ಹೈದರಾಬಾದ್​:ಕೊವಿಡ್​ -19 ಕಾಲಿಟ್ಟಾಗಿನಿಂದ ಈ ಕೆಮ್ಮು, ಜ್ವರ, ಸೀನುಗಳ ಬಗ್ಗೆ ವಿಶೇಷ ಗಮನ ಹುಟ್ಟಿಕೊಂಡುಬಿಟ್ಟಿದೆ.
ಜನರು ಅದೆಷ್ಟು ಪ್ಯಾನಿಕ್​ ಆಗಿದ್ದಾರೆಂದರೆ ಸಜಹವಾಗಿ ಬೇರೆ ಅಲರ್ಜಿ ಕಾರಣಗಳಿಂದ ಕೆಮ್ಮು, ಸೀನು ಬಂದರೂ ನಮಗೆ ಕರೊನಾ ಬಂದಿರಬಹುದಾ ಎಂಬ ಭ್ರಮೆಗೆ ಬೀಳುತ್ತಿದ್ದಾರೆ. ಅದರಲ್ಲೂ ಸಾರ್ವಜನಿಕ ಸ್ಥಳದಲ್ಲಿ ಇದ್ದಾಗ, ಇನ್ಯಾರೋ ಕೆಮ್ಮಿದರೂ, ಸೀನಿದರೂ ನಮಗೆ ಸಣ್ಣ ಭಯ ಶುರುವಾಗುತ್ತಿದೆ. ಅವರಿಗೇನಾದರೂ ಕರೊನಾ ಬಂದಿರಬಹುದಾ ಅಂತ..!
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರ ಪುತ್ರ ಕೆ.ಟಿ.ರಾಮ ರಾವ್​ ಅವರು ಹೀಗೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಸೀನುವ ಮೂಲಕ ಸ್ಥಳದಲ್ಲಿದ್ದ ಜನರು ಒಂದು ಕ್ಷಣ ಗಾಬರಿ ಬೀಳುವಂತೆ ಮಾಡಿದ ಘಟನೆ ರಾಜಣ್ಣ-ಸಿರಿಸಿಲ್ಲಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ತೆಲಂಗಾಣ ರಾಷ್ಟ್ರ ಸಮಿತಿಯ ಕಾರ್ಯಾಧ್ಯಕ್ಷರು, ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವರೂ ಆಗಿರುವ ಕೆ.ಟಿ.ರಾಮ ರಾವ್​ ಅವರು ಸೋಮವಾರ ರಾಜಣ್ಣ-ಸಿರಿಸಿಲ್ಲ ಜಿಲ್ಲೆಗೆ ಭೇಟಿ ನೀಡಿದ್ದರು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಒಂದರ ಹಿಂದೆ ಒಂದರಂತೆ ಹಲವು ಬಾರಿ ಸೀನಿದ್ದಾರೆ. ಕೆಟಿಆರ್​ ಅವರು ಪದೇಪದೆ ಸೀನುತ್ತಿರುವುದನ್ನು ನೋಡಿದ ಸ್ಥಳದಲ್ಲಿದ್ದ ಜನರು, ಅಧಿಕಾರಿಗಳು ಅಕ್ಷರಶಃ ಗಾಬರಿಯಾಗಿದ್ದಾರೆ.
ಇದನ್ನೂ ಓದಿ:ಗುರುಗ್ರಾಮ್​ನಲ್ಲಿ ಮದುವೆ, ಬೆಂಗಳೂರಿಂದ ವಿಡಿಯೋ ಕಾಲ್​ನಲ್ಲೇ ಸೊಸೆಯನ್ನು ಮನೆ ತುಂಬಿಸಿಕೊಂಡ ಅತ್ತೆ!
