ನವದೆಹಲಿ:ಕಾಂಗ್ರೆಸ್​ ಅಧ್ಯಕ್ಷೀಯ ಸ್ಥಾನಕ್ಕೆ ಇಂದು(ಸೋಮವಾರ) ದೇಶಾದ್ಯಂತ ಮತದಾನ ನಡೆಯಲಿದ್ದು, ಕರ್ನಾಟಕದ ಹಿರಿಯ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಮತ್ತು ಕೇರಳದ ಸಂಸದ ಶಶಿ ತರೂರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಇವರಿಬ್ಬರಲ್ಲಿ ಯಾರಿಗೆ ಸಿಗಲಿದೆ ಕಾಂಗ್ರೆಸ್ ಅಧ್ಯಕ್ಷೀಯ ಚುಕ್ಕಾಣಿ? ಎಂಬ ಕುತೂಹಲ ಗರಗೆದರಿದೆ. ಮತದಾನಕ್ಕೂ ಮುನ್ನ ದಿನ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿರುವ ಅಭ್ಯರ್ಥಿ ಶಶಿ ತರೂರ್​, ‘ಬದಲಾವಣೆಯನ್ನ ಸ್ವೀಕರಿಸಿ, ಧೈರ್ಯ ಮಾಡಿ ವೋಟ್ ಮಾಡಿ’ ಎಂದು ಕರೆ ನೀಡಿದ್ದಾರೆ.
‘ನಮ್ಮಂತಹ ದೊಡ್ಡ ಸಂಘಟನೆಯಲ್ಲಿ ಬದಲಾವಣೆ ಬಗ್ಗೆ ಕಳವಳ ಇರುವುದು ಸಹಜ. ಮತದಾರರಲ್ಲಿ ಹಿಂಜರಿಕೆ ಇದೆ. ಯಾರಿಗೆ ಮತ ಹಾಕಬೇಕು ಎಂದು ಹಲವರು ಇನ್ನೂ ನಿರ್ಧರಿಸಿಲ್ಲ. ಬದಲಾವಣೆಯನ್ನ ಸ್ವೀಕರಿಸಿ ಧೈರ್ಯ ಮಾಡಿ ಮತ ಚಲಾಯಿಸಿ’ ಎಂದಿದ್ದಾರೆ.
‘ಕಾಂಗ್ರೆಸ್​ ಪಕ್ಷವು ಅಗತ್ಯಕ್ಕೆ ತಕ್ಕಂತೆ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆಗಳನ್ನು ಸ್ವೀಕರಿಸುತ್ತಲೇ ಬಂದಿದೆ’ ಎಂದಿರುವ ಶಶಿ ತರೂರ್​, 1991ರ ಆರ್ಥಿಕ ಉದಾರೀಕರಣ, ಇಂದಿರಾ ಗಾಂಧಿ ನಿಧನದ ಬಳಿಕ ರಾಜೀವ್​ ಗಾಂಧಿ ತಂದ ಪೀಳಿಗೆಯ ಬದಲಾವಣೆ, ಹಸಿರು ಕ್ರಾಂತಿ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಕೈ ಅಧ್ಯಕ್ಷ ಸ್ಥಾನಕ್ಕೆ ಇಂದು ಮತದಾನ; ಬುಧವಾರ ಪ್ರಕಟವಾಗಲಿದೆ ಫಲಿತಾಂಶ

ಮಂಡ್ಯದ ಕೆರೆ ಕಾಮೇಗೌಡ ಇನ್ನಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
