ನಾಗ್ಪುರ:ಚಳಿಯಿಂದ ತಪ್ಪಿಸಿಕೊಳ್ಳೋಕೆ ಮೈತುಂಬಾ ಬಟ್ಟೆ, ಸ್ವೆಟರ್​, ಜರ್ಕಿನ್​, ಹ್ಯಾಂಡ್​ ಗ್ಲೌಸ್​ ಹಾಕೋದು ಕಾಮನ್​. ಆದರೂ ಚಳಿಯನ್ನು ತಡಿಯೋಕೆ ಆಗ್ತಿಲ್ಲ ಅಂದ್ರೆ ಸ್ಥಳೀಯವಾಗಿ ಸಿಗೋ ಸೌದೆ ಬಳಿ ಬೆಂಕಿ ಕಾಯಿಸಿಕೊಳ್ತಾರೆ. ಆದರೆ, ಇಲ್ಲೊಬ್ಬ ಭೂಪ ಬೈಕ್​ಗೆ ಬೆಂಕಿ ಇಟ್ಟು ಮೈಬಿಸಿ ಮಾಡಿಕೊಂಡಿದ್ದಾನೆ.
ಇಂತಹ ವಿಚಿತ್ರ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ನಡೆದಿದೆ. ಚಳಿಯಿಂದ ಪಾರಾಗಲು ಬೈಕ್​ಗೆ ಬೆಂಕಿ ಇಟ್ಟವನ ಹೆಸರು ಛೋಟಾ ಸರ್ಫರಾಜ್. ಅಂದಹಾಗೆ ಈ ಬೈಕ್​ ಸ್ವಂತದ್ದಲ್ಲ, ಕದ್ದದ್ದು!
ಕೆಲ ದಿನಗಳ ಹಿಂದೆ ದರೋಡೆಗೆ ಯತ್ನಿಸಿದ್ದ ಛೋಟಾ ಸರ್ಫರಾಜ್ ಮತ್ತು ಈತನ ನಾಲ್ವರು ಸಹಚರರನ್ನು ಯಶೋಧರನಗರ ಪೊಲೀಸರು ಬಂಧಿಸಿದ್ದರು. ಆಗ ಛೋಟಾ ಸರ್ಫರಾಜ್ ಗ್ಯಾಂಗ್​ 10 ಬೈಕ್​ ಕಳವು ಮಾಡಿದ್ದರ ಬಗ್ಗೆಯೂ ಬಯಲಾಗಿತ್ತು. ಈ ಪೈಕಿ 9 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಬೈಕ್​ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದೆ.
ಪೊಲೀಸರ ತನಿಖೆಯಲ್ಲಿ ಆರೋಪಿ ಛೋಟಾ ಸರ್ಫರಾಜ್ ಬಾಯ್ಬಿಟ್ಟಿದ್ದು, ತಾನು ಪೊಲೀಸರಿಂದ ತಲೆಮರೆಸಿಕೊಳ್ಳಲು ಗದ್ದೆಯೊಂದರಲ್ಲಿ ರಾತ್ರಿವೇಳೆ ಅಡಗಿದ್ದೆ. ಸಿಕ್ಕಾಪಟ್ಟೆ ಚಳಿ ಇತ್ತು. ಮೈ ನಡುಗುತ್ತಿತ್ತು. ಚಳಿ ತಡೆಯಲಾರದೆ ತನ್ನೊಂದಿಗಿದ್ದ ಕದ್ದ ಬೈಕ್​ಗೆ ಬೆಂಕಿ ಇಟ್ಟು ಮೈಬಿಸಿ ಮಾಡಿಕೊಂಡಿದ್ದೆ ಎಂದಿದ್ದಾನೆ. ಇನ್ನು ಆ ಬೈಕ್​ ಸಂಪೂರ್ಣ ಸುಟ್ಟು ಕರಕಲಾಗಿದೆ.
ಊಟಕ್ಕೆಂದು ಹೋದವರು ವಾಪಸ್​ ಬಂದದ್ದು ಹೆಣವಾಗಿ… ಅಯ್ಯೋ ವಿಧಿಯೇ ನೀನೇಷ್ಟು ಕ್ರೂರಿ?

ವರದಕ್ಷಿಣೆ ಕಿರುಕುಳ: ಮದ್ವೆಯಾದ 18 ದಿನಕ್ಕೆ ಗಂಡನ ಮನೆಯಲ್ಲಿ ದುರಂತ ಅಂತ್ಯ ಕಂಡ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
