ಮುಂಬೈ:ಮಹಾರಾಷ್ಟ್ರದಲ್ಲಿ ಬಂಡಾಯ ಶಾಸಕರ ಕಚೇರಿಗಳ ಮೇಲೆ ಶಿವಸೇನೆ ಪಕ್ಷದ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಪುಣೆಯಲ್ಲಿರುವ ಶಾಸಕ ತನಾಜಿ ಸಾವಂತ್ ಅವರ​ ಕಚೇರಿಯನ್ನೂ ಧ್ವಂಸ ಮಾಡಲಾಗಿದೆ. ಅತ್ತ ಬಂಡಾಯ ಶಾಸಕರು ನಮ್ಮದು ‘ಶಿವಸೇನಾ(ಬಾಳಾ ಸಾಹೇಬ್​) ಪಕ್ಷ’ ಎಂದು ಘೋಷಿಸಿಕೊಂಡಿದ್ದಾರೆ. ಆ ಮೂಲಕ ಶಿವಸೇನೆ ಪಕ್ಷವನ್ನೇ ಹೈಜಾಕ್​ ಮಾಡಲು ಯತ್ನಿಸುತ್ತಿದ್ದಾರೆ. ಉದ್ಧವ್​ ಠಾಕ್ರೆ ಅವರ ತಂದೆ ಬಾಳಾ ಸಾಹೇಬ್​ ಠಾಕ್ರೆ ಕಟ್ಟಿದ್ದ ಪಕ್ಷವನ್ನೇ ಇದೀಗ ನಮಗೆ ಕೊಡಿ ಎಂದು ಶಿಂಧೆ ಕೇಳುತ್ತಿರುವುದು ಉದ್ಧವ್​ಗೆ ಸಹಿಸಲು ಸಾಧ್ಯವಾಗುತ್ತಿಲ್ಲ.
ಶಿವಸೇನೆ ನಾಯಕ, ಸಚಿವ ಏಕನಾಥ್​ ಶಿಂಧೆ ನೇತೃತ್ವದಲ್ಲಿ ಎದ್ದಿರುವ ಬಂಡಾಯ ಠಾಕ್ರೆ ಸರ್ಕಾರವನ್ನ ಪತನದ ಹಂಚಿಗೆ ದೂಡಿದೆ. ನಿಜವಾಗಿಯೂ ನಿಮಗೆಲ್ಲಾ ಶಿವಸೇನೆ ಪಕ್ಷದ ಮೇಲೆ ನಿಷ್ಠೆ ಇದ್ದರೆ ವಾಪಸ್​ ಬನ್ನಿ ಎಂದು ಶಿಂಧೆ ತಂಡಕ್ಕೆ ಉದ್ಧವ್​ ಠಾಕ್ರೆ ಆಹ್ವಾನಿಸಿದ್ದರಾದರೂ ಅವರೆಲ್ಲರೂ ಗುವಾಹಟಿಯ ಹೋಟೆಲ್​ನಲ್ಲೇ ಇದ್ದು, ನಮ್ಮದು ‘ಶಿವಸೇನಾ(ಬಾಳಾ ಸಾಹೇಬ್​)’ ತಂಡ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.
#WATCH| Shiv Sena workers vandalise office of the party's MLA Tanaji Sawant in Balaji area of Katraj, Pune. Sawant is one of the rebel MLAs from the state and is currently camping in Guwahati, Assam.#MaharashtraPoliticalCrisispic.twitter.com/LXRSLPxYJC
— ANI (@ANI)June 25, 2022

ಇಷ್ಟೆಲ್ಲಾ ಬೆಳವಣಿಗೆ ನಡುವೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಠಾಕ್ರೆ ಅವರು ಇಂದು ಮಧ್ಯಾಹ್ನ ಶಿವಸೇನೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಲಿದ್ದಾರೆ.
ಸಿದ್ದುಗೆ ಸಿಕ್ತು ಸೇಫ್​ ಝೋನ್​… ಪದೇಪದೆ ಯತೀಂದ್ರ ಭೇಟಿ, ಸಿದ್ದುಗಾಗಿ ನನ್ನ ಕ್ಷೇತ್ರವನ್ನೇ ಬಿಟ್ಟುಕೊಡ್ತೀನಿ ಎಂದ ಶಾಸಕ

ಕೂಲಿ ಕೆಲಸಕ್ಕಾಗಿ ಆಂಧ್ರದಿಂದ ಚಿಕ್ಕಬಳ್ಳಾಪುರಕ್ಕೆ ಬಂದವ ಈಗ ಕೋಟ್ಯಧೀಶ! ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
