ತಿರುಚ್ಚಿ(ತಮಿಳುನಾಡು):ಪೊಂಗಲ್(ಸಂಕ್ರಾಂತಿ) ​ಹಬ್ಬದ ಪ್ರಯುಕ್ತ ತಿರುಚ್ಚಿ ಜಿಲ್ಲೆಯ ಸುರಿಯೂರಿನಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ(ಜಲ್ಲಿಕಟ್ಟು) ಸ್ಪರ್ಧೆಯಲ್ಲಿ ಹೋರಿ ತಿವಿತಕ್ಕೊಳಗಾಗಿ 17 ವರ್ಷದ ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.
ಶ್ರೀರಂಗಂನ ಮೀನಾಕ್ಷಿಸುಂದರಂ ಮೃತ ದುರ್ದೈವಿ. ಹಬ್ಬದ ಹಿನ್ನೆಲೆ ಆಯೋಜಿಸಿದ್ದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 400 ಹೋರಿಗಳು ಭಾಗವಹಿಸಿದ್ದವು. ಮೀನಾಕ್ಷಿಸುಂದರಂಗೆ ಸೇರಿದ ಹೋರಿಯೂ ಭಾಗವಹಿಸಿತ್ತು. ಬೆಳಗ್ಗೆ 8 ಗಂಟೆಕ್ಕೆ ಜಲ್ಲಿಕಟ್ಟು ಸ್ಪರ್ಧೆಗೆ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಮತ್ತು ಜಿಲ್ಲಾಧಿಕಾರಿ ಎಸ್.ಶಿವರಾಸು ಚಾಲನೆ ನೀಡಿದರು. ಬಳಿಕ ಹೋರಿ ಬೆದರಿಸುವ ಆಟ ಶುರುವಾಗಿತ್ತು. ಕ್ಷಣಾರ್ಧದಲ್ಲೇ ಮೀನಾಕ್ಷಿಸುಂದರಂಗೆ ಹೋರಿಯೊಂದು ತಿವಿದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಬದುಕಲಿಲ್ಲ.
6 ವರ್ಷದ ಮಗನ ಜತೆ ತಡರಾತ್ರಿ ಗಂಡ ಆತ್ಮಹತ್ಯೆ! ಡೆತ್​ನೋಟ್​ನಲ್ಲಿದೆ ಪತ್ನಿ ಮತ್ತು ಎಲ್​ಐಸಿ ಏಜೆಂಟ್​ ಕೊಟ್ಟ ಕಾಟ…

ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟ ತುಮಕೂರು ಎಸ್​​ಪಿ! ಠಾಣೆ ಮುಂದೆ ಕಾರು ಬರ್ತಿದ್ದಂತೆ ಪಿಎಸ್​ಐ ಗಢಗಢ

ಪ್ರೇಯಸಿಯನ್ನ ಕೊಂದು ಶವಕ್ಕೆ ಸ್ನಾನ ಮಾಡಿಸಿ ಇಡೀ ರಾತ್ರಿ ಅದರೊಟ್ಟಿಗೆ ಇದ್ದ! ಬೆಳಗಾಗುತ್ತಿದ್ದಂತೆ ನಾಟಕ ಶುರು…

ಅಪಘಾತದಲ್ಲಿ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಸಾವು: ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಘೋರ ಸತ್ಯ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
