ಮೂಲತಃ ಮಹಾರಾಷ್ಟ್ರದಸತಾರಾ ಜಿಲ್ಲೆಯ ರಹಿಮತಪುರದ ಹುಡುಗ ಕೈಲಾಸ್ ಕಾಟ್ಕರ್​. ಸದ್ಯ ಇವರು ಪುಣೆಯ ಶಿವಾಜಿನಗರದಲ್ಲಿರುವ ನರವೀರ ತಾನಾಜೀವಾಡಿ ಎಂಬಲ್ಲಿ ನೆಲೆಸಿದ್ದಾರೆ. ಈ ಹುಡುಗನ ತಂದೆ ಫಿಲಿಪ್ಸ್ ಕಂಪನಿಯಲ್ಲಿ ಹೆಲ್ಪರ್ ಎಂಬ ಹುದ್ದೆಯಲ್ಲಿ ಕಾರ್ಯನಿರತರಾಗಿದ್ದರು. ತಾಯಿ ಮಾತ್ರ ಗೃಹಣಿಯಾಗಿದ್ದರು. ಕೈಲಾಸ್​ಗೆ ಒಬ್ಬ ತಮ್ಮ ಮತ್ತು ಒಬ್ಬಳು ತಂಗಿ ಇದ್ದಾರೆ. ಐದು ಜನರ ಈ ಕುಟುಂಬವು ನತಾವಾಡಿಯಲ್ಲಿರುವ ಒಂದು ಚಿಕ್ಕ ಕೊಠಡಿಯಲ್ಲಿ (ಮನೆಯಲ್ಲಿ) ಈ ಮೊದಲು ವಾಸಿಸುತ್ತಿತ್ತು.
ಶಾಲೆ ಬಿಟ್ಟ ನಂತರದಲ್ಲೇ ನೈಜ ಕಲಿಕೆ ಆರಂಭಮೂರು ಮಕ್ಕಳಲ್ಲಿ ಕೈಲಾಸ್ ಹಿರಿಯವನು. ಆದ್ದರಿಂದ ಎಲ್ಲರೂ ಅವನ ಕಡೆಗೆ ವಿಶಿಷ್ಟವಾದ ಆಪೇಕ್ಷೆಯಿಂದಲೇ ನೋಡುತ್ತಿದ್ದರು. ಅವನಿಂದಲೇಎಲ್ಲ ಆಸೆ-ಆಕಾಂಕ್ಷೆಗಳೂ ಈಡೇರಬಲ್ಲವು ಎಂಬ ವಿಶ್ವಾಸ ಕುಟುಂಬಕ್ಕಿತ್ತು. ಏಕೆಂದರೆ ಕುಟುಂಬದ ವರಮಾನದ ಸ್ಥಿತಿಯು ಕಷ್ಟದ್ದೇ ಆಗಿತ್ತು. ಆದರೂ ಕೂಡ ಅವನನ್ನು ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಸೇರಿಸಲಾಗಿತ್ತು. ಪಠ್ಯಪುಸ್ತಕಗಳನ್ನು ಖರೀದಿಸಲು ಹಣವಿಲ್ಲ, ಶಾಲೆಯ ಶುಲ್ಕ ತುಂಬಿಸಲೂ ಕೈಯಲ್ಲಿ ಹಣವಿಲ್ಲ. ಅಂತೂ ಹಾಗೋ ಹೀಗೋ ಹತ್ತನೆ ತರಗತಿಯ ತನಕ ತಲುಪಿ, ವಿದ್ಯಾಭ್ಯಾಸ ಪೂರ್ತಿಯಾಯಿತು. ಆದರೆ ಅದು ಕೇವಲ ಹತ್ತನೇ ತರಗತಿ ಮಾತ್ರ ಸೀಮಿತವಾಗಿತ್ತು. ಆನಂತರ ವಿದ್ಯಾಭ್ಯಾಸ ಸಾಕು ಎಂಬ ತೀರ್ಮಾನ ಮಾಡಿದ ಕೈಲಾಸ್​ಗೆ ಅಲ್ಲಿಂದಲೇ ನೈಜವಾದ ವಿದ್ಯಾಭ್ಯಾಸದ ಪ್ರಾರಂಭವಾಯಿತು. ತನ್ನ ಜೀವನದಲ್ಲಿ ಕೇವಲ ವ್ಯವಹಾರದ ಅಭ್ಯಾಸವನ್ನೇ ಕಲಿಯುತ್ತಾ ಹೋದರು.
