ಚೆನ್ನೈ:ಚಿಕನ್ ಶವರ್ಮ ಸೇವಿಸಿದ್ದ 15 ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿನಿ ಮೃತಪಟ್ಟು, 14 ಮಂದಿ ಅಸ್ವಸ್ಥರಾದ ಘಟನೆ ಕಳೆದ ತಿಂಗಳು ಕಾಸರಗೋಡುನಲ್ಲಿ ಸಂಭವಿಸಿತ್ತು. ಈ ಘಟನೆ ಮಾಸುವ ಮುನ್ನವೇ ಇಂತಹದ್ದೇ ದುರ್ಘಟನೆ ತಮಿಳುನಾಡಿನಲ್ಲಿ ಸಂಭವಿಸಿದ್ದು, ದ್ವಿತೀಯ ಪಿಯು ವಿದ್ಯಾರ್ಥಿಯೊಬ್ಬ ದುರಂತ ಅಂತ್ಯ ಕಂಡಿದ್ದಾನೆ. ತಂದೂರಿ ಚಿಕನ್ ಮತ್ತು ಫ್ರೈಡ್ ರೈಸ್ ತಿಂದ ಬಳಿಕ ಈತನಿಗೆ ವಾಂತಿ-ಭೇದಿ ಕಾಣಿಸುಕೊಂಡು ಕೊನೆಯುಸಿರೆಳೆದಿದ್ದಾನೆ.
ತಿರುಮುರುಗನ್(17) ಮೃತ ವಿದ್ಯಾರ್ಥಿ. ಈತ ತಿರುವಣ್ಣಾಮಲೈ ಜಿಲ್ಲೆಯ ಅರಣಿ ಪಟ್ಟಣದ ಆಪಲ್ ಶಾಲೆಯ ಮಾಲೀಕ ಗಣೇಶ್ (ಆಪಲ್ ಗಣೇಶ್) ಅವರ ಪುತ್ರ. ಗಣೇಶ್​ಗೆ ಇಬ್ಬರು ಪುತ್ರರು. ಈ ಪೈಕಿ ಓರ್ವ ಪುತ್ರನಾದ ತಿರುಮುರುಗನ್​ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದ. ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಮೇ 24ರಂದು ಅರಣಿ ಟೌನ್ ಗಾಂಧಿ ರಸ್ತೆಯ 5 ಸ್ಟಾರ್ ಎಲೈಟ್ ಹೋಟೆಲ್​ನಲ್ಲಿ ಸ್ನೇಹಿತರೊಂದಿಗೆ ಚಿಕನ್ ತಂದೂರಿ ಮತ್ತು ಫ್ರೈಡ್ ರೈಸ್ ಸೇವಿಸಿದ್ದ. ಅಂದು ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿಯಾಗಿದೆ. ಮರುದಿನ ಬೆಳಗ್ಗೆ ಕುಟುಂಬಸ್ಥರು ತಿರುಮುರುಗನ್​ನನ್ನು ಸಮೀಪದ ಖಾಸಗಿ ಕ್ಲಿನಿಕ್​ಗೆ ಕರೆದೊಯ್ದರಾದರೂ ಪ್ರಯೋಜನವಾಗಲಿಲ್ಲ. ತಿರುಮುರುಗನ್​ ಕೊನೆಯುಸಿರೆಳೆದ.
ಇದಕ್ಕೆ ಕಾರಣ ಹೋಟೆಲ್​ನಲ್ಲಿ ತಿಂದ ತಂದೂರಿ ಚಿಕನ್. ಆಹಾರವು ವಿಷಪೂರಿತ ಆಗಿದ್ದರಿಂದಲೇ ಮಗ ಸತ್ತಿದ್ದಾನೆ ಎಂದು ಮೃತನ ತಂದೆ ಗಣೇಶ್ ಅರಣಿ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಚಿಕನ್ ಶವರ್ಮ ಸೇವಿಸಿದ್ದ ಓರ್ವ ವಿದ್ಯಾರ್ಥಿನಿ ಸಾವು, 14 ಮಂದಿ ಅಸ್ವಸ್ಥ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
