ಗುಜರಾತ್:ಇಲ್ಲೊಬ್ಬ ಭೂಪ ತನ್ನ ಪತ್ನಿ ಪರಪುರಷನೊಂದಿಗೆ ಓಡಿಹೋಗಿದ್ದಕ್ಕೆ, ಅವಳ ತವರು ಮನೆಯವರಿಗೆ ಕೊಟ್ಟ ಶಿಕ್ಷೆ ಬಗ್ಗೆ ಕೇಳಿದ್ರೆ ಹಿಡಿಶಾಪ ಹಾಕೋದು ಗ್ಯಾರೆಂಟಿ.
ಧೇಲಾ ಎಂಬಾತನ ಪತ್ನಿ ಕೋಲಿ ಎರಡು ತಿಂಗಳ ಹಿಂದೆ ತನ್ನ ತವರು ಮನೆಗೆ ಹೋಗಿ ಬರುವುದಾಗಿ ಗಂಡನ ಮನೆಯಿಂದ ಹೋದವರು ವಾಪಸ್​ ಬಂದಿರಲಿಲ್ಲ. ಪತ್ನಿಯನ್ನು ನೋಡಲು ಮಾವನ ಮನೆಗೆ ಬಂದ ಅಳಿಯನಿಗೆ ಶಾಕಿಂಗ್​ ನ್ಯೂಸ್​ ಕಾದಿತ್ತು. ತನ್ನ ಪತ್ನಿ ತವರಿಗೂ ಬಾರದೆ ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ ಎಂದು. ಈ ಸುದ್ದಿ ಕೇಳಿ ಕುಪಿತಗೊಂಡ ಅಳಿಯ ಅತ್ತೆ-ಮಾವ ಮತ್ತು ಇವರ ಕುಟುಂಬಸ್ಥರಿಗೆ ಸತ್ವ ಪರೀಕ್ಷೆ ಮಾಡಿ ಇದೀಗ ಜೈಲು ಸೇರಿದ್ದಾನೆ.
ಪತ್ನಿ ಬೇರೊಬ್ಬನೊಂದಿಗೆ ಓಡಿ ಹೋದ ವಿಚಾರಕ್ಕೆ ಆಕೆಯ ಕುಟುಂಬಸ್ಥರೊಂದಿಗೆ ಮಾರಾಮಾರಿಯೂ ನಡೆದಿತ್ತು. ಇದಾದ ಬಳಿಕ ರಾಜೀ ಪಂಚಾಯಿತಿ ಮಾಡಿಕೊಳ್ಳೋಣ ಎಂದು ಪತ್ನಿಯ ತವರು ಮನೆಯವರನ್ನು ತನ್ನೂರಿಗೆ ಕರೆಸಿಕೊಂಡ ಅಳಿಯ, ‘ನಿಮ್ಮ ಮಗಳು ಪರಪುಷನೊಂದಿಗೆ ಓಡಿಹೋಗುವಲ್ಲಿ ನಿಮ್ಮ ಪಾತ್ರವೂ ಇದೆ. ನಿಮ್ಮ ಕುಮ್ಮಕ್ಕಿನಿಂದಲೇ ಆಕೆ ಗಂಡನನ್ನು ತೊರೆದು ಪ್ರಿಯಕರನ ಹಿಂದೆ ಹೋಗಿರೋದು’ ಎಂದು ಮನಸೋಇಚ್ಛೆ ಬೈದಿದ್ದಾನೆ. ‘ನಮಗೇನೂ ಗೊತ್ತಿಲ್ಲ’ ಎಂದು ಅವರು ಎಷ್ಟೇ ಹೇಳಿದರೂ ಇದನ್ನು ಒಪ್ಪದ ಧೇಲಾ ಕುಟುಂಬ, ‘ನಿಮ್ಮ ಪಾತ್ರ ಏನೂ ಇಲ್ಲ ಎಂದಾದರೆ ಕುದಿಯುವ ಎಣ್ಣೆಯಲ್ಲಿ ಕೈಗಳನ್ನು ಅದ್ದಿ ಸತ್ಯ ಸಾಬೀತು ಮಾಡಿ’ ಎಂದು ಷರತ್ತು ಹಾಕಿದೆ.
ಇದಕ್ಕಾಗಿ ಧೇಲಾ ಕುಟುಂಬ ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿತ್ತಂತೆ. ಎಣ್ಣೆಗೆ ಕೈ ಹಾಕದಿದ್ದಲ್ಲಿ ಗ್ರಾಮಸ್ಥರಿಂದ ಹೊಡೆಸಲು ಸ್ಕೆಚ್​ ಕೂಡ ಹಾಕಿತ್ತಂತೆ. ಇವರ ಕಿರುಕುಳ ತಾಳಲಾರದೆ ಆಕೆಯ ತಂದೆ-ತಾಯಿ ಸೇರಿ 6 ಮಂದಿ ಕುದಿಯುವ ಎಣ್ಣೆಗೆ ಕೈ ಹಾಕಿದ್ದು, ಎಲ್ಲರ ಕೈ ಸುಟ್ಟಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂತಹ ಅಮಾನವೀಯ ಘಟನೆ ಮಂಗಳವಾರ ರಾಪರ್ ತಾಲೂಕಿನ ಗೆಡಿ ಗ್ರಾಮದಲ್ಲಿ ಸಂಭವಿಸಿದೆ. ಅತ್ತೆ-ಮಾವ ಮತ್ತು ಅವರ ಕುಟುಂಬಸ್ಥರಿಗೆ ಶಿಕ್ಷೆಕೊಟ್ಟು ವಿಕೃತಿ ಮೆರೆದಿದ್ದ ಅಳಿಯ ಸೇರಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿ ಜತೆ ನನ್ನ ಗಂಡನಿಗಿದೆ ಅಕ್ರಮ ಸಂಬಂಧ! ಪತ್ನಿ ಮತ್ತು ಆಕೆ ನಡುವೆ ಜಾಲತಾಣದಲ್ಲೇ ನಡೀತು ವಾರ್​, ವಿಡಿಯೋ ವೈರಲ್​

ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

ವಾಂತಿ ಮಾಡಲು ಹೋದ ಮಹಿಳೆ ಬಸ್​ನಿಂದ ಬಿದ್ದು ಸಾವು! ಕಗ್ಗತ್ತಲಿನ ಕಾಡಲ್ಲಿ 8 ಕಿ.ಮೀ ದೂರ ಶವ ಹೊತ್ತ ಗ್ರಾಮಸ್ಥರು

ನನಗೇ ಹೀಗೆ ಮಾಡೋದು ಸರಿನಾ? ಎಂದು ಆರ್​.ಅಶೋಕ್​ ಮುಂದೆ ಕಣ್ಣೀರಿಟ್ಟ ಮೂಡಿಗೆರೆ ಶಾಸಕ!

ಅಮ್ಮನ ಮಾತು ಕೇಳಿದ್ದರೆ ವಿವೇಕ್​ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 4 =
Remember me