ಹಾಳಾದ ವಸ್ತುಗಳೇ ದಾರಿದೀಪಚಿಕ್ಕ ವಯಸ್ಸಿನಿಂದಲೂ ಕೈಲಾಸ್ ತಮ್ಮ ಮನೆಯಲ್ಲಿ ಯಾವುದೇ ಹಾಳಾದ ವಸ್ತುಗಳೊಂದಿಗೆ ಅನೇಕ ರೀತಿಯ ಚಟುವಟಿಕೆಗಳನ್ನು ಮಾಡುತ್ತಿದ್ದರು. ಹಾಳಾಗಿರುವ ವಸ್ತುಗಳ ನೈಜತೆಯನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದರು. ತಂದೆಯವರು ಫಿಲಿಪ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರಿಂದ ಅವರಿಗೆ ರೆಡಿಯೋ ದುರಸ್ತಿ ಮಾಡುವ ಬಗ್ಗೆ ತಿಳುವಳಿಕೆಯಿತ್ತು. ಆರನೇ ತರಗತಿಯಿಂದಲೂ ತಂದೆಯವರು ರೆಡಿಯೋ ದುರಸ್ತಿ ಮಾಡುವುದನ್ನು ನೋಡುತ್ತಾ, ತಾನೂ ರೆಡಿಯೋ ರಿಪೇರಿ ಮಾಡಲು ಪ್ರಾರಂಭಿಸಿದ್ದರು. ರೆಡಿಯೋ ದುರಸ್ತಿಯ ಕುರಿತಾದ ಒಂದು ತಿಂಗಳ ಕೋರ್ಸ್ ಕೂಡಾ ಪೂರ್ತಿಗೊಳಿಸಿದ್ದರು. ಆಗಲೇ ಕೈಲಾಸ್ ವಿಶೇಷವಾದ ಆತ್ಮವಿಶ್ವಾಸವು ಕಂಡುಬರುತ್ತಿತ್ತು. ಹತ್ತನೇ ತರಗತಿಯ ಫಲಿತಾಂಶದ ದಾರಿ ನೋಡದೇ ಉದ್ಯೋಗ ಹುಡುಕಲು ಪ್ರಾರಂಭಿಸಿದರು.
ಕೈಹಿಡಿದ ಕ್ಯಾಲ್ಕ್ಯುಲೇಟರ್ ರಿಪೇರಿ ಕೆಲಸಒಂದು ದಿನ ದಿನಪತ್ರಿಕೆಯೊಂದಲ್ಲಿ ಒಂದು ಜಾಹಿರಾತು ಕಂಡುಬಂತು. ಒಂದು ಕಂಪನಿಗೆ ಕ್ಯಾಲ್ಕ್ಯುಲೇಟರ್ ರಿಪೇರಿ ಮಾಡುವವರ ಆವಶ್ಯಕತೆ ಇದೆ ಎಂಬುದಾಗಿ ಆ ಜಾಹಿರಾತಿನಲ್ಲಿ ಬರೆದಿದ್ದು ಗಮನಕ್ಕೆ ಬಂತು. ಕೈಲಾಸ್ ಚಿಕ್ಕಂದಿನಿಂದಲೂ ಕ್ಯಾಲ್ಕ್ಯುಲೇಟರ್ ನೋಡಿದ್ದಿಲ್ಲ. ಆದರೂ ಕೂಡಾ ಆ ಕೆಲಸಕ್ಕೆಂದು ಅರ್ಜಿ ಸಲ್ಲಿಸಿ ದಾರಿ ನೋಡುತ್ತಿದ್ದ. ಕೈಲಾಸ್​ನ ಅದೃಷ್ಟದಿಂದಾಗಿ ಇಪತ್ತೈದು ಜನರಲ್ಲಿ ಇವರ ಆಯ್ಕೆ ಮಾಡಲಾಯಿತು. ತನ್ನಲ್ಲಿದ್ದ ಜಾಣತನ, ಕಲಿಯುವ ಹುಮ್ಮಸ್ಸು ಇವೆರಡರ ಉಪಯೋಗವು ಇಲ್ಲಾಯಿತು. ಕೆಲಸಕ್ಕೆ ಸೇರಿದ ನಂತರ ಕಂಪನಿಯಲ್ಲಿ ಕ್ಯಾಲ್ಕ್ಯುಲೇಟರ್ ರಿಪೇರಿಯ ಕೆಲಸವನ್ನು ಜಾಣತನದಿಂದ ಕಲಿತಾಯಿತು. ಇದಲ್ಲದೇ ಬ್ಯಾಂಕ್​ಗಳಲ್ಲಿರುವ ಲೇಸರ್ ಪೋಸ್ಟಿಂಗ್ ಮಶಿನ್, ಫಸೇಟ್ ಮಶಿನ್ ಇಂತಹ ಅನೇಕ ಮಶಿನ್​ಗಳ ದುರಸ್ತಿ ಮಾಡುವ ಕೆಲಸವನ್ನು ಈ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ ತಿಳಿದುಕೊಂಡು ಅವೆಲ್ಲದರ ಕುರಿತು ಆಳವಾದ ತಿಳುವಳಿಕೆಯನ್ನು ಮಾಡಿಕೊಂಡರು.
