೆ ಅವಕಾಶ ನೀಡದಂತಹ ವಸಾಹತುಶಾಹಿ ಪದ್ಧತಿಯನ್ನು ಅನುಸರಿಸಿದ್ದೇ ಆದಲ್ಲಿ ಅವರ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು” ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ರ ಬಳಿ ಕೇಳಿಕೊಂಡಿದ್ದಾರೆ.(ಏಜೆನ್ಸೀಸ್​)
@bishnoikuldeepMy shocking experience with discrimination at Kylin and Ivy, Ambience Vasant Kunj this evening. Denied entry as ethnic wear is not allowed! A restaurant in India allows ‘smart casuals’ but not Indian wear! Whatever happened to pride in being Indian? Take a stand!pic.twitter.com/ZtJJ1Lfq38
— Sangeeta K Nag (@sangeetaknag)March 10, 2020

ಎರಡೇ ರೂಪಾಯಿಗೆ ಸಿಗುತ್ತೆ ಮಾಸ್ಕ್​; ಲಾಭದ ಮುಖ ನೋಡದೆ ಮಾನವೀಯತೆ ಮೆರೆಯುತ್ತಿರುವ ಮೆಡಿಕಲ್​ ಶಾಪ್​

ಇಲಿ ಮಾಂಸ ಮಾರಾಟ ನಿಲ್ಲಿಸಿದ್ದಕ್ಕೆ ಗೋಳಿಡುತ್ತಿದೆ ಚೀನಾ; ಭಾರತಕ್ಕೆ ಕರೊನಾ ಚಿಂತೆಯಾದರೆ ಚೀನಾಕ್ಕೆ ಇಲಿ ಚಿಂತೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − 14 =
Remember me
