ಮುಂಬೈ:ಇತ್ತೀಚೆಗೆ ಹತ್ಯೆಗೀಡಾದ ಮಾಹಿತಿ ಹಕ್ಕು ಕಾರ್ಯಕರ್ತನೊಬ್ಬ ತಾನು ಯಾರಿಂದ ಕೊಲೆಯಾಗಬಹುದು ಎಂಬುದರ ವಿವರವನ್ನು ಮೊದಲೇ ತನ್ನ ಮೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ಮುಂಬೈನ ವರ್ಲಿ ಪ್ರದೇಶದ ಸಾಫ್ಟ್ ಟಚ್ ಸ್ಪಾನಲ್ಲಿ ಬುಧವಾರ ಗುರು ವಾಘ್ಮಾರೆ (48) ಎಂಬಾತನ ಕೊಲೆಯಾಗಿತ್ತು. ವೈದ್ಯರು ಮರಣೋತ್ತರ ಪರೀಕ್ಷೆ ನಡೆಸುವಾಗ ಆತನ ತೊಡೆಗಳ ಮೇಲೆ 22 ಜನರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡಿದ್ದು ಕಂಡುಬಂದಿತ್ತು. ಈ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ ಅವೆಲ್ಲವೂ ಆತನ ಶತ್ರುಗಳ ಹೆಸರುಗಳು ಎಂಬ ಅಂಶ ಬಯಲಾಗಿತ್ತು. ಆ ಪೈಕಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರಲ್ಲಿ ಸ್ಪಾ ಮಾಲೀಕ ಸಂತೋಷ್ ಶೇರೆಕಾರ್ ಕೂಡ ಇದ್ದಾನೆ. ಈತನಿಗೆ ಹಣಕ್ಕಾಗಿ ವಾಘ್ಮಾರೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ವಾಘ್ಮಾರೆಯ ಕಿರುಕುಳ ತಾಳದೆ ಮೊಹಮದ್ ಫಿರೋಜ್ ಅನ್ಸಾರಿ (26) ಎಂಬಾತನಿಗೆ ಶೇರೆಕಾರ್ 6 ಲಕ್ಷ ರೂ. ಸುಪಾರಿ ಕೊಟ್ಟು ಕೊಲ್ಲಿಸಿದ್ದಾನೆ ಎನ್ನಲಾಗಿದೆ.
ಅನ್ಸಾರಿ ಕೂಡ ನಾಲಾಸೋಪಾರಾದಲ್ಲಿ ಸ್ಪಾ ನಡೆಸುತ್ತಿದ್ದ. ಕಳೆದ ವರ್ಷ ಪೊಲೀಸರು ದಾಳಿ ಮಾಡಿ ಅದನ್ನು ಮುಚ್ಚಿಸಿದ್ದರು. ವಾಘ್ಮಾರೆ ನೀಡಿದ ದೂರಿನ ಮೇರೆಗೇ ಪೊಲೀಸರು ದಾಳಿ ನಡೆಸಿದ್ದರು ಎಂಬುದು ಅನ್ಸಾರಿಗೂ ಗೊತ್ತಾಗಿತ್ತು. ಈ ಮಧ್ಯೆ, ಅನ್ಸಾರಿಯನ್ನು ಶೇರೆಕಾರ್ ಸಂರ್ಪಸಿ ವಾಘ್ಮಾರೆಯನ್ನು ಮುಗಿಸಲು ಸುಪಾರಿ ಕೊಟ್ಟಿದ್ದ. ಅನ್ಸಾರಿ ಕೂಡಲೇ ದೆಹಲಿ ನಿವಾಸಿ ಸಾಕಿಬ್ ಎಂಬಾತನನ್ನು ಸಂರ್ಪಸಿ ಆತನ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ. ನಂತರದ 3 ತಿಂಗಳ ಕಾಲ ವಾಘ್ಮಾರೆಯ ಚಲನವಲನ ಗಮನಿಸಿದ್ದ.