ತಿರುವು ನೀಡಿದ ಬ್ಯಾಂಕ್​ ಭೇಟಿಸ್ವಲ್ಪ ಕಾಲಾವಧಿಯ ನಂತರ ಕಂಪನಿಯ ಉದ್ಯೋಗವನ್ನು ಬಿಟ್ಟು ಮಂಗಳವಾರ ಪೇಟೆಯಲ್ಲಿ ಸ್ವಂತದ್ದೇ ಅಂಗಡಿಯೊಂದನ್ನು ಪ್ರಾರಂಭಿಸಿದರು. ತನ್ನೊಂದಿಗೆ ಸಹಾಯಕ್ಕೆಂದು ಒಬ್ಬ ಹುಡುಗನನ್ನೂ ಇಟ್ಟುಕೊಂಡರು. ಅವರಿಬ್ಬರೂ ಕೂಡಿ ದಿನವಿಡೀ ಬೇರೆ ಬೇರೆ ಮಶಿನ್​ಗಳೊಂದಿಗೆ ಚಟುವಟಿಕೆಗಳು ನಡೆಯುತ್ತಿದ್ದವು. ಹಣವೂ ಕೈಸೇರಲಾರಂಭಿಸಿತು. ಒಂದು ದಿನ ಕೈಲಾಸ್ ಯಾವುದೋ ಕೆಲಸಕ್ಕಾಗಿ ಬ್ಯಾಂಕ್​ಗೆ ಹೋಗಿದ್ದರು. ಆಗ ಅವರಿಗೆ ಅಲ್ಲಿ ಬೇರೆಯೇ ಹೊಸದಾದ ಮಶಿನ್ ಕಾಣಸಿಕ್ಕಿತು. ಅದರು ಕುರಿತು ವಿಚಾರಿಸಿದರು. ಯಾರೋ ಅದರ ಕುರಿತು ಅಲ್ಪ-ಸ್ವಲ್ಪ ಮಾಹಿತಿಯನ್ನು ಹೇಳಿದರು. ಆಗ ಕೈಲಾಸ್ ಅದರ ಕುರಿತು ವಿಚಾರ ಮಾಡಲು ಪ್ರಾರಂಭಿಸಿದರು. ಮುಂಬರುವ ದಿನಗಳಲ್ಲಿ ಕಂಪ್ಯೂಟರ್​ನ ಜಗತ್ತು ಎಂಬ ಅರಿವು ಅವನಿಗಾಯಿತು. ಆದ್ದರಿಂದ ಅದನ್ನು ಕಲಿಯಲೇಬೇಕು ಎಂಬ ನಿರ್ಧಾರವನ್ನು ಮಾಡಿದರು. ಆದರೆ ಈ ಕಂಪ್ಯೂಟರ್ ಕುರಿತಾದ ಶಿಕ್ಷಣವು ಎಲ್ಲಿ ಸಿಗಬಹುದೆಂಬ ಪ್ರಶ್ನೆಯು ಅವರನ್ನು ಕಾಡುತ್ತಿತ್ತು. ಇದು ಅವರ ಎದುರಿಗಿದ್ದ ಗಹನವಾದ ಪ್ರಶ್ನೆಯಾಗಿತ್ತು.
