ಪುಣೆ:ಕೆಲವೊಂದು ಕಡೆ ಹಾಕಿರುವ ಸೂಚನಾ ಫಲಕಗಳಲ್ಲಿನ ತಪ್ಪುಗಳು ಗಮನ ಸೆಳೆದರೆ, ಇನ್ನು ಕೆಲವು ಕಡೆ ಅವುಗಳಲ್ಲಿನ ತಪ್ಪುಗಳು ಗಮನ ಸೆಳೆಯತ್ತದೆ. ಆ ಮೂಲಕ ಅಂಥ ಸೂಚನೆಗಳೇ ಟಾಕ್​ ಆಫ್​ ದ ಟೌನ್ ಎನ್ನುವ ರೀತಿಯಲ್ಲಿ ಚರ್ಚೆಗೆ ಒಳಗಾಗುತ್ತವೆ, ಇಲ್ಲವೇ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತವೆ.
ಅಂಥದ್ದೇ ಒಂದು ಸೂಚನಾ ಫಲಕ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದ್ದು, ಹಲವರ ಗಮನ ಸೆಳೆಯಲಾರಂಭಿಸಿದೆ. ಅಷ್ಟಕ್ಕೂ ಈ ಸೂಚನಾ ಫಲಕ ಗಮನ ಸೆಳೆಯುತ್ತಿರುವುದು ಅದರಲ್ಲಿನ ಸೂಚನೆಯ ಕಾರಣಕ್ಕೆ.
ಪುಣೆಯ ಜಿಲ್ಲಾ ನ್ಯಾಯಾಲಯದಲ್ಲಿರುವ ಈ ಸೂಚನೆ ಮಹಿಳಾ ವಕೀಲರನ್ನು ಉದ್ದೇಶಿಸಿ ಹಾಕಿದ್ದಾಗಿದೆ. ನ್ಯಾಯಾಲಯದ ಕಲಾಪದ ವೇಳೆ ಮಹಿಳಾ ವಕೀಲರು ಅವರ ತಲೆಗೂದಲನ್ನು ಸರಿಪಡಿಸಿಕೊಳ್ಳುತ್ತಿರುವುದು ಪದೇಪದೆ ಕಂಡು ಬರುತ್ತಿದೆ. ಇದರಿಂದ ನ್ಯಾಯಾಲಯದ ಕಲಾಪಕ್ಕೆ ಅಡ್ಡಿ ಆಗುತ್ತಿದ್ದು, ಇಂಥ ಚಟುವಟಿಕೆಯಿಂದ ದೂರ ಇರುವಂತೆ ಮಹಿಳಾ ವಕೀಲರಿಗೆ ಸೂಚನೆ ನೀಡಲಾಗಿದೆ ಎಂದು ಈ ಫಲಕದಲ್ಲಿ ತಿಳಿಸಲಾಗಿದೆ.

‘ಕಾಂತಾರ’ ಸಿನಿಮಾ ನೋಡಿ ಹೊರಬರುತ್ತಿದ್ದಾಗ ಹೃದಯಾಘಾತ; ಚಿತ್ರಮಂದಿರದಲ್ಲೇ ಸಾವು..
‘ಕಾಂತಾರ’ ಮತ್ತೊಂದು ದಾಖಲೆ; ಹೊಂಬಾಳೆ ಫಿಲ್ಮ್ಸ್​ಗೆ ಇದು ಸಂಭ್ರಮದ ಸಂಗತಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 7 =
Remember me
