ನಕ್ಸಲ್​ ಪೀಡಿತ ಛತ್ತೀಸ್​ಗಢ್​ದಲ್ಲಿ ಮಾವೋವಾದಿಗಳು ಆಗಾಗ ನಾಗರಿಕರನ್ನು ಹತ್ಯೆಮಾಡುತ್ತಾರೆ. ಆದರೆ ಇದೀಗ ವಿಚಿತ್ರ ಘಟನೆಯೊಂದು ನಡೆದಿದೆ.
ಬಿಜಾಪುರದ ಬಸ್ತಾರ್​​​ನಲ್ಲಿ ನಾಗರಿಕರ ಹತ್ಯೆಗೆ ಕಾರಣನಾಗಿದ್ದ ಮಾವೋವಾದಿ ನಾಯಕನನ್ನು ಅವನ ಅಧೀನ ಕಾರ್ಯಕರ್ತರೇ ಗುಂಡು ಹೊಡೆದು ಕೊಂದಿದ್ದಾರೆ.
ಬಸ್ತಾರ ವಲಯದ ಐಜಿಪಿ ಈ ಬಗ್ಗೆ ಮಾಹಿತಿ ನೀಡಿದ್ದು, ಬಿಜಾಪುರದ ಗಂಗಲೂರು ಸಮಿತಿ ಉಸ್ತುವಾರಿ, ವಿಭಾಗೀಯ ಸಮಿತಿ ಸದಸ್ಯ ಮೊಡಿಯಂ ವಿಜ್ಜಾನನ್ನು ಅವನ ಕೆಳಗಿನ ಕಾರ್ಯಕರ್ತರೇ ಕೊಂದ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಸಿಕ್ಕಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ಸೋಂಕಿದ್ದರೂ ಲಕ್ಷಣಗಳಿಲ್ಲ; ಕರೊನಾ ವೈರಸ್​ನಲ್ಲಿದ್ಯಂತೆ ನೋವು ನಿವಾರಕ!
ಬಿಜಾಪುರದ ಪಶ್ಚಿಮ ಬಸ್ತಾರ್​ನ ಗಂಗಲೂರ್​ ಏರಿಯಾದಲ್ಲಿ ಹಲವು ನಾಗರಿಕ ಹತ್ಯೆ ಪ್ರಕರಣದಲ್ಲಿ ಈ ಮಾವೋವಾದಿ ನಾಯಕ ವಿಜ್ಜಾ ಆರೋಪಿಯಾಗಿದ್ದ. ಕಳೆದ ಒಂದು ತಿಂಗಳಿನಲ್ಲಿ ಈ ಪ್ರದೇಶಲ್ಲಿ ಮೂರು ಪೊಲೀಸ್ ಸಿಬ್ಬಂದಿ ಸೇರಿ, 12 ಮಂದಿಯನ್ನು ನಕ್ಸಲರು ಹತ್ಯೆ ಮಾಡಿದ್ದಾರೆ. ಇತ್ತೀಚೆಗೆ ಹೆಚ್ಚುತ್ತಿರುವ ನಾಗರಿಕರ ಹತ್ಯೆಯ ವಿಚಾರದಲ್ಲಿಯೇ ಹಿರಿಯ ಮಾವೋವಾದಿ ನಾಯಕರು ಮತ್ತು ತಳಮಟ್ಟದ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಇತ್ತು. ಬುಡಕಟ್ಟು ಜನಾಂಗದ ಮುಗ್ಧರನ್ನು ಕೊಲ್ಲುವ ಬಗ್ಗೆ ಅವರಲ್ಲೇ ಪರ-ವಿರೋಧಗಳಿದ್ದವು. ಈ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಬೆಳವಣಿಗೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.
ಗುರುವಾರ ಕೂಡ ಬಿಜಾಪುರದಲ್ಲಿ ಇಬ್ಬರು ನಾಗರಿಕರನ್ನು ನಕ್ಸಲರು ಹತ್ಯೆ ಮಾಡಿದ್ದರು. (ಏಜೆನ್ಸೀಸ್)
ಭಾರತದ ‘ಶೌರ್ಯ’ ಪ್ರದರ್ಶನ: ಎಲ್ಲಿ, ಏಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 7 =
Remember me
