ಭುವನೇಶ್ವರ:ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು (ಸೆ.17) ಹುಟ್ಟುಹಬ್ಬದ ಸಂಭ್ರಮ. 71ನೇ ವಸಮತಕ್ಕೆ ಕಾಲಿಟ್ಟ ಅವರಿಗೆ ದೇಶ-ವಿದೇಶದಾದ್ಯಂತ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಸಂಖ್ಯಾತ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರ ಫೋಟೋ ಹಾಕಿಕೊಂಡು ಜನ್ಮದಿನಕ್ಕೆ ಶುಭಾಶಯ ಕೋರುತ್ತಿದ್ದಾರೆ. ಹಲವು ದೇವಸ್ಥಾನಗಳಲ್ಲಿ ಮೋದಿ ಹೆಸ್ರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನೆಚ್ಚಿನ ನಾಯಕನಿಗೆ ಶುಭ ಕೋರುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಖ್ಯಾತ ಮರಳು ಶಿಲ್ಪಿ ಸುದರ್ಶನ್​ ಪಟ್ನಾಯಕ್​ ಅವರು ಸಮುದ್ರ ಚಿಪ್ಪುಗಳಿಂದ ರಚಿಸಿರುವ ಮೋದಿ ಅವರ ಶಿಲ್ಪದ ಫೋಟೋ ಸಖತ್​ ವೈರಲ್​ ಆಗಿದೆ.
ಖ್ಯಾತ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಶುಕ್ರವಾರ ಪುರಿ ಕಡಲತೀರದಲ್ಲಿ ಮೋದಿ ಅವರ ಚಿತ್ರವನ್ನು ಮರಳಿನಲ್ಲಿ ರಚಿಸಿ, “ಮೋದಿಯವರ ಜನ್ಮದಿನದ ಶುಭಾಶಯಗಳು” ಎಂಬ ಅಕ್ಷರವನ್ನೂ ಮೂಡಿಸಿದ್ದಾರೆ. ಮೋದಿಯವರ ಮರಳು ಶಿಲ್ಪ ಕಲಾಕೃತಿಯ ಸುತ್ತಲೂ 2035 ಸಮುದ್ರ ಚಿಪ್ಪುಗಳನ್ನು ಬಳಸಿ ಅಲಂಕರಿಸಲಾಗಿದೆ.
A well-known Indian sand artist@sudarsansandextended his wishes by creating a sand sculpture of PM@narendramodiat#Puribeach in#Odishawishing him on his 71st birthday.https://t.co/KAWyfVFhWr
— Oneindia News (@Oneindia)September 17, 2021

ಟ್ವಿಟರ್‌ನಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿರುವ ಸುದರ್ಶನ್ ಪಟ್ನಾಯಕ್, ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಸುದರ್ಶನ್ ಪಟ್ನಾಯಕ್ ಅವರು ಕಳೆದ ವಾರ ಗಣೇಶ ಹಬ್ಬದ ಪ್ರಯುಕ್ರ ಸಮುದ್ರ ಚಿಪ್ಪುಗಳನ್ನು ಬಳಸಿ ಮರಳಿನಲ್ಲಿ ಗಣೇಶ ಕಲಾಕೃತಿ ರಚಿಸಿ ಗಮನ ಸೆಳೆದಿದ್ದರು.
ಮಗುವಿಗೆ ಜನ್ಮ ನೀಡಿ ಅವಿವಾಹಿತೆ ಸಾವು: ಆ ಇಬ್ಬರಲ್ಲಿ ಮಗುವಿನ ತಂದೆ ಯಾರು? ಶಿವಮೊಗ್ಗದಲ್ಲೊಂದು ವಿಚಿತ್ರ ಲವ್ ಕೇಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − seven =
Remember me