ಕಂಪ್ಯೂಟರ್​ ಕಡೆಗಿನ ಗಮನತೊಂಬತ್ತನೇ ದಶಕದಲ್ಲಿ ಕಂಪ್ಯೂಟರ್​ಗಳು ಭಾರತಲ್ಲಿ ತಮ್ಮ ನೆಲೆಯನ್ನೂರಲು ಪ್ರಾರಂಭಿಸಿದ್ದವು. ಕಂಪ್ಯೂಟರ್​ಗಳ ಬರುವಿಕೆಯಿಂದಾಗಿ ತಮ್ಮ ಉದ್ಯೋಗಗಳಿಗೆ ಎಲ್ಲಿ ತಡೆ ಬರುತ್ತದೋ, ಎಂಬುದಾಗಿ ಎಲ್ಲ ಸಂಘಟನೆಗಳು ಒಟ್ಟುಗೂಡಿ ಹೋರಾಟವನ್ನು ಪ್ರಾರಂಭಿಸಿದ್ದವು. ಕಂಪ್ಯೂಟರ್ ಆಗ ತುಂಬಾ ದುಬಾರಿಯಾಗಿತ್ತು. ಇಂತಹ ದುಬಾರಿಯಾಗಿರುವ ಕಂಪ್ಯೂಟರ್​ಗಳು ಕೇವಲ ದೊಡ್ಡ ದೊಡ್ಡ ಕಂಪನಿಗಳಲ್ಲಿಯೇ ಕಾಣುತ್ತಿದ್ದವು. ಆದ್ದರಿಂದ ಕೈಲಾಸ್​ಗೆ ಕಂಪ್ಯೂಟರ್​ನ ಹತ್ತಿರ ಹೋಗುವುದೂ ಅಸಾಧ್ಯವಾಗಿತ್ತು. ಅಲ್ಲದೇ ಕಂಪ್ಯೂಟರ್ ನೋಡಬೇಕು ಎಂಬ ಇಚ್ಛೆ ಇದ್ದರೂ ಕೂಡಾ ಅದರ ಹತ್ತಿರ ಯಾರೂ ಬಿಡುತ್ತಿರಲಿಲ್ಲ.
ಬದುಕು ಬದಲಿಸಿದ ಪ್ರಿಂಟರ್​ ರಿಪೇರಿಒಂದು ಸಲ ಕಂಪ್ಯೂಟರ್ ನೋಡುವ ಯೋಗ ಬಂತು. ಟೈಮ್ಸ್ ಆಫ್ ಇಂಡಿಯಾ ಆಫೀಸ್​ನಲ್ಲಿ ಮೂರು ಪ್ರಿಂಟರ್​ಗಳು ಕೆಲಸ ನಿರ್ವಹಿಸುತ್ತಿಲ್ಲ ಎಂಬುದು ತಿಳಿಯಿತು. ದುರಸ್ತಿ ಮಾಡುವವನ ಪ್ರಕಾರ ಈ ಪ್ರಿಂಟರ್​ನ ಉಪಯೋಗ ಯಾವುದೇ ರೀತಿಯಲ್ಲಿ ಆಗುವುದು ಅಸಾಧ್ಯ, ಆದ್ದರಿಂದ ಅದನ್ನು ಎಸೆಯುವುದೇ ಸೂಕ್ತ ಎಂದು ಹೇಳಿದ್ದನು. ಟೈಮ್ಸ್ ಆಫ್ ಇಂಡಿಯಾ ಎಸೆಯುವ ನಿರ್ಧಾರವನ್ನೂ ಕೈಗೊಂಡಿತು. ಆದರೆ ಅದೃಷ್ಟವಶಾತ್ ಅದೇ ಸಮಯಕ್ಕೆ ಕೈಲಾಸ್ ಅಲ್ಲಿಗೆ ಬಂದಿದ್ದ. ಕೈಲಾಸ್ ಹಟ ಹಿಡಿದು ಪಣ ತೊಟ್ಟು ಒಂದುವರೆ ಗಂಟೆಯೊಳಗಾಗಿ ಆ ಪ್ರಿಂಟರ್ ರಿಪೇರಿ ಮಾಡಿಕೊಟ್ಟರು.
