ಉಜ್ಜಯಿನಿ:ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಬದ್​ನಗರ ತಾಲೂಕಿನ ಕಲ್ಮೋರಾ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ವರ್ಷದ ಹಿಂದಿನ ಶಿವಾಲಯ ಪತ್ತೆಯಾಗಿದೆ.
ಪರ್ವರ್ ಆಳ್ವಿಕೆ ಕಾಲದ ದೇಗುಲ ಇದಾಗಿದ್ದು, ಉತ್ಖನನ ಮುಂದುವರಿದಿದೆ ಎಂದು ವಕಾಂಕರ್ ಸಂಶೋಧನಾ ಸಂಸ್ಥೆಯ ತಜ್ಞ ಡಾ.ವಿಷ್ಣು ಶ್ರೀಧರ್ ಹೇಳಿದ್ದಾರೆ. ಇಲ್ಲಿ ಮಧ್ಯಪ್ರದೇಶದ ಪುರಾತತ್ವ ಇಲಾಖೆ ಉತ್ಖನನ ನಡೆಸುತ್ತಿದೆ. ಎರಡು ವರ್ಷದ ಹಿಂದೆ ಈ ಗ್ರಾಮದಲ್ಲಿ ಸಮೀಕ್ಷೆ ನಡೆಸುತ್ತಿದ್ದ ವೇಳೆ 12ನೇ ಶತಮಾನದಲ್ಲಿ ಆಳ್ವಿಕೆ ನಡೆಸುತ್ತಿದ್ದ ಪರ್ವರ್ ರಾಜವಂಶಸ್ಥರ ಕಾಲದ ಭೂಮಿಜ್ ಶೈಲಿಯ ದೇವಾಲಯದ ಕುರುಹು ಕಂಡುಬಂದವು. ನಂತರ ಈ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ ಉತ್ಖನನ ಆರಂಭಿಸಲಾಯಿತು.
15 ದಿನ ಹಿಂದೆ ಎರಡನೇ ಹಂತದಲ್ಲಿ ಭೂಮಿ ಅಗೆಯುತ್ತಿದ್ದಾಗ ಶಿವಾಲಯದ ಮಾದರಿ ಗೋಚರಿಸಿತು ಎಂದು ವಕಾಂಕರ್ ಸಂಸ್ಥೆಯ ತಜ್ಞ ಡಾ. ಧ್ರುವೇಂದ್ರ ಜೋಧಾ ಮಾಹಿತಿ ನೀಡಿದ್ದಾರೆ. ದೇಗುಲವು ಪೂರ್ವಾಭಿಮುಖವಾಗಿದ್ದು, 15 ಮೀಟರ್ ಅಗಲ ಮತ್ತು ಜಗತಿಯಿಂದ 9 ಅಡಿ ಎತ್ತರ ಇದೆ. ಭಗ್ನಗೊಂಡ ಮಂಟಪ, ಗರ್ಭಗುಡಿ, ಶಿವಲಿಂಗ, ವಿಷ್ಣು ಮೂರ್ತಿ ಇನ್ನಿತರ ವಿಗ್ರಹಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ಕೀಳು ಮಟ್ಟದ ವಿಚಾರಧಾರೆಗಳು ಬಿಜೆಪಿ ನಾಯಕರಿಗೆ ಮಾತ್ರ ಸೀಮಿತ; ಶಾಸಕ ಜಮೀರ್ ಹೇಳಿಕೆ ಖಂಡಿಸಿದ ಸುರ್ಜೇವಾಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + twelve =
Remember me