ಕೆಟಿಆರ್​ ಅವರು ಕೈಯಲ್ಲಿ ಟವೆಲ್​ ಹಿಡಿದುಕೊಂಡು, ಅದರಲ್ಲೇ ಮೂಗು ಮುಚ್ಚಿಕೊಂಡು ಸೀನುವುದು, ನಂತರ ಅದೇ ಕೈಯಲ್ಲಿ ಹೋಗಿ ಏನನ್ನೋ ಉದ್ಘಾಟನೆ ಮಾಡುವ ವಿಡಿಯೋ ವೈರಲ್ ಆಗಿದೆ.ಅದನ್ನು ನೋಡಿದ ಅವರ ಅನೇಕ ಅಭಿಮಾನಿಗಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸರ್​ ಎಂದು ಪ್ರೀತಿಯಿಂದ ಸಲಹೆ ನೀಡಿದ್ದಾರೆ.
ಯಾರಿಗಾದರೂ ಶೀತ, ಜ್ವರ, ಕೆಮ್ಮು, ಗಂಟಲು ನೋವಿನಂತಹ ಲಕ್ಷಣಗಳು ಇದ್ದರೆ ಕೂಡಲೇ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಆರೋಗ್ಯ ಇಲಾಖೆ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ. ಆದರೆ ಇಷ್ಟು ಶೀತವಿದ್ದರೂ ಜವಾಬ್ದಾರಿಯುತ ಸಚಿವರಾಗಿ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದು ಎಷ್ಟು ಸರಿ ಎಂಬ ಮಾತುಗಳೂ ಕೇಳಿಬಂದಿವೆ.

ತಮ್ಮ ಸೀನು ಸೋಷಿಯಲ್​ ಮೀಡಿಯಾಗಳಲ್ಲಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಗಮನಿಸಿದ ಕೆಟಿಆರ್ ಇಂದು ಟ್ವೀಟ್​ ಮಾಡಿದ್ದಾರೆ.
ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿದ ಎಲ್ಲರಿಗೂ ಧನ್ಯವಾದ. ನಾನೀಗ ಆರೋಗ್ಯವಾಗಿದ್ದೇನೆ. ನಾನು ತುಂಬ ವರ್ಷಗಳಿಂದಲೂ ಗಂಭೀರ ಸ್ವರೂಪದ ಅಲರ್ಜಿ ಸಮಸ್ಯೆಯನ್ನು ಅನುಭವಿಸುತ್ತಿದ್ದೇನೆ. ಆಗಾಗ ನನ್ನಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ರಾಜಣ್ಣ-ಸಿರಿಸಿಲ್ಲ ಜಿಲ್ಲೆಯ ಭೇಟಿಯನ್ನು ಮೊದಲೇ ನಿರ್ಧರಿಸಲಾಗಿತ್ತು. ಆಗಲೇ ಶೀತವೂ ಆಗಿತ್ತು. ಅದಕ್ಕಾಗಿ ಕಾರ್ಯಕ್ರಮ ರದ್ದುಗೊಳಿಸುವ ಮನಸು ಆಗಲಿಲ್ಲ. ಹಾಗಾಗಿ ಪಾಲ್ಗೊಂಡೆ. ಹೀಗೆ ಮಧ್ಯದಲ್ಲಿ ಸೀನು ಬಂತು. ಅದು ಒಮ್ಮೆ ಶುರುವಾದರೆ ಅಷ್ಟು ಬೇಗ ನಿಯಂತ್ರಣ ಆಗುವುದಿಲ್ಲ. ಆದರೆ ಇದರಿಂದ ಅಲ್ಲಿದ್ದ ಅನೇಕರಿಗೆ ತೊಂದರೆಯಾಗಿದೆ. ಹಾಗಾಗಿ ಎಲ್ಲರ ಕ್ಷಮೆ ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ಇದನ್ನೂ ಓದಿ:ಸಿಜೇರಿಯನ್ ತಿರಸ್ಕರಿಸಿ ಸಹಜ ಹೆರಿಗೆಗೆ ಸಹಕರಿಸಿದ ನರ್ಸ್​: ಇಂದು ದಾದಿಯರ ದಿನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