ಕೈಹಿಡಿದ ಕಂಪ್ಯೂಟರ್​ಮುಂದೆ ಹಂತ ಹಂತವಾಗಿ ಕೈಲಾಸ್​ಗೆ ಪ್ರಿಂಟರ್ ದುರಸ್ತಿಯ ಕೆಲಸವಲ್ಲದೇ ಟೈಮ್ಸ್ ಆಫ್ ಇಂಡಿಯಾ ತಮ್ಮ ಕಂಪ್ಯೂಟರ್​ಗಳ ದುರಸ್ತಿ ಕೆಲಸವನ್ನೂ ನೀಡಿತು. ಎರಡು ವರ್ಷಗಳ ಕಾಲಾವಧಿಯ ಕರಾರನ್ನೂ ಮಾಡಿದರು. ಕೈಲಾಸ್​ನ ಆಯಷ್ಯದಲ್ಲಿ ಇದೇ ಒಂದು ಬದಲಾವಣೆಯ ಕಾಲವಾಯಿತು. ಟೈಮ್ಸ್ ಅಫ್ ಇಂಡಿಯಾದಲ್ಲಿ ಮಾಡಿರುವ ಕೆಲಸಗಳನ್ನು ನೋಡಿ ಇನ್ನಿತರ ಕಂಪನಿಗಳು, ಬ್ಯಾಂಕ್​ಗಳೂ ಕೈಲಾಸ್​ಗೆ ಕೆಲಸ ನೀಡಲಾರಂಭಿಸಿದರು. ಮುಂದಿನ ಕಾಲಾವಧಿಯಲ್ಲಿ ಕಂಪ್ಯೂಟರ್ ಹಾರ್ಡ್​ವೇರ್ ದುರಸ್ತಿಯಲ್ಲಿ ಕೈಲಾಸ್ ಕಾಟ್ಕರ್​ ಹೆಸರು ತುಂಬಾ ಪ್ರಸಿದ್ಧವಾಯಿತು.
ಕುಟುಂಬಕ್ಕೂ ಆಸರೆತನ್ನ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಬಿಟ್ಟರೂ ಕೂಡಾ ಕೈಲಾಸ್ ತನ್ನ ತಮ್ಮ-ತಂಗಿಯ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯಲ್ಲಿ ಹಿಂದೆ ಬೀಳಲಿಲ್ಲ. ಕೈಲಾಸ್ ತಮ್ಮನೂ ಕೂಡಾ ಕಲಿಕೆಯಲ್ಲಿ ತುಂಬಾ ಬುದ್ಧಿವಂತನಾಗಿದ್ದ. ಮಾಡರ್ನ್ ಕಾಲೇಜ್ ನಲ್ಲಿ ಅವನಿಗೆ ಕಂಪ್ಟೂಟರ್ ಇಂಜಿನಿಯರಿಂಗ್​ಗೆ ಅಡ್ಮಿಶನ್ ಪಡೆಯಲು ಒತ್ತಾಯಿಸಿದರಿ. ಇಡೀ ದಿನ ಕಾಲೇಜ್​ನಲ್ಲಿ ಕಲಿತು ಸಂಜೆ ಅಣ್ಣನ ಕೆಲಸಕ್ಕೆ ಸಹಾಯ ಮಾಡುತ್ತಿದ್ದರು.
ಆ್ಯಂಟಿ ವೈರಸ್​ ಚಿಂತನೆಅದೇ ಕಾಲಾವಧಿಯಲ್ಲಿ ವೈರಸ್ ಎಂಬುದರ ಕುರಿತು ಚರ್ಚೆಯು ಪ್ರಾರಂಭವಾಗಿತ್ತು. ಸಾಂಕ್ರಾಮಿಕ ರೋಗಗಳಿಂದ ಜನರು ಆನಾರೋಗ್ಯಕ್ಕೆ ಸಿಲುಕುತ್ತಾರೆ. ಅದೇ ರೀತಿಯಲ್ಲಿ ಕಂಪ್ಯೂಟರ್​ನಲ್ಲಿಯೂ ಯಾವುದೇ ಒಂದು ವಿಶಿಷ್ಟವಾದ ಪ್ರೊಗ್ರಾಮ್​ನ ಉಗಮವಾದಲ್ಲಿ ಕಂಪ್ಯೂಟರ್ ಕೂಡಾ ಹಾಳಾಗುತ್ತದೆ. ಈ ರೀತಿಯಲ್ಲಿ ಕಂಪ್ಯೂಟರ್ ಹಾಳಾಗಬಾರದು ಎಂಬುದಕ್ಕಾಗಿ ರೋಗ ಪ್ರತಿರೋಧಕ ಔಷಧವನ್ನು ಆ್ಯಂಟಿ ವೈರಸ್ ಎಂದು ಕರೆಯಲಾಗುತ್ತದೆ.
