ಪಟನಾ:ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿರುವ ಕಾಂಗ್ರೆಸ್​ ಶುಕ್ರವಾರ ಪಕ್ಷದ ಶಾಸಕಾಂಗ ಸಭೆ ನಡೆಸಿದೆ. ಈ ವೇಳೆ ಇಬ್ಬರು ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಗದ್ದಲ ಉಂಟಾಗಿದೆ.
ಇದನ್ನೂ ಓದಿ:ಕುಮಾರಸ್ವಾಮಿ – ಸಿಎಂ ಬಿಎಸ್​ವೈ ದಿಢೀರ್ ಭೇಟಿ!ಶಾಸಕ ವಿಜಯ್​ ಶಂಕರ್​ ದುಬೆ ಮತ್ತು ಸಿದ್ಧಾರ್ಥ ಅವರ ನಡುವೆ ಜಗಳ ಉಂಟಾಗಿದೆ. ಜಗಳ ಸ್ವಲ್ಪ ಹೆಚ್ಚಾಗಿಯೇ ನಡೆದಿದ್ದು, ಕೆಲ ಕಾರ್ಯಕರ್ತರು ಮತ್ತು ನಾಯಕರು ತಳ್ಳಾಡಿಕೊಳ್ಳುವ ವಿಡಿಯೋ ಎಲ್ಲೆಡೆ ಹರಿದಾಡಿದೆ. ಛತ್ತೀಸಗಢ ಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕ ಭೂಪೇಶ್​ ಬಾಗೇಲ್​ ಅವರ ಉಪಸ್ಥಿತಿಯಲ್ಲೇ ಈ ಗದ್ದಲ ನಡೆದಿದೆ ಎನ್ನಲಾಗಿದೆ.
ಪಕ್ಷದ ಕಚೇರಿಯಲ್ಲಿ ಇಷ್ಟೆಲ್ಲ ಗದ್ದಲವಾದರೂ ತನಗೆ ಗದ್ದಲ ನಡೆದಿದ್ದೇ ಗೊತ್ತಿಲ್ಲ ಎಂದು ಪಕ್ಷದ ಅಧ್ಯಕ್ಷ ಮದನ್​ ಮೋಹನ್​ ಝಾ ಹೇಳಿದ್ದಾರೆ. ಈ ವಿಚಾರವಾಗಿ ನಾನು ನಂತರ ತಿಳಿದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ. ಸಭೆಯಲ್ಲಿ ಶಾಸಕ ಅಬಿದೂರ್​ ರೆಹಮಾನ್​ ಮತ್ತು ಮನೋಹರ್​ ಪ್ರಸಾದ್​ ಅವರು ಭಾಗವಹಿಸದಿರುವುದರ ಹಿಂದೆ ಬೇರೇನು ಅರ್ಥವಿಲ್ಲ. ಅದರಲ್ಲಿ ಒಬ್ಬರಿಗೆ ಆರೋಗ್ಯ ಸರಿಯಿಲ್ಲ ಹಾಗೂ ಮತ್ತೊಬ್ಬರು ನಿನ್ನೆಯಷ್ಟೇ ನಮ್ಮನ್ನು ಭೇಟಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಮಾಜಿ ನಾಯಕ ಕಪಿಲ್ ದೇವ್ ಹೇಳಿದ ಹೃದಯದ ಮಾತು..ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್​ ಕಳಪೆ ಪ್ರದರ್ಶನ ತೋರಿದೆ. 70 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಪಕ್ಷ ಕೇವಲ 19 ಸ್ಥಾನಗಳಲ್ಲಿ ಜಯ ಗಳಿಸಿದೆ. ಕಾಂಗ್ರೆಸ್​ನಿಂದಲೇ ಮಹಾಘಟಬಂಧನಕ್ಕೆ ಹಿನ್ನೆಡೆಯಾಗಿದ್ದಾಗಿ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
#WATCH| Bihar: A ruckus erupted at Congress office in Patna during Congress Legislative Party meeting (CLP) today; Chhattisgarh CM & party leader Bhupesh Baghel was also present.pic.twitter.com/B2DQBHkezC
— ANI (@ANI)November 13, 2020

ಮುಖ್ಯಮಂತ್ರಿ ವಿರುದ್ಧ ಪ್ರಧಾನಿಗೆ ಪತ್ರ ಬರೆದಿದ್ದಕ್ಕೆ ಮಾಜಿ ಸಚಿವರನ್ನು ವಜಾ ಮಾಡಿದ ಬಿಜೆಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 4 =
Remember me
