ವಾರಾಣಸಿ:ಹೆಣ್ಣು ಅಬಲೆ.. ಒಬ್ಬಳೇ ಬರುತ್ತಿದ್ದಾಳೆ.. ಜತೆಗೆ ಯಾರೂ ಇಲ್ಲ, ಕೈಯಲ್ಲಿ ಆಯುಧದಂಥದ್ದು ಏನೂ ಇಲ್ಲ.. ಎಂದುಕೊಂಡು ಮೈಮೇಲೆ ಎರಗುವವರು, ಆಭರಣಗಳನ್ನು ಎಗರಿಸುವವರು ಇನ್ನು ಹಾಗೇ ಬಚಾವಾಗುವುದು ಅಷ್ಟು ಸುಲಭವಲ್ಲ!
ಏಕೆಂದರೆ ಇಂಥ ಸಂದರ್ಭಗಳನ್ನು ಎದುರಿಸಲೆಂದೇ ಈಗ ವಿಶೇಷವಾದ ಆಯುಧವೊಂದು ಸಿದ್ಧವಾಗಿದೆ. ವಿಶೇಷವೆಂದರೆ ಇದನ್ನು ಯುವತಿಯರೇ ವಿನ್ಯಾಸ ಮಾಡಿದ್ದಾರೆ. ವಾರಾಣಸಿಯ ಅಶೋಕ ಇನ್​ಸ್ಟಿಟ್ಯೂಟ್​ ಆಫ್​ ಕಂಪ್ಯೂಟರ್ ಸೈನ್ಸ್​ನ ಶಾಲಿನಿ ಹಾಗೂ ದೀಕ್ಷಾ ಎಂಬ ವಿದ್ಯಾರ್ಥಿನಿಯರಿಬ್ಬರು ಇದನ್ನು ರೂಪಿಸಿದ್ದಾರೆ.
‘ಸ್ಮಾರ್ಟ್​ ನೈಫ್’​ ಎಂದು ಹೆಸರಿಡಲಾಗಿರುವ ಇದು ನೋಡಲು ಆಭರಣದಂತೆ ಕಂಡರೂ ಸಣ್ಣ ಚಾಕುವೊಂದನ್ನು ಒಳಗೊಂಡಿರುತ್ತದೆ. ಮಾತ್ರವಲ್ಲ ಇದರೊಳಗೊಂದು ಸಿಮ್​ ಕೂಡ ಅಡಕವಾಗಿರುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರದಂಥ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇವರು ಈ ಸ್ಮಾರ್ಟ್​ ನೈಫ್​ ತಯಾರಿಸಿದ್ದಾರೆ.
ಇದನ್ನೂ ಓದಿ:ಮಹಿಳೆಯರಿಗಿದು ಬೊಂಬಾಟ್​ ಸುದ್ದಿ: ಚಿನ್ನಾಭರಣದೊಳಗೆ ಇದು ಇದ್ರೆ ಎಷ್ಟು ಚೆನ್ನ!
ನೆಕ್ಲೇಸ್​ನಂಥ ಆಭರಣದೊಳಗೆ 70 ಗ್ರಾಂ ತೂಕದ ಸಣ್ಣ ಚಾಕುವೊಂದನ್ನು ಅಳವಡಿಸಲಾಗಿರುತ್ತದೆ. ಮಹಿಳೆ ಈ ಆಭರಣದಿಂದ ಚಾಕುವನ್ನು ತೆಗೆಯುತ್ತಿದ್ದಂತೆ ಮೊದಲೇ ಫೀಡ್​ ಮಾಡಲಾಗಿರುವ ಮೂರು ಮೊಬೈಲ್​ಫೋನ್​ ನಂಬರ್​ಗಳಿಗೆ ಆ ಕ್ಷಣದಲ್ಲಿ ಆಕೆ ಇರುವ ಸ್ಥಳದ ಮಾಹಿತಿ ಸಹಿತ ಸಂದೇಶ ರವಾನೆ ಆಗುತ್ತದೆ. ಆಗ ಸಂಬಂಧಿತರು ಹಾಗೂ ಪೊಲೀಸರು ರಕ್ಷಣೆಗೆ ಧಾವಿಸಬಹುದು. ಯಾರಾದರೂ ಕದಿಯಲು ಮುಂದಾದಾಗ, ‘ಇರು.. ನನಗೇನೂ ಮಾಡಬೇಡ, ಸರ ತಾನೇ? ನಾನೇ ಬಿಚ್ಚಿ ಕೊಡುತ್ತೇನೆ’ ಎಂದು ಅಥವಾ ಯಾರಾದರೂ ಲೈಂಗಿಕ ಶೋಷಣೆಗೆ ಮುಂದಾದಲ್ಲಿ ಸರದ ಆಮಿಷ ತೋರಿ, ಚಾಕು ತೆಗೆದರೆ ಸಾಕು.. ಬಚಾವಾಗಬಹುದು. ರೇಡಿಯೊ ತರಂಗಾಂತರ ಹಾಗೂ ಬ್ಲೂಟೂತ್ ತಂತ್ರಜ್ಞಾನದ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. 1500 ರೂಪಾಯಿಯಲ್ಲಿ ಸಿಗಬಹುದಾದ ಈ ಸ್ಮಾರ್ಟ್​ ನೈಫ್​ ವಿನ್ಯಾಸಕ್ಕೆ ಒಂದು ತಿಂಗಳ ಕಾಲ ತಗುಲಿತು ಎನ್ನುತ್ತಾರೆ ಶಾಲಿನಿ, ದೀಕ್ಷಾ. (ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − fourteen =
Remember me