ಬದುಕು ಬದಲಿಸಿದ ವೈರಸ್​ಈ ವೈರಸ್​ನಂತಹ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಕಂಪ್ಯೂಟರ್​ಗಳು ಕೈಲಾಸ್​ ಅಂಗಡಿಗೆ ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದವು. ನೀವೇ ದುರಸ್ತಿ ಮಾಡಿ ಕೊಡಿ ಎಂದು ಹೇಳುತ್ತಿದ್ದರು. ಆದರೆ ಅದಕ್ಕೆ ಬೇಕಾಗುವ ಸಾಫ್ಟ್​ವೇರ್ ಮಾತ್ರ ಲಭ್ಯವಿರಲಿಲ್ಲ. ಅದಕ್ಕೆ ಹಾರ್ಡ್​ವೇರ್​ನ ತಿಳುವಳಿಕೆ ಇರುವವರು ಏನು ಮಾಡಬಲ್ಲರು. ಆದರೆ ತುಂಬಾ ಶ್ರಮವಹಿಸಿ ಕೈಲಾಸ್ ಇಂತಹ ವೈರಸ್ ಎಂಬ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಕಂಪ್ಯೂಟರ್​ಗಳನ್ನು ರಿಪೇರಿ ಮಾಡಿಕೊಡುತ್ತಿದ್ದರು. ಕೈಲಾಸ್ ತಮ್ಮ ಸಂಜಯ್ ಆಗಾಗ ವೈರಸ್ ಎಂಬ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಕಂಪ್ಯೂಟರ್​ಗಳಿಗೆ ಉಪಾಯವನ್ನು ಹುಡುಕಿ ಒಂದು ಟೂಲ್ ತಯಾರಿಸಿದರು. ಈ ಟೂಲ್ ಮಾತ್ರ ಗ್ರಾಹಕರು ತುಂಬಾ ಮೆಚ್ಚಿದರು. ಗ್ರಾಹಕರೆಲ್ಲರಿಗೂ ತುಂಬಾ ಸಂತೋಷವಾಯಿತು.
ಉಗಮವಾಯಿತು ಕ್ವಿಕ್​ ಹೀಲ್​ಈ ಕಾಲಾವಧಿಯಲ್ಲಿ ಕೈಲಾಸ್ ಕಾಟ್ಕರ್​ ಬಿಜಿನೆಸ್ ಮೈಂಡ್​ನಲ್ಲಿ ಹೊಸದಾದ ಯೋಜನೆಯೊಂದು ಮೂಡಿಬಂತು. ಇಂತಹ ಆ್ಯಂಟಿ ವೈರಸ್​ನ ಉದ್ಯೋಗವು ಸಾಕಷ್ಟು ಹಣವನ್ನು ನೀಡಬಲ್ಲದು ಎಂಬ ವಿಚಾರವೂ ಕೈಲಾಸ್ ಕಾಟ್ಕರ್​ ಮನಸ್ಸಿನಲ್ಲಿ ಮೂಡಿಬಂತು. ತಮ್ಮನಿಗೋಸ್ಕರ ಒಂದು ವಿಶೇಷವಾದ ಕಂಪ್ಯೂಟರ್ ಖರೀದಿ ಮಾಡಿದರು. ನತಾವಾಡಿಯಲ್ಲಿರುವ ತಮ್ಮ ಒಂದು ಕೊಠಡಿಯ ಮನೆಯಲ್ಲಿ ಸಂಜಯ್ ಕಾಟ್ಕರ್​ ಆ್ಯಂಟಿವೈರಸ್ ತಯಾರಿಸಲು ಪ್ರಾರಂಭಿಸಿದರು. ಒಂದೂವರೆ ವರ್ಷದ ಕಾಲಾವಧಿಯಲ್ಲಿ ಒಬ್ಬ ಹಳ್ಳಿಯಿಂದ ಪಟ್ಟಣಕ್ಕೆ ಬಂದಿರುವ ಹುಡುಗ ತನ್ನದೇ ಆದ ಆ್ಯಂಟಿವೈರಸ್ ತಯಾರಿಸಿದರು. ಅದಕ್ಕೆ ಹೆಸರೊಂದನ್ನೂ ನೀಡಲಾಯಿತು. ಆ ಹೆಸರೇ ಕ್ವಿಕ್ ಹೀಲ್.
