ತಮಿಳುನಾಡು:ಮಕ್ಕಳಿಗೆ ಸರಿ-ತಪ್ಪುಗಳ ವಿವೇಚನೆಯ ಪಾಠ ಮಾಡುತ್ತಾ ಬದುಕಿನ ದಾರಿ ತೋರಬೇಕಿದ್ದ ಶಿಕ್ಷಕಿಯೇ ಮಾಡಬಾರದ್ದು ಮಾಡಿ ಜೈಲು ಸೇರಿದ್ದಾಳೆ. ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಬ್ಬನನ್ನು ಪ್ರೀತಿಸಿ ಬೇರೆಡೆಗೆ ಕರೆದೊಯ್ದು ದೇವಸ್ಥಾನದಲ್ಲಿ ಮದ್ವೆ ಆಗಿದ್ದಾಳೆ!
ಇಂತಹ ವಿಲಕ್ಷಣ ಘಟನೆ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿಯನ್ನ ಕರೆದೊಯ್ದು ಮದ್ವೆಯಾದ ಶಿಕ್ಷಕಿ ಹೆಸರು ಶರ್ಮಿಳಾ. ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು. 11ನೇ ತರಗತಿ ಓದುತ್ತಿದ್ದ 17 ವರ್ಷದ ಬಾಲಕ ಮಾರ್ಚ್​ 5ರಂದು ಕಾಲೇಜಿಗೆ ಹೋದವ ವಾಪಸ್​ ಮನೆಗೆ ಬಂದಿರಲಿಲ್ಲ. ಮಗನಿಗಾಗಿ ಹಲವೆಡೆ ಹುಡುಕಾಡಿದ ಪಾಲಕರು ಆತಂಕಗೊಂಡು ಪೊಲೀಸ್​ ಠಾಣೆಯಲ್ಲಿ ಮಿಸ್ಸಿಂಗ್​ ಕೇಸ್​ ದಾಖಲಿಸಿದ್ದರು. ದೂರಿನ ಜಾಡು ಹಿಡಿದು ತನಿಖೆ ನಡೆಸಲು ಶಾಲೆಗೆ ಪೊಲೀಸರು ಬಂದಾಗ, ಮಾ.5ರಿಂದ ಶಿಕ್ಷಕಿ ಶರ್ಮಿಳಾ ಕೂಡ ಶಾಲೆಗೆ ಬರುತ್ತಿಲ್ಲ ಎಂಬುದು ಗೊತ್ತಾಗಿದೆ.
ಈ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಶಿಕ್ಷಕಿ ಶರ್ಮಿಳಾ ಜತೆ ಬಾಲಕ ಮನೆಯಲ್ಲಿ ಗಂಟೆಗಟ್ಟಲೇ ಫೋನ್​ನಲ್ಲಿ ಮಾತಾಡುತ್ತಿದ್ದ ಎಂಬ ಮಾಹಿತಿಯನ್ನ ಆತನ ಪಾಲಕರು ಹೇಳಿದ್ದರು. ಅತ್ತ ಬಾಲಕನ ಮತ್ತು ಶಿಕ್ಷಕಿ ಇಬ್ಬರ ಮೊಬೈಲ್​ ಕೂಡ ಸ್ವಿಚ್ಡ್​ ಆಫ್​ ಆಗಿತ್ತು. ಇಷ್ಟಕ್ಕೆ ಸುಮ್ಮನಾಗದ ಪೊಲೀಸರು ಶಿಕ್ಷಕಿಯ ಸಂಬಂಧಿ, ಸ್ನೇಹಿತರ ಮನೆಗಳನ್ನೂ ಹುಡುಕಾಡುತ್ತಿದ್ದರು. ಆದರೂ ಅವರೆಲ್ಲಿದ್ದಾರೆ ಎಂಬ ಸಣ್ಣ ಸುಳಿವೂ ಸಿಕ್ಕಿರಲಿಲ್ಲ.
ಪ್ರೀತಿಯ ಬಲೆಗೆ ವಿದ್ಯಾರ್ಥಿಯನ್ನು ಬೀಳಿಸಿಕೊಂಡ ಶಿಕ್ಷಕಿ, ತಂಜಾವೂರಿಗೆ ಆತನನ್ನು ಕರೆದೊಯ್ದು ಕೆಲ ದಿನ ಅಲ್ಲೇ ನೆಲೆಸಿದ್ದಳು. ತಂಜಾವೂರಿನ ದೇವಸ್ಥಾನದಲ್ಲೇ ಬಾಲಕನ್ನು ಮದುವೆ ಆಗಿ ಸ್ನೇಹಿತೆಯ ಮನೆಯಲ್ಲಿ ವಾಸವಿದ್ದಳು. ಇತ್ತೀಚಿಗೆ ತಿರುಚಿಗೆ ಬಂದು ಮನೆಯಲ್ಲಿದ್ದರು. ಹಳೇ ಸಿಮ್​ ತೆಗೆದು ಹೊಸ ಸಿಮ್​ ಹಾಕಿ ಮೊಬೈಲ್​ ಆನ್​ ಮಾಡುತ್ತಿದ್ದಂತೆ ಪೊಲೀಸರಿಗೆ ಇವರಿಬ್ಬರೂ ಎಲ್ಲಿದ್ದಾರೆ ಎಂಬ ಸುಳಿವು ಸಿಕ್ಕಿದ್ದು, ಮಾ.24ರಂದು ಪೊಲೀಸರು ಶಿಕ್ಷಕಿಯನ್ನು ಪೋಸ್ಕೋ ಕಾಯ್ದೆಯಡಿ ಬಂಧಿಸಿದ್ದಾರೆ. ಬಾಲಕನನ್ನು ಬಾಲಮಂದಿರದಲ್ಲಿ ಇರಿಸಲಾಗಿದೆ.
ಮೂರು ಮದ್ವೆ ಆದ್ರೂ ಮುಗಿಯದ ಚೆಲ್ಲಾಟ! 3ನೇ ಗಂಡನಿಗೆ ಪ್ರಾಣಸಂಕಟ

ಮಾ.28ರಿಂದ ಎಸ್ಸೆಸ್ಸೆಲ್ಸಿ ಎಕ್ಸಾಂ: ಹಿಜಾಬ್​ ಧರಿಸಿ ಬಂದ್ರೆ ಪರೀಕ್ಷೆಗಿಲ್ಲ ಅವಕಾಶ

ಕುಡಿದು ಸಿಟ್ಟಿನಿಂದ ಸಿಎಂಗೆ ಬೈದಿದ್ದೀನಿ… ದಯವಿಟ್ಟು ಕ್ಷಮಿಸಿ: ಶಾಬಾಜ್​ ಉಲ್ಲಾಖಾನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
