ಒಡಿಶಾ:ಭುವನೇಶ್ವರ ನಿವಾಸಿ ಮನೋಜ್ ನಾಯಕ್, ಟಿ20 ವಿಶ್ವಕಪ್​ ಗೆದ್ದ ಭಾರತ ತಂಡದ ಆಟಗಾರರ ಹೆಸರನ್ನು ತನ್ನ ಬೆನ್ನ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದಾರೆ. ಈ ವಿಡಿಯೊವನ್ನು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.
ಟ್ಯಾಟು ಹಾಕಿಸಿಕೊಂಡ ವಿಡಿಯೋ ಹಂಚಿಕೊಂಡಿರುವ  ಭಾರತ ತಂಡದ ಅಭಿಮಾನಿ ಮನೋಜ್ , ‘  ಕಳೆದ 13 ವರ್ಷಗಳಿಂದ ಕಾಯುತ್ತಿದ್ದ ಐಸಿಸಿ ಟ್ರೋಫಿ ಕೊನೆಗೂ ಟಿ20 ವಿಶ್ವಕಪ್​ ಗೆಲ್ಲುವ ಮೂಲಕ ಸಾಕಾರಗೊಂಡಿದೆ. ಈ ಐತಿಹಾಸಿಕ ಸಾಧನೆ ಮಾಡಿದ ಕ್ಷಣ ಮತ್ತು ಆಟಗಾರರನ್ನು ಸದಾ ನೆನೆಪಿನಲ್ಲಿ ಇರುವ ಸಲುವಾಗಿ ತಂಡಕ್ಕೆ ನನ್ನ ಕಡೆಯಿಂದ ಸಣ್ಣದೊಂದು ಉಡುಗೊರೆ. ಭಾರತಕ್ಕೆ ಕೀರ್ತಿ ತಂದ ಭಾರತ ತಂಡಕ್ಕೆ ದೊಡ್ಡ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
Was manifesting each and every day as every Indian did,finally we did it and we are champions of the world,a big thank you to team india for bringing glory to India . 🇮🇳🏆✨❤️. Inked all the names after the t20 wc win.#IndianCricketTeam#Champions#ViratKohli𓃵#RohitSharma𓃵pic.twitter.com/WePpexktZF
— Manoj nayak(montu) (@Nmanoj183)July 3, 2024

2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಆಟಗಾರರ ಹೆಸರುಗಳು ಕೂಡ ಮನೋಜ್ ಬೆನ್ನ ಮೇಲೆ ಇದೆ. ಇಷ್ಟೇ ಅಲ್ಲದೆ ವಿರಾಟ್​ ಕೊಹ್ಲಿ, ಸಚಿನ್​ ತೆಂಡೂಲ್ಕರ್​, ಮಹೇಂದ್ರ ಸಿಂಗ್​ ಧೋನಿ ಅವರ ಫೋಟೊವನ್ನು ಕೂಡ ಟ್ಯಾಟು ಹಾಕಿಸಿಕೊಂಡಿದ್ದಾರೆ. ಇದೇ ವರ್ಷ ನಡೆದಿದ್ದ ಮಹಿಳಾ ಐಪಿಎಲ್​ ಟೂರ್ನಿಯಲ್ಲಿ ಆರ್​ಸಿಬಿ ತಂಡ ಚಾಂಪಿಯನ್​ ಆದಾಗಲು ಕೂಡ ತಂಡದ ಆಟಗಾರ್ತಿಯರ ಹೆಸರನ್ನು ತನ್ನ ಕೈಯಲ್ಲಿ ಅಚ್ಚೆ ಹಾಕಿಸಿದ್ದರು.
ಭಾರತೀಯ ಕ್ರಿಕೆಟ್​ ಆಟಗಾರರು ಏನೇ ಸಾಧನೆ ಮಾಡಲಿ ತಕ್ಷಣ ಮನೋಜ್​ ಇದನ್ನು ತಮ್ಮ ದೇಹದ ಯಾವುದಾದರೊಂದು ಭಾಗದಲ್ಲಿ ಟ್ಯಾಟು ಹಾಕಿ ಅಭಿಮಾನ ಮೆರೆಯುತ್ತಾರೆ.  ಸ್ವಾರಸ್ಯವೆಂದರೆ ಇವರಿಗೆ ಟ್ಯಾಟು ಹಾಕುತ್ತಿರುವ ವ್ಯಕ್ತಿ ಕೂಡ ಟೀಮ್​ ಇಂಡಿಯಾದ ಅಪ್ಪಟ ಅಭಿಮಾನಿಯಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − five =
Remember me