ಗರ್ಲ್​ಫ್ರೆಂಡ್​ಗೂ ವಿಚಾರಣೆ ಬಿಸಿ: ಸಯಾನ್ ಪ್ರದೇಶದ ಬಾರ್​ವೊಂದರಲ್ಲಿ ಮಂಗಳವಾರ ಸಂಜೆ ವಾಘ್ಮಾರೆ 21 ವರ್ಷದ ಗರ್ಲ್​ಫ್ರೆಂಡ್ ಜತೆ ಸೇರಿ ತನ್ನ ಬರ್ತ್​ಡೇ ಆಚರಿಸಿಕೊಂಡಾಗ ಶೇರೆಕಾರ್ ಮತ್ತು ಅನ್ಸಾರಿ ಅಲ್ಲಿಯೇ ರೇನ್​ಕೋಟ್ ಧರಿಸಿ ಆತನ ಹಿಂದೆ ಮುಂದೆ ಓಡಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ವಾಘ್ಮಾರೆ ಮತ್ತು ಆತನ ಗರ್ಲ್​ಫ್ರೆಂಡ್​ಳನ್ನು ಶೇರೆಕಾರ್ ತನ್ನ ಸ್ಪಾಗೆ ಬುಧವಾರ ಬೆಳಗಿನ ಜಾವ 1.30ಕ್ಕೆ ಕರೆದೊಯ್ದಿದ್ದಾನೆ. ಗರ್ಲ್​ಫ್ರೆಂಡನ್ನು ಬೇರೆ ಕೋಣೆಗೆ ಕಳಿಸಿ, ವಾಘ್ಮಾರೆಯನ್ನು ಶೇರೆಕಾರ್ ಮತ್ತು ಅನ್ಸಾರಿ ಸೇರಿ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಸ್ಥಳೀಯರಿಂದ ವಿಷಯ ಗೊತ್ತಾಗುತ್ತಿದ್ದಂತೆಯೇ ಪೊಲೀಸರು ಅಷ್ಟೊತ್ತಿಗಾಗಲೇ ತಲೆಮರೆಸಿಕೊಂಡಿದ್ದ ಶೇರೆಕಾರ್ ಮತ್ತು ಅನ್ಸಾರಿಯನ್ನು ಕೆಲವೇ ಗಂಟೆಗಳಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಾಕಿಬ್ ಮತ್ತು ಇನ್ನಿಬ್ಬರನ್ನು ರಾಜಸ್ಥಾನದ ಕೋಟಾದಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ವಾಘ್ಮಾರೆ ಕೊಲೆ ಆಗಿರುವುದು ತನಗೆ ಬುಧವಾರ ಬೆಳಗ್ಗೆ 9.30ಕ್ಕೆ ಗೊತ್ತಾಯಿತು ಎಂದು ಆತನ ಗರ್ಲ್​ಫ್ರೆಂಡ್ ಹೇಳಿದ್ದರೂ ಕೊಲೆಯಲ್ಲಿ ಆಕೆಯ ಪಾತ್ರದ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ದತ್ತಾ ನಲವಾಡೆ ತಿಳಿಸಿದ್ದಾರೆ.
ಸುಲಿಗೆಗೆ ಆರ್​ಟಿಐ ಅಸ್ತ್ರ :ವಾಘ್ಮಾರೆ ತಾನೊಬ್ಬ ಮಾಹಿತಿ ಹಕ್ಕು ಕಾರ್ಯಕರ್ತರ ಎಂದು ಹೇಳಿಕೊಳ್ಳುತ್ತಿದ್ದ. ಆದರೆ ಅದನ್ನೇ ಅಸ್ತ್ರವಾಗಿಸಿ ಕೊಂಡು ಸುಲಿಗೆಗೆ ಇಳಿದಿದ್ದ. 2010ರಿಂದಲೂ ಮುಂಬೈ, ನವಿಮುಂಬೈ, ಥಾಣೆ, ಪಾಲ್ಘಾರ್ ಮುಂತಾದೆಡೆ ಸ್ಪಾ ಮಾಲೀಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಆತನ ವಿರುದ್ಧ ಸುಲಿಗೆ, ಅತ್ಯಾಚಾರ, ದೌರ್ಜನ್ಯದ 30ಕ್ಕೂ ಹೆಚ್ಚು ಕೇಸ್​ಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮನಗರ ಹೆಸರು ತೆಗೆದವರು ಸರ್ವನಾಶ ಆಗುತ್ತಾರೆ: ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 2 =
Remember me
