ಬಲಂಗೀರ್:ಇದು ಬೇಲಿಯೇ ಎದ್ದು ಹೊಲ ಮೇಯ್ದ ಸ್ಟೋರಿ. ಇಲ್ಲೊಬ್ಬ ಪೊಲೀಸ್​ ಅಧಿಕಾರಿ ಹೊಸ ವರ್ಷದ ಪ್ರಯುಕ್ತ ಪಾರ್ಟಿ ಮಾಡಲು 2 ಮೇಕೆ ಕದ್ದು ಭರ್ಜರಿ ಬಾಡೂಟ ಮಾಡಿ ತಿಂದು ತೇಗಿದ್ದಾರೆ.
ಒಡಿಶಾದ ಬಲಂಗೀರ್ ಜಿಲ್ಲೆಯ ಸಿಂಧೆಕೆಲಾ ಪೊಲೀಸ್ ಠಾಣೆ ಎಎಸ್‌ಐ ಸುಮನ್ ಮಲ್ಲಿಕ್ ಮೇಕೆ ಕದ್ದ ಆರೋಪಿ. ಹೊಸ ವರ್ಷಕ್ಕೂ ಮುನ್ನಾ ದಿನ ಗ್ರಾಮದಲ್ಲಿ 2 ಮೇಕೆಗಳು ಕಳವಾಗಿದ್ದವು. ಮೇಕೆಗಳನ್ನು ಹುಡುಕಿಕೊಂಡ ಹೊರಟ ಮಾಲೀಕನಿಗೆ ಎಎಸ್​ಐ ಸುಮನ್ ಮಲ್ಲಿಕ್ ಬಳಿ ತನ್ನ ಮೇಕೆ ಇರುವುದು ಗೊತ್ತಾಗಿ, ವಾಪಸ್​ ಕೊಡುವಂತೆ ಕಣ್ಣೀರಿಟ್ಟು ಮನವಿ ಮಾಡಿದ್ದರು. ಇದಕ್ಕೆ ಕ್ಯಾರೆ ಎನ್ನದ ಎಎಸ್​ಐ, ಕದ್ದ ಮೇಕೆಗಳನ್ನು ಕೊಂದು ನ್ಯೂ ಇಯರ್​ ಪಾರ್ಟಿಗೆ ಬಾಡೂಟ ಮಾಡಿಸಿದ್ದಾರೆ.
ಮಾತಿಗೆ ಬಗ್ಗದ ಎಎಸ್​ಐ ವಿರುದ್ಧ ಮೇಕೆ ಮಾಲೀಕ ಗುರು ಪೊಲೀಸ್​ ಠಾಣೆಗೆ ಬಂದು ದೂರು ಕೊಟ್ಟಿದ್ದರು. ಆಗ ಕೆಲ ಸಿಬ್ಬಂದಿ ಪೊಲೀಸ್​ ವಾಹನದಲ್ಲಿ ಮೇಕೆ ಮಾಲೀಕನನ್ನು ಬೇರೆಡೆಗೆ ಕರೆದೊಯ್ದಿದ್ದು, ಕಂಗಾಲಾದ ಕುಟುಂಬಸ್ಥರು ಗ್ರಾಮಸ್ಥರೊಂದಿಗೆ ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದ್ದರು. ಮೇಕೆ ಮಾಲೀಕ ಗುರುನನ್ನು ಬಿಡುವಂತೆ ಹಾಗೂ 2 ಮೇಕೆಯ ಹಣ ಕೊಡುವಂತೆ ಆಗ್ರಹಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಬಲಂಗೀರ್ ಎಸ್ಪಿ ನಿತಿನ್ ಕುಸಲ್ಕರ್​, ಹೊಸ ವರ್ಷದ ದಿನವೇ ಎಎಸ್‌ಐ ಸುಮನ್ ಮಲ್ಲಿಕ್ ಅವರನ್ನು ಕೆಲಸದಿಂದ ಅಮಾನತು ಮಾಡಿ ಆದೇಶಿಸಿದ್ದಾರೆ. ತನ್ನ ಸಿಬ್ಬಂದಿ ಮೂಲಕ ಎಎಸ್​ಐ ಅವರೇ ಮೇಕೆಗಳನ್ನು ಕಳವು ಮಾಡಿಸಿದ್ದರು ಎಂದು ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ.
ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ ನಡೆಯುತ್ತಾ? ಕನ್ಯಾಪೊರೆ ಇರಲಿಲ್ಲ ಅಂದ್ರೆ ಏನರ್ಥ?

ಅರ್ಚನಾ ರೆಡ್ಡಿ ಕೊಲೆ ಕೇಸ್​: ಬಯಲಾಯ್ತು ಭಯಾನಕ ರಹಸ್ಯ, 3ನೇ ಗಂಡ ನವೀನ್​ ಜತೆ ಆ ಒಂದೂವರೆ ತಿಂಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − three =
Remember me
