ಚೆನ್ನೈ:ವೈದ್ಯಕೀಯ ಮತ್ತು ದಂತ ವೈದ್ಯಕೀಯ, ಆಯುಷ್​ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸಿದ “ನೀಟ್​-2022” ಪರೀಕ್ಷೆಯ ಫಲಿತಾಂಶವು ಸೆ.7ರ ತಡರಾತ್ರಿ ಪ್ರಕಟಗೊಂಡಿದ್ದು, ಅನುತ್ತೀರ್ಣವಾಗಿದ್ದಕ್ಕೆ ನೊಂದ 19 ವರ್ಷದ ಯುವತಿಯೊಬ್ಬಳು ಆಹ್ಮಹತ್ಯೆ ಮಾಡಿಕೊಂಡಿದ್ದಾಳೆ.
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ 19 ವರ್ಷದ ಯುವತಿ ಮೃತೆ. ಜು.17ರಂದು ನೀಟ್​(ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಪರೀಕ್ಷೆ ನಡೆದಿತ್ತು. 18 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ತಿರುವಳ್ಳೂರು ಜಿಲ್ಲೆಯ ಈ ಯುವತಿಯೂ ಪರೀಕ್ಷೆ ಬರೆದಿದ್ದಳು. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್​ಟಿಎ) ಬುಧವಾರ ತಡರಾತ್ರಿ ನೀಟ್​ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ.
ಗುರುವಾರ ಬೆಳಗ್ಗೆ ಯುವತಿಯ ಶವ ಆಕೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನೀಟ್​ ಎಕ್ಸಾಂನಲ್ಲಿ ಅನುತೀರ್ಣಗೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ನೀಟ್​ನಲ್ಲಿ ರಾಜ್ಯದವರ ಪಾರಮ್ಯ; ಟಾಪರ್​ಗಳ ಸಾಲಿನಲ್ಲಿ ಆರು ವಿದ್ಯಾರ್ಥಿಗಳು

ಯುವತಿ ಜತೆ ಮೈಸೂರಿನ ಲಾಡ್ಜ್​ನಲ್ಲಿ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + four =
Remember me
