ನವದೆಹಲಿ:ನೇಪಾಳದಲ್ಲಿ ಪ್ರಯಾಣಿಕ ವಿಮಾನ ನಾಪತ್ತೆಯಾಗಿದ್ದು, ಇದರಲ್ಲಿ ಭಾರತೀಯರು ಸೇರಿ 22 ಪ್ರಯಾಣಿಕರು ಇದ್ದರು ಎಂದು ವರದಿಯಾಗಿದೆ.
ತಾರಾ ಏರ್​ 9ಎನ್​​ಎಇಟಿ ಎರಡು ಇಂಜಿನ್​​ವುಳ್ಳ ಖಾಸಗಿ ವಿಮಾನ ಭಾನುವಾರ ಬೆಳಗ್ಗೆ ಕಣ್ಮರೆಯಾಗಿದೆ. ಪೋಖ್ರಾದಿಂದ ಹಾರಾಟ ನಡೆಸಿದ್ದ ವಿಮಾನ ಬೆಳಗ್ಗೆ 9.55ಕ್ಕೆ ಸಂಪರ್ಕ ಕಡಿತಗೊಂಡಿದೆ. ಕಠ್ಮಂಡುವಿನಿಂದ ಸುಮಾರು 200 ಕಿಮೀ ದೂರದ ಜೊಮ್ಸನ್​​ ನಗರದ ಬಳಿ ಹಾರಾಟ ನಡೆಸುವ ವೇಳೆ ವಿಮಾನ ನಾಪತ್ತೆಯಾಗಿದೆ.
ವಿಮಾನವು ಮುಸ್ತಾಂಗ್​​ ಜಿಲ್ಲೆಯಲ್ಲಿ ಹಾರಾಟ ನಡೆಸಿದ್ದು ಕಾಣಿಸಿಕೊಂಡ ಬಳಿಕ ಧೌಲಗಿರಿ ಪರ್ವತದತ್ತ ಹಾರಿದ ಬಳಿಕ ಕಣ್ಮರೆಯಾಗಿದೆ. ಅದೇ ಸಂದರ್ಭದಲ್ಲಿ ಸಂಪರ್ಕ ಕಡಿತಗೊಂಡಿದೆ ಎಂದು ಜಿಲ್ಲಾಧಿಕಾರಿ ನೇತ್ರಾ ಪ್ರಸಾದ್​​ ತಿಳಿಸಿದ್ದಾರೆ.
22 ಪ್ರಯಾಣಿಕರಿದ್ದ ಸಣ್ಣ ವಿಮಾನ ಇದಾಗಿದ್ದು, ನಾಲ್ವರು ಭಾರತೀಯರು, ಮೂವರು ಜಪಾನ್​ ದೇಶದ ಪ್ರಜೆಗಳು ಸೇರಿ ಒಟ್ಟು 22 ಮಂದಿ ಇದ್ದರು ಎಂದು ವರದಿಯಾಗಿದೆ.
ಬೆಟ್ಟಗುಡ್ಡದಲ್ಲಿ ವಿಮಾನ ಉರುಳಿರಬಹುದು ಎಂದು ಶಂಕಿಸಲಾಗಿದ್ದು, ಹುಡುಕಾಟ ಆರಂಭಿಸಲಾಗಿದೆ.(ಏಜೆನ್ಸೀಸ್​)
ಹಾಟ್​​ ಫೋಟೋ ತೆಗೆಸಿದ ವೈದ್ಯೆಗೆ ಭಾರೀ ಸಂಕಷ್ಟ! ತನ್ನ ಜೀವನದಲ್ಲಿ ಹೀಗಾಗುತ್ತೆ ಎಂದು ಕನಸಲ್ಲೂ ಎಣಿಸಿರಲಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − seven =
Remember me
