ನವದೆಹಲಿ:ಈಜು, ಸೈಕ್ಲಿಂಗ್‌ ಹಾಗೂ ಮ್ಯಾರಥಾನ್‌ ಕ್ರೀಡೆ ಒಳಗೊಂಡ ಅತ್ಯಂತ ಕಠಿಣವಾದ ‘ಐರನ್‌ಮ್ಯಾನ್‌ ಟ್ರಯಾಥ್ಲಾನ್‌’ ಸ್ಪರ್ಧೆಯನ್ನು ಇಂಡಿಯನ್ ರೈಲ್ವೆ ಅಕೌಂಟ್ಸ್ ಸರ್ವಿಸ್ (IRAS) ಅಧಿಕಾರಿ ಶ್ರೇಯಸ್ ಹೊಸೂರು ಪೂರ್ಣಗೊಳಿಸಿದ್ದು, ‘ಐರನ್‌ಮ್ಯಾನ್‌’ ಎಂಬ ಬಿರುದು ಪಡೆದಿದ್ದಾರೆ. ‘ಐರನ್‌ಮ್ಯಾನ್‌ ಟ್ರಯಾಥ್ಲಾನ್‌’ ಸ್ಪರ್ಧೆಯನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ರೈಲ್ವೆ ಅಧಿಕಾರಿ ಮಾತ್ರವಲ್ಲ, ‘ಐರನ್‌ಮ್ಯಾನ್‌’ ಎಂಬ ಗೌರವ ಪಡೆದ ಮೊದಲ ಕನ್ನಡಿಗ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಭಾನುವಾರ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ‘ಐರನ್‌ಮ್ಯಾನ್‌ ಟ್ರಯಾಥ್ಲಾನ್‌’ ಸ್ಪರ್ಧೆ ನಡೆಯಿತು. ವಿಶ್ವದ ಅತ್ಯಂತ ಕಠಿಣ ಏಕದಿನ ಕ್ರೀಡಾಕೂಟವಾದ ಈ ಸ್ಪರ್ಧೆಯನ್ನು(3.8 ಕಿಮೀ ಈಜು, 180 ಕಿಮೀ ಸೈಕ್ಲಿಂಗ್, 42.2 ಕಿಮೀ ಓಟ) ಒಟ್ಟು 13 ಗಂಟೆ 26 ನಿಮಿಷದಲ್ಲಿ ಪೂರ್ಣಗೊಳಿಸಿದರು. ಹ್ಯಾಂಬರ್ಗ್‌ ಸರೋವರದಲ್ಲಿ ಅಂದು ಬೆಳಗ್ಗೆ 6.30ಕ್ಕೆ ಈಜು ಆರಂಭಿಸಿದ ಅವರು, ಬಳಿಕ ಸೈಕ್ಲಿಂಗ್‌ ಹಾಗೂ ಮ್ಯಾರಥಾನ್‌ ಓಟವನ್ನು ಪೂರ್ಣಗೊಳಿಸಿದರು.
A moment of pride for Railways!
Congratulations to Mr. Shreyas Hosur who became the first Railway Officer to complete the gruelling ‘IRONMAN’ Triathlon in Hamburg, Germany, which includes 3.8 km Swim, 180 km Cycling and 42.2 km Running.pic.twitter.com/wFFOIaJekq
— Ministry of Railways (@RailMinIndia)June 6, 2022

ಬಳಿಕ ಮಾತನಾಡಿದ ಶ್ರೇಯಸ್ ಹೊಸೂರು, ‘ಈ ಸಾಧನೆಯನ್ನು ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಆಚರಿಸುತ್ತಿರುವ ‘ಆಜಾದಿ ಕಾ ಅಮೃತ ಮಹೋತ್ಸವ’ ಅಭಿಯಾನಕ್ಕೆ ಸಮರ್ಪಿಸುವೆ’ ಎಂದಿದ್ದಾರೆ. 2012ರ ಬ್ಯಾಚ್‌ನ ಐಆರ್‌ಎಎಸ್ ಅಧಿಕಾರಿಯಾದ ಶ್ರೇಯಸ್ ಹೊಸೂರು ಅವರು ಸದ್ಯ ನೈಋತ್ಯ ರೈಲ್ವೆಯ ನಿರ್ಮಾಣ ವಿಭಾಗದಲ್ಲಿ ಉಪ ಹಣಕಾಸು ಸಲಹೆಗಾರ ಹಾಗೂ ಅಕೌಂಟ್ಸ್‌ ಸರ್ವೀಸ್‌ ಅಧಿಕಾರಿಯಾಗಿದ್ದಾರೆ. ಶ್ರೇಯಸ್‌ ಅವರು ಕರ್ನಾಟಕದ ನಿವೃತ್ತ ಐಪಿಎಸ್‌ ಅಧಿಕಾರಿ ಗೋಪಾಲ್‌ ಬಿ. ಹೊಸೂರು ಅವರ ಪುತ್ರ.
ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ ಶಾಸ್ತ್ರ: ದೇವೇಗೌಡರ ಮರಿಮೊಮ್ಮಗನ ಹೆಸರು ಹೀಗಿದೆ

ನಗರಸಭೆ ಸದಸ್ಯನ ಹತ್ಯೆ: ಭಕ್ತರ ಸೋಗಲ್ಲಿ ದೇಗುಲದ ಎದರೇ ಕೊಚ್ಚಿ ಕೊಲೆ, ಗ್ರಾಪಂ ಮಾಜಿ ಸದಸ್ಯೆ ಮೇಲೆ ಖಾಕಿ ಕಣ್ಣು

ಬಟ್ಟೆ ಸರಿಸಿ ತೊಡೆ ಸವರುತ್ತಿದ್ದ.. ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ… ಬೆಂಗ್ಳೂರಲ್ಲಿ ಬಾಲಿವುಡ್​ ನಟಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
