ವಾರಣಾಸಿ:ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ-ಬರ್ಕೋಟ್ ಸುರಂಗದಲ್ಲಿ ಸಿಲುಕಿರುವ ಕನಿಷ್ಠ 40 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಶನಿವಾರ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಪರಿಶೀಲಿಸಲು ಪ್ರಧಾನಿ ಕಾರ್ಯಾಲಯದ ತಂಡವು ಸ್ಥಳಕ್ಕೆ ತಲುಪಿತು.
ಇದನ್ನೂ ಓದಿ:ಉತ್ತರಕಾಶಿ- ಸಿಲ್ಕ್ಯಾರಾ ಸುರಂಗ ಕೊರೆಯುವಿಕೆ ಸ್ಥಗಿತ: ವಾರದಿಂದ ಒಳಗೆ ಸಿಲುಕಿರುವ 40 ಕಾರ್ಮಿಕರ ರಕ್ಷಣೆ ಹೇಗೆ?ಕುಸಿದ ಸುರಂಗದಲ್ಲಿ ಶುಕ್ರವಾರಕ್ಕೆ 24 ಮೀಟರ್‌ಗಳಷ್ಟು ಕೊರೆಯುವಲ್ಲಿ ರಕ್ಷಣಾ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ಸಿಲುಕಿರುವ ಕಾರ್ಮಿಕರನ್ನು ತಲುಪಲು 60 ಮೀಟರ್ (195 ಅಡಿ) ವರೆಗೆ ಕೊರೆಯಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
#WATCH| Uttarakhand: Uttarkashi tunnel rescue operation | Prime Minister’s Office (PMO) Deputy Secretary Mangesh Ghildiyal arrives at the spot.pic.twitter.com/B4rLsu8EIl
— ANI (@ANI)November 18, 2023
ಶುಕ್ರವಾರ ಸಂಜೆ ಬಂಡೆ ಬಿರುಕು ಬಿಟ್ಟ ಜೋರಾದ ಶಬ್ದ ಕೇಳಿದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು. ಇಂದೋರ್‌ನಿಂದ ಹೊಸ ಯಂತ್ರವು ಬರುತ್ತಿದ್ದು, ಶನಿವಾರ ಮತ್ತೆ ಸುರಂಗ ಕೊರೆವ ಕೆಲಸ ಮಾಡಲಾಗುತ್ತಿದೆ. ಈ ನಡುವೆ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಲು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಉಪ ಕಾರ್ಯದರ್ಶಿ ಮಂಗೇಶ್ ಗಿಲ್ಡಿಯಾಲ್ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಂತರ ಕಾರ್ಯಾಚರಣೆ ಚುರುಕುಗೊಳಿಸುವ ಕುರಿತು ಅಧಿಕಾರುಗಳ ಜತೆ ಚರ್ಚಿಸಿದರು.
ಸಿಕ್ಕಿಬಿದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಬರಲು ಮಾರ್ಗ ಸಿದ್ಧಪಡಿಸಲು ಕೊರೆದ ಮಾರ್ಗದಲ್ಲಿ 4 ಪೈಪ್​ಗಳನ್ನು ಅಳವಡಿಸಿದ್ದು, ಐದನೇ ಪೈಪ್ ಅನ್ನು ಅಳವಡಿಸಬೇಕಿದೆ ಎಂದು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (ಎನ್​ಎಚ್​ಐಡಿಸಿಎಲ್​) ಅಧಿಕಾರಿಗಳು ಮಂಗೇಶ್ ಅವರಿಗೆ ಮಾಹಿತಿ ನೀಡಿದರು.
ಸಿಕ್ಕಿಬಿದ್ದ ಎಲ್ಲಾ ಕಾರ್ಮಿಕರು ಇಲ್ಲಿಯವರೆಗೆ ದೈಹಿಕ, ಮಾನಸಿಕವಾಗಿ ಸದೃಢರಾಗಿದ್ದಾರೆ, ಪೈಪ್​ಗಳ ಮೂಲಕ ಆಮ್ಲಜನಕ, ಔಷಧಿ, ಆಹಾರ ಮತ್ತು ನೀರಿನಂತಹ ಅಗತ್ಯ ಸರಬರಾಜನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಮಾನಸಿಕ ತಜ್ಞರು ಸಹ ಅವರೊಂದಿಗೆ ಮಾತನಾಡುತ್ತಿದ್ದಾರೆ ಎಂದು ಎನ್​ಎಚ್​ಐಡಿಸಿಎಲ್ ನ ನಿರ್ದೇಶಕ ಅಂಶು ಮನೀಶ್ ಖಲ್ಖೋ ಖಚಿತಪಡಿಸಿದರು.
ಬ್ಯಾಕಪ್ ಡ್ರಿಲ್ಲಿಂಗ್ ಮೆಷಿನ್:ಈಗ ಕಾರ್ಯನಿರ್ವಹಿಸುತ್ತಿರುವ 25-ಟನ್‌ನ ಅಮೇರಿಕನ್ ನಿರ್ಮಿತ ಆಗರ್ ಯಂತ್ರವನ್ನು ಹೋಲುವ ಸಾಧನಗಳನ್ನು ಇಂದೋರ್‌ನಿಂದ “ಬ್ಯಾಕ್‌ಅಪ್” ಆಗಿ ತರಲಾಗುತ್ತಿದೆ ಆದ್ದರಿಂದ ರಕ್ಷಣಾ ಕಾರ್ಯಾಚರಣೆಯು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ. ರಕ್ಷಣಾ ಕಾರ್ಯಕರ್ತರು 800- ಮತ್ತು 900- ಮಿಲಿಮೀಟರ್ ವ್ಯಾಸದ ಪೈಪ್‌ಗಳನ್ನು ಸೇರಿಸಲು 60 ಮೀಟರ್‌ಗಳವರೆಗೆ ಕೊರೆಯಬೇಕು. ಒಂದರ ನಂತರ ಒಂದರಂತೆ – ದೈತ್ಯ ಡ್ರಿಲ್‌ನ ಸಹಾಯದಿಂದ ಸಿಲುಕಿರುವ ಕಾರ್ಮಿಕರಿಗೆ ಹೊರಬರುವ ಮಾರ್ಗವನ್ನು ರಚಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಫಿಲಿಪ್ಪೀನ್ಸ್​ನಲ್ಲಿ ಭಾರಿ ಭೂಕಂಪ – ಧರಾಶಾಯಿಯಾದ ಕಟ್ಟಡಗಳು…

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 × 2 =
Remember me
