ಗುಜರಾತ್​:19 ವರ್ಷದೊಳಿಗಿನ ಕ್ರಿಕೆಟ್ ತಂಡದ ಮಾಜಿ ನಾಯಕ, ಸೌರಾಷ್ಟ್ರ ರಣಜಿ ತಂಡದ​ ಆಟಗಾರ ಅವಿ ಬರೋಟ್​ ಶಕ್ರವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟರು. ಇವರಿಗೆ ಕೇವಲ 29 ವರ್ಷ ವಯಸ್ಸಾಗಿತ್ತು.
ಸೌರಾಷ್ಟ್ರ ರಣಜಿ ತಂಡದ ಆಟಗಾರರಾಗಿದ್ದ ಅವಿ ಬರೋಟ್​, ವಿಕೆಟ್ ಕೀಪರ್, ಬ್ಯಾಟ್ಸ್​ಮನ್​ ಆಗಿದ್ದರು. ಇವರು ಒಟ್ಟು 21 ರಣಜಿ ಪಂದ್ಯವನ್ನಾಡಿದ್ದರು. 2011 ಮತ್ತು 2020ರಲ್ಲಿ ಸೌರಾಷ್ಟ್ರ ತಂಡದ ನಾಯಕರಾಗಿದ್ದರು. 2019-20ನೇ ಸಾಲಿನಲ್ಲಿ ರಣಜಿ ಟ್ರೋಫಿಗೆದ್ದ ಸೌರಾಷ್ಟ್ರ ತಂಡದಲ್ಲಿ ಇವರು ಆಟವಾಡಿದ್ದರು. 17 ಲಿಸ್ಟ್​ ಎ ಮತ್ತು 11 ದೇಶೀಯ ಟಿ-20 ಪಂದ್ಯವನ್ನೂ ಆಡಿದ್ದಾರೆ.
ಅವಿ ಬರೋಟ್​ ನಿಧನಕ್ಕೆ ಸಂತಾಪ ಸೂಚಿಸಿರುವ ಸೌರಾಷ್ಟ್ರ ಕ್ರಿಕೆಟ್​ ಸಂಸ್ಥೆ, ‘ಅವಿ ಒಬ್ಬ ಅಸಾಧಾರಣ ಮತ್ತು ಗಮನಾರ್ಹ ಕ್ರಿಕೆಟಿಗ. ಅವರ ಅಕಾಲಿಕ ನಿಧನ ತುಂಬಲಾರದ ನಷ್ಟ’ ಎಂದು ಟ್ವೀಟ್​ ಮಾಡಿದೆ.
ಈ ವರ್ಷ ಐಪಿಎಲ್ ಗೆಲ್ಲಲು ಕೆಕೆಆರ್ ಅರ್ಹವಾಗಿತ್ತು: ಎಂ.ಎಸ್​.ಧೋನಿ

ಬೇಯಿಸಿದ ಮೊಟ್ಟೆ ತಿಂದು ಪ್ರಾಣಬಿಟ್ಟ ಮಹಿಳೆ! ಮೊಟ್ಟೆ ಪ್ರಿಯರನ್ನ ಬೆಚ್ಚಿಬೀಳಿಸುತ್ತೆ ಈ ಘಟನೆ

ವೇದಿಕೆಯಲ್ಲಿ ನಿಂತಿದ್ದ ವಧು-ವರರಿಗೆ ಪೆಟ್ರೋಲ್​ ಕೊಟ್ಟ ಸ್ನೇಹಿತರು! ಅರೆಕ್ಷಣ ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − ten =
Remember me