ದೇಶಾದ್ಯಂತ ಹರಡಿದ ಆ್ಯಂಟಿವೈರಸ್​ಸಂಜಯ್ ಕಾಟ್ಕರ್​ ಆ್ಯಂಟಿವೈರಸ್​ಗೋಸ್ಕರ ಒಂದು ಲಾಂಛನದ (ಲೊಗೋ) ವಿನ್ಯಾಸವನ್ನೂ (ಡಿಸೈನ್) ಮಾಡಿದರು. ಆ್ಯಂಟಿವೈರಸ್​ಗೋಸ್ಕರ ಒಂದು ಪ್ಯಾಕೇಜಿಂಗ್ ಕೂಡಾ ತಯಾರಿಸಿದರು. ಕೈಲಾಸ್ ಕಾಟ್ಕರ್​ ಅನೇಕ ಕಂಪನಿಗಳಿಗೆ ಭೇಟಿ ನೀಡಿ ತಮ್ಮ ಈ ಉತ್ಪಾದನೆಯ ಮಾರಾಟವನ್ನು ಮಾಡಲಾರಂಭಿಸಿದರು. ಕಂಪ್ಯೂಟರ್​ನಲ್ಲಿರುವ ಡಾಟಾ ನಷ್ಟ ಮಾಡುವ ವೈರಸ್ ಇಲ್ಲದಂತೆ ಮಾಡಲು ಆ್ಯಂಟಿವೈರಸ್ ಎಂಬ ಸಾಫ್ಟ್​ವೇರ್ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಪ್ರತಿಯೊಬ್ಬರಿಗೆ ಹೇಳುವುದು ತುಂಬಾ ಕಠಿಣವಾದ ಕೆಲಸವಾಗಿತ್ತು. ಆದರೂ ಕೂಡಾ ತನ್ನಲ್ಲಿರುವ ಧೈರ್ಯವನ್ನು ಬಿಡದೇ ತನ್ನ ಕೆಲಸವನ್ನು ಮುಂದುವರಿಸಿದರು. ಅದೇ ಕಾಲಾವಧಿಯಲ್ಲಿ ದೇಶದ ಅನೇಕ ಪಟ್ಟಣಗಳಲ್ಲಿ ಐಟಿ ಕಂಪನಿಗಳು ಕೆಲಸವನ್ನು ಪ್ರಾರಂಭಿಸಿದ್ದವು. ಐಟಿ ಪಾರ್ಕ್​ಗಳು ಅಲ್ಲಿಲ್ಲಿ ಕಂಡುಬರಲಾರಂಭಿಸಿದವು. ಹೊಸದಾಗಿ ನೆಲೆಯೂರುತ್ತಿರುವ ಕಂಪನಿಗಳಿಗೆ ವಿದೇಶದ ದುಬಾರಿಯಾಗಿರುವ ಆ್ಯಂಟಿವೈರಸ್​​ಗಳಿಗಿಂತ ಸ್ವದೇಶದಲ್ಲಿಯೇ ತಯಾರಾಗಿರುವ ಕಡಿಮೆ ಬೆಲೆಯ ಆ್ಯಂಟಿವೈರಸ್ ತುಂಬಾ ಖುಷಿಯನ್ನುಂಟು ಮಾಡಿತು. ಮುಂದಿನ ದಿನಗಳಲ್ಲಿ ಕ್ವಿಕ್ ಹೀಲ್ ಆ್ಯಂಟಿವೈರಸ್​ನೊಂದಿಗೆ ಅನೇಕ ಕಂಪನಿಗಳು ಒಂದೊಂದು ವರ್ಷದ ಕರಾರನ್ನೂ ಮಾಡಲಾರಂಭಿಸಿದರು.
