ನವದೆಹಲಿ:ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ದೃಷ್ಟಿಭ್ರಮ ಎಂದರೇನು?ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.
ವ್ಯಕ್ತಿತ್ವ ಅನಾವರಣಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೆಟ್ಟಿಗರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ತಮ್ಮನ್ನು ಮನರಂಜಿಸುವ ಮೋಜಿನ ಮಾರ್ಗವಾಗಿದೆ ಮತ್ತು ಸ್ನೇಹಿತರೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಮಾರ್ಗವಾಗಿದೆ ಎಂದು ಭಾವಿಸುತ್ತಾರೆ. ಇದರ ಹೊರತಾಗಿ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್​ಗಳು ಸಹ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಅಲ್ಲದೆ, ವ್ಯಕ್ತಿಯ ವ್ಯಕ್ತಿತ್ವ ಮತ್ತು ಸ್ವಭಾವ ಎಂಥದ್ದು ಎಂದು ತಿಳಿಯಲು ಕೂಡ ಇದು ಸಹಕಾರಿಯಾಗಿದೆ.

ಈ ಮೇಲಿನ ಫೋಟೋ ನೋಡಿ ಮೊದಲ ನೋಟದಲ್ಲಿ ನಿಮಗೆ ಏನು ಕಾಣುತ್ತದೆ ಎಂಬ ಅರ್ಥದಲ್ಲಿ ನಿಮ್ಮ ವ್ಯಕ್ತಿತ್ವ ಎಂಥದ್ದು ಹೇಳಬಹುದು. ಅಂದರೆ, ನಿಮ್ಮ ಗುಣಗಳನ್ನು ನೀವು ಊಹಿಸಬಹುದು.
ಈ ಚಿತ್ರದಲ್ಲಿ ಏನು ಕಾಣುತ್ತದೆ?1. ಮಾನವನ ಮುಖ* ನೀವು ಮೊದಲ ಬಾರಿಗೆ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ ನಿಮಗೆ ಮಾನವ ಮುಖವನ್ನು ಕಂಡರೆ, ಯಾವುದೇ ಕಷ್ಟಕರ ಪರಿಸ್ಥಿತಿಯನ್ನು ಜಯಿಸುವ ಶಕ್ತಿ ನಿಮಗೆ ಇರುತ್ತದೆ ಎಂದರ್ಥ.* ಯಾವುದನ್ನೂ ಶಾಂತವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದೀರಿ.* ಎಷ್ಟೇ ದೊಡ್ಡ ಬಿಕ್ಕಟ್ಟು ಬಂದರೂ ಶಾಂತವಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ನಿಮ್ಮಲ್ಲಿರುತ್ತದೆ.* ನೀವು ಇತರರ ಗಮನವನ್ನು ಸೆಳೆಯುವಿರಿ ಮತ್ತು ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತೀರಿ.* ನಿಮ್ಮ ದೌರ್ಬಲ್ಯವನ್ನು ತಿಳಿದುಕೊಳ್ಳುತ್ತಾರೆ ಎಂಬ ಭಯದಿಂದ ನೀವು ಹೆಚ್ಚು ಮಾತನಾಡುವುದಿಲ್ಲ.* ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ನಿಮ್ಮನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ.
2. ಮಹಿಳೆ* ಚಿತ್ರದಲ್ಲಿ ನೀವು ಮೊದಲು ನೋಡುವುದು ಬಿಳಿ ಉಡುಗೆಯಲ್ಲಿ ಪುಸ್ತಕವನ್ನು ಓದುತ್ತಿರುವ ಮಹಿಳೆಯಾಗಿದ್ದರೆ, ನೀವು ಬುದ್ಧಿಜೀವಿಗಳು.* ನೀವು ಯಾವಾಗಲೂ ಹೊಸದನ್ನು ಕಲಿಯುತ್ತೀರಿ.* ನೀವು ಯಾವಾಗಲೂ ಏನನ್ನಾದರೂ ಕುರಿತು ಯೋಚಿಸುತ್ತಿರುತ್ತೀರಿ.
3. ಕುರ್ಚಿ* ಫೋಟೋ ನೋಡುವಾಗ ಮೊದಲು ಖುರ್ಚಿ ಕಂಡರೆ ನಿಮ್ಮ ವೈಯುಕ್ತಿಕ ಜೀವನವನ್ನು ಗೌಪ್ಯವಾಗಿಡುತ್ತೀರಿ ಎಂದರ್ಥ. ಇದೇ ನಿಮ್ಮ ಶಕ್ತಿಯು ಹೌದು.* ಈ ರೀತಿಯ ವಿಭಿನ್ನ ದೃಷ್ಟಿಕೋನದಿಂದ ವರ್ತಿಸುವ ಮೂಲಕ, ನೀವು ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು.* ಯಾವುದೇ ಸಮಸ್ಯೆಗಳಿಗೆ ನೀವು ಸೃಜನಾತ್ಮಕ ಪರಿಹಾರಗಳೊಂದಿಗೆ ಬರಲು ಬಯಸುತ್ತೀರಿ.* ದೀರ್ಘಕಾಲದವರೆಗೆ ಒಂದು ವಿಷಯದ ಮೇಲೆ ಕೇಂದ್ರೀಕರಿಸಲು ನೀವು ಹೆಣಗಾಡುತ್ತೀರಿ. ಆದ್ದರಿಂದ ನೀವು ಕೆಲಸದಲ್ಲಿ ಜಾಗರೂಕರಾಗಿರಿ.
120 ವರ್ಷದ ಬಳಿಕ ಜಗತ್ತಿನ 2ನೇ ಅತಿದೊಡ್ಡ ವಜ್ರ ಪತ್ತೆ! ಇದರ ಬೆಲೆ ಕೇಳಿದ್ರೆ ಬೆರಗಾಗೋದು ಖಚಿತ

ಬುಮ್ರಾರನ್ನು ಟೀಮ್​ ಇಂಡಿಯಾ ಕ್ಯಾಪ್ಟನ್​ ಮಾಡ್ಬೇಡಿ! ದಿನೇಶ್​ ಕಾರ್ತಿಕ್​ ಅಚ್ಚರಿ ಹೇಳಿಕೆ, ಕಾರಣ ಹೀಗಿದೆ…

ನಿಮ್ಮಂತಹವರಿಗೆ ಹೆಣ್ಣು ಅಂದ್ರೆ ಮಜಾ​ ಮಾಡೋ ವಸ್ತು! ಗಂಗೂಲಿ ವಿರುದ್ಧ ಶಮಿ ಮಾಜಿ ಪತ್ನಿ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 7 =
Remember me
