ಹೈದರಾಬಾದ್:ಯಾರೋ ದುಷ್ಕರ್ಮಿಗಳು ಮಹಾಕಾಳಿ ದೇವಿ ಮೂರ್ತಿಯ ಪಾದದ ಬಳಿ ವ್ಯಕ್ತಿಯೊಬ್ಬನ ತಲೆ ಕತ್ತರಿಸಿ ಇಟ್ಟಿದ್ದಾರೆ.. ಈ ಭಯಾನಕ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಇಂತಹ ಭೀಕರ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲದ ಗೊಲ್ಲಪಲ್ಲಿ ಗ್ರಾಮದಲ್ಲಿ ಸಂಭಿವಸಿದೆ. ಈ ಗ್ರಾಮದಲ್ಲಿ ಮಹಾಕಾಳಿ ದೇವಸ್ಥಾನವಿದೆ. ದೇಗುಲದ ಆವರಣದಲ್ಲಿ ಬೃಹತ್​ ಕಾಳಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ನಿನ್ನೆ ಪೂಜೆ ಮಾಡಲೆಂದು ಅರ್ಚಕರು ದೇಗುಲಕ್ಕೆ ಬಂದಾಗ ದೇವಿ ಪಾದದ ಅಡಿ ವ್ಯಕ್ತಿಯ ತಲೆ ಪತ್ತೆಯಾಗಿದೆ. ರುಂಡವನ್ನ ನೋಡಿ ಬೆಚ್ಚಿಬಿದ್ದ ಅರ್ಚಕರು ಚೀರಾಡಿದ್ದಾರೆ. ಸ್ಥಳಕ್ಕೆ ಬಂದ ಸ್ಥಳೀಯರು ಈ ದೃಶ್ಯ ನೋಡಿ ಭಯಗೊಂಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ನಿಧಿ ಆಸೆಗೆ ಯಾರೋ ನರ ಬಲಿ ಕೊಟ್ಟಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಯಾರೋ ಕಿಡಿಗೇಡಿಗಳು ವ್ಯಕ್ತಿಯನ್ನು ಕೊಂದು ದೇವಿ ಪಾದದ ಅಡಿ ತಲೆ ಇಟ್ಟು ಪ್ರಕರಣದ ದಿ್ಕಕಿ ತಪ್ಪಿಸಲು ಯತ್ನಿಸುತ್ತಿರಬೇಕು ಎಂದು ಹಲವರು ಮಾತಾಡಿಕೊಳ್ಳುತ್ತಿದ್ದಾರೆ.

ಪೊಲೀಸ್​ ಅಧಿಕಾರಿ ಆನಂದ್ ರೆಡ್ಡಿ ನೇತೃತ್ವದ ತಂಡ ತನಿಖೆ ಮುಂದುವರಿಸಿದೆ. ಕಾಳಿ ದೇವಿಯ ಪಾದದಡಿ ಇದ್ದ ರುಂಡದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ತಲೆ ಸೂರ್ಯಪೇಟೆ ಜಿಲ್ಲೆಯ 30 ವರ್ಷದ ಯುವಕ ಜಹೇಂದರ್ ನಾಯಕ್ ಎಂಬಾತನದ್ದು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಮಾನಸಿಕ ಅಸ್ವಸ್ಥನಾಗಿದ್ದ ಈತ, ಸುಮಾರು ಐದಾರು ವರ್ಷದಿಂದ ಅಲೆದಾಡುತ್ತಿದ್ದ. ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂ ಬಳಿಯ ತುರ್ಕಯಾಂಜಲ್ ಗ್ರಾಮದ ದೇವಸ್ಥಾನದಲ್ಲಿ ತಂಗಿದ್ದ ಎಂದು ತಿಳಿದು ಬಂದಿದೆ. ಕೂದಲು ಮತ್ತು ಚರ್ಮವನ್ನು ಡಿಎನ್‌ಎ ಪರೀಕ್ಷೆಗಾಗಿ ಹೈದರಾಬಾದ್‌ಗೆ ಕಳುಹಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + nine =
Remember me
