ಚೆನ್ನೈ:ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಅರುಮುಗಸ್ವಾಮಿ ನೇತೃತ್ವದ ತನಿಖಾ ಆಯೋಗವು ವರದಿ ಸಿದ್ಧಪಡಿಸಿದ್ದು, ಅದರಲ್ಲಿ ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ, ಮಾಜಿ ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್, ವೈದ್ಯ ಕೆ. ಶಿವಕುಮಾರ್, ಐಎಎಸ್ ಅಧಿಕಾರಿಯೂ ಆದ ಅಂದಿನ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ವಿರುದ್ಧ ತನಿಖೆ ನಡೆಸಲು ಸೂಚಿಸಿದೆ.
ಜಯಲಲಿತಾ ಅವರ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಇಂದೊಂದು ಪೂರ್ವ ನಿಯೋಜಿತ ಕೊಲೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಪ್ರಕರಣವನ್ನ ನ್ಯಾಯಮೂರ್ತಿ ಆರುಮುಘಸ್ವಾಮಿ ನೇತೃತ್ವದ ತನಿಖಾ ಆಯೋಗವು ತನಿಖೆ ನಡೆಸುತ್ತಿದೆ. ಆ ಆಯೋಗವು ಸಲ್ಲಿಸಿರುವ ವರದಿಯನ್ನು ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ವರದಿಯಲ್ಲಿ ಶಶಿಕಲಾ ಸೇರಿದಂತೆ ನಾಲ್ವರ ಹೆಸರಲು ಉಲ್ಲೇಖಿಸಲಾಗಿದ್ದು, ಹೆಚ್ಚಿನ ತನಿಖೆಗೆ ನಿರ್ದೇಶಿಸಿದೆ.
2016ರ ಸೆಪ್ಟೆಂಬರ್​ 22ರಂದು ಜಯಲಲಿತಾ ಅವರನ್ನು ಇದ್ದಕ್ಕಿದ್ದಂತೆ ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದರ ಹಾಗೂ ಚಿಕಿತ್ಸೆ ನೀಡಿರುವ ಬಗ್ಗೆ ಪ್ರಸ್ತಾಪಿಸಿರುವ ಆಯೋಗವು, ವೈದ್ಯರ ಸಲಹೆ ಬಳಿಕವೂ ಜಯಲಲಿತಾ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಿಲ್ಲವೇಕೆ? ಇಂಗ್ಲೆಂಡ್​ನ ವೈದ್ಯ ಡಾ.ರಿಚರ್ಡ್ ಬೇಲೆ ಅವರು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆತರುವಂತೆ ಹೇಳಿದರೂ ಜಯಲಲಿತಾ ಅವರನ್ನು ಏಕೆ ಕರೆದೊಯ್ಯಲಿಲ್ಲ ಎಂದು ಪ್ರಶ್ನಿಸಿದೆ. ದೋಷಾರೋಪ ಇರುವ ಹಿನ್ನೆಲೆ ಶಶಿಕಲಾ, ಶಿವಕುಮಾರ್​, ವಿಜಯಭಾಸ್ಕರ್​ ಮತ್ತು ರಾಧಾ ಕೃಷ್ಣನ್​ ವಿರುದ್ಧ ತನಿಖೆಗೆ ಆದೇಶಿಸಲು ನಿರ್ಧರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಶಶಿಕಲಾ ವಿರುದ್ಧ 1997 ರಲ್ಲಿ ಅಕ್ರಮ ಹಣ ಸಂಪಾದನೆ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಶಶಿಕಲಾ ಅವರನ್ನು 1997 ಹಾಗೂ 2014ರಲ್ಲಿ ಎರಡು ಬಾರಿ ಬಂಧಿಸಲಾಗಿತ್ತು. 2017ರ ಫೆಬ್ರುವರಿ 15ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಶಶಿಕಲಾ ಅಲಿಯಾಸ್​ ಚಿನ್ನಮ್ಮಾ, ಕಳೆದ ವರ್ಷ ಬಿಡುಗಡೆಯಾಗಿದ್ದರು.
ಪಾವಗಡದ ಸೋಲಾರ್ ಪಾರ್ಕ್ ಮುಳುಗಡೆ: ಏಷ್ಯಾದ ಅತಿ ದೊಡ್ಡ ಸೌರ ಘಟಕದಲ್ಲಿ ಯುವಕನೊಬ್ಬ ಈಜಾಡುತ್ತಿರುವ ದೃಶ್ಯ ವೈರಲ್​

ಒಕ್ಕಲಿಗರು ಜಮೀನು ಕಳೆದುಕೊಂಡು ನಿರ್ಗತಿಕರಾಗುತ್ತಿದ್ದಾರೆ: ಡಾ. ನಿರ್ಮಲಾನಂದನಾಥ ಸ್ವಾಮೀಜಿ ಕಳವಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 20 =
Remember me