ಒಂದು ಲಕ್ಷ ಚದರ ಅಡಿಯ ಬೃಹತ್ ಆಫಿಸ್​ಕಾಲ ಕಳೆದಂತೆ ಮೊಬೈಲ್ ಕೂಡಾ ಇಲ್ಲದಿರುವ ಮಾರುಕಟ್ಟೆಯಲ್ಲಿ ಆಫ್ಟರ್ ಸೇಲ್ಸ್ ಸರ್ವಿಸ್​ಗೆ ಕೂಡಾ ತುಂಬಾ ಮಹತ್ವವಿತ್ತು. ಕೈಲಾಸ್ ಕಾಟ್ಕರ್​ ತುಂಬಾ ಶ್ರಮವಹಿಸಿ ತಮ್ಮ ಗ್ರಾಹಕರಿಗೆ ಸೂಕ್ತವಾದ ರೀತಿಯಲ್ಲಿ ಸೇವೆಯನ್ನು ನೀಡಲಾರಂಭಿಸಿದರು. ಪುಣೆಯಲ್ಲಿ ಪ್ರಾರಂಭಿಸಲಾದ ಈ ಉದ್ಯೋಗವು ನಾಸಿಕ್, ಮುಂಬಯಿಯಲ್ಲಿಯೂ ತಮ್ಮ ತಂಡವನ್ನು ನೆಲೆಸಿದರು. ಬೇರೆಬೇರೆ ಪಟ್ಟಣಗಳಿಗೆ ಭೇಟಿ ನೀಡಿದ್ದರಿಂದ ಅದರ ಲಾಭವು ಅವರಿಗಾಗಲು ಪ್ರಾರಂಭವಾಯಿತು. ಮಾರುಕಟ್ಟೆಯಲ್ಲಿ ಸ್ಪರ್ಧೆ ಇದ್ದರೂ ಕೂಡಾ ತಾವು ನೀಡುತ್ತಿರುವ ಉಚ್ಚಗುಣಮಟ್ಟದ ಫಲಿತಾಂಶದಿಂದಾಗಿ ಕ್ವಿಕ್ ಹೀಲ್ ತುಂಬಾ ವಿಸ್ತಾರವಾಗಿ ಬೆಳೆಯಿತು. ಮಂಗಳವಾರಪೇಟೆಯ ಒಂದು ಚಿಕ್ಕ ಆಫಿಸ್​ನಲ್ಲಿ ಪ್ರಾರಂಭಿಸಿದ ಉದ್ಯೋಗವು ಒಂದು ಲಕ್ಷ ಚದರ ಅಡಿಯ ಬೃಹತ್ ಆಫಿಸ್​ನಲ್ಲಿ ರೂಪಾಂತರಿಸಲ್ಪಟ್ಟಿತು ಎಂಬುದು ಗಮನಕ್ಕೆ ಬಂದಿಲ್ಲ. ಗಮನಿಸಲಿಕ್ಕೆ ಸಮಯವೂ ಸಿಗಲಿಲ್ಲ. ಆ ರೀತಿ ಬೆಳೆದರು.
ದೇಶ-ವಿದೇಶಗಳಲ್ಲಿ ಕಂಪನಿಸದ್ಯಕ್ಕೆ ಈ ಕಂಪನಿಯಲ್ಲಿ ಒಂದು ಸಾವಿರದ ಮುನ್ನೂರು ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಕೇವಲ ಭಾರತದಲ್ಲದೇ, ವಿದೇಶದಲ್ಲಿಯೂ ಅವರ ಆಫಿಸ್​ಗಳು ಕೆಲಸವನ್ನು ನಿರ್ವಹಿಸುತ್ತಿವೆ. ಇಂದಿನ ಸ್ಥಿತಿಯಲ್ಲಿ ಎಂಬತ್ತಕ್ಕಿಂತಲೂ ಹೆಚ್ಚು ದೇಶಗಳಲ್ಲಿರುವ ಕಂಪ್ಯೂಟರ್​ಗಳಲ್ಲಿ ನಮ್ಮ ದೇಶದ ಆ್ಯಂಟಿವೈರಸ್ ಅಳವಡಿಸುವುದನ್ನು ನೋಡಬಹುದು ಮತ್ತು ಈ ಸಾಮ್ರಾಜ್ಯವನ್ನು ಸ್ಥಾಪಿಸಿದ್ದು ಕೇವಲ ಹತ್ತನೇ ತರಗತಿಯ ತನಕ ವಿದ್ಯಾಭ್ಯಾಸ ಪೂರ್ತಿಗೊಳಿಸಿ ಶಾಲೆಯನ್ನು ಬಿಟ್ಟಿರುವ ಮರಾಠಿ ಹುಡುಗ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
