ಲಂಡನ್​:ಬ್ರಿಟನ್​ ಸರ್ಕಾರದಲ್ಲಿ ರಾಜಕೀಯ ಅಸ್ಥಿರತೆ ಭುಗಿಲೆದ್ದಿದ್ದು, ಅವಧಿಗೂ ಮುನ್ನವೇ ಪ್ರಧಾನಿ ಸ್ಥಾನಕ್ಕೆ ಬೋರಿಸ್​​​​ ಜಾನ್ಸನ್​ ರಾಜೀನಾಮೆ ನೀಡಿದ್ದಾರೆ.
ಸಮರ್ಪಕ ಆಡಳಿತ ನೀಡುತ್ತಿಲ್ಲ ಎಂದು ಬೋರಿಸ್​​​​ ಜಾನ್ಸನ್​ ವಿರುದ್ಧ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕದಲ್ಲೇ ಭಾರೀ ಅಸಮಾಧಾನವಿತ್ತು. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಹಲವು ತಿಂಗಳಿಂದ ಒತ್ತಾಯಿಸುತ್ತಿದ್ದರೂ ಬೋರಿಸ್​ ಮಾತ್ರ ಮಣಿದಿರಲಿಲ್ಲ. ಇವರ ಸಂಪುಟದಲ್ಲೇ ಸ್ಫೋಟಗೊಂಡ ಅಸಮಾಧಾನದ ಪರಿಣಾಮ ಕಳೆದ ಎರಡು ದಿನಗಳಲ್ಲಿ 40ಕ್ಕೂ ಹೆಚ್ಚು ಸಚಿವರು ಮತ್ತು ಸಹಾಯಕರು ರಾಜೀನಾಮೆ ನೀಡಿದ್ದರು. ಯುಕೆ ಹಣಕಾಸು ಸಚಿವ ಸ್ಥಾನಕ್ಕೆ ಇನ್ಫೋಸಿಸ್​ ಸಹ ಸಂಸ್ಥಾಪಕ ಎನ್​.ಆರ್​. ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್​ ಕೂಡ ರಾಜೀನಾಮೆ ನೀಡಿದ್ದರು.
ಸರಣಿ ರಾಜೀನಾಮೆಯಿಂದ ಇಕ್ಕಟ್ಟಿಗೆ ಸಿಲುಗಿದ್ದ ಬೋರಿಸ್​​​​ ಜಾನ್ಸನ್​, ಕೊನೆಗೂ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಲು ಒಪ್ಪಿದ್ದೇನೆ ಎಂದು ಗುರುವಾರ ಮಧ್ಯಾಹ್ನ ಘೋಷಿಸಿದ್ದರು. ಇದಾದ ಕೆಲವೇ ಗಂಟೆಯಲ್ಲೇ ರಾಜೀನಾಮೆ ನೀಡಿದ್ದಾರೆ.
ಬೋರಿಸ್​​​​ ಜಾನ್ಸನ್​ ಅವರ ಬಳಿಕ ನೂತನ ಪ್ರಧಾನಿ ಯಾರಾಗ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಆರಂಭದಿಂದಲೂ ಭಾರತ ಮೂಲದ ರಿಷಿ ಸುನಾಕ್ ಅವರು ಬ್ರಿಟನ್​ ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಕ್ಟೋಬರ್​ನಲ್ಲಿ ಚುನಾವಣೆ ನಡೆಯಲಿದ್ದು, ಹೊಸ ಪ್ರಧಾನಿ ಆಯ್ಕೆಯಾಗುವವರೆಗೂ ಹಂಗಾಮಿ ಪ್ರಧಾನಿ ಆಗಿ ಮುಂದುವರಿಯುವುದಾಗಿ ಬೋರಿಸ್​ ಹೇಳಿದ್ದಾರೆ.

2020ರ ಫೆಬ್ರವರಿಯಲ್ಲಿ ಬ್ರಿಟನ್​ನ ಆರ್ಥಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ರಿಷಿ ಸುನಾಕ್, 2020ರಲ್ಲಿ ಕೋವಿಡ್​ ಭೀತಿಯ ಮಧ್ಯೆಯೂ ಮಂಡಿಸಿದ ಮೊದಲ ಬಜೆಟ್​ ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು. ಕೋವಿಡ್​ನಂತಹ ಸಂಕಷ್ಟ ಕಾಲದಲ್ಲಿ ಆರ್ಥಿಕ ಉತ್ತೇಜನಕ್ಕಾಗಿ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ರಿಷಿ ಸುನಾಕ್ ಜಾರಿಗೆ ತಂದಿದ್ದರು. ಯುವ ನಾಯಕ ರಿಷಿ ಸುನಕ್​ ಅವರಿಗೆ ಕನ್ಸರ್ವೇಟಿವ್ ಪಕ್ಷದಲ್ಲಿ ಒಳ್ಳೆಯ ಬೆಂಬಲವಿದೆ. ಸಾರ್ವಜನಿಕರ ವಲಯದಲ್ಲೂ ಜನಮನ್ನಣೆ ಗಳಿಸಿದ್ದಾರೆ. ಹಾಗಾಗಿ ಬ್ರಿಟನ್​ನ ಪ್ರಧಾನಿಯಾಗಿ ರಿಷಿ ಸುನಾಕ್​ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ. ಇವರ ಜತೆಗೆ ಇನ್ನೂ ಹಲವರು ಪ್ರಧಾನಿ ರೇಸ್​ನಲ್ಲಿದ್ದು, ಶೀಘ್ರವೇ ಗಂಟೆಯಲ್ಲಿ ಸ್ಟಷ್ಟ ಉತ್ತರ ಸಿಗಲಿದೆ.

57 ವರ್ಷದ ಬೋರಿಸ್​ ಜಾನ್ಸನ್​ಗೆ ಸ್ವಪಕ್ಷೀಯದವರಿಂದಲೇ​ ತೀವ್ರ ವಿರೋಧ ಎದುರಾಗಿತ್ತು. ಇಡೀ ಬ್ರಿಟನ್​ 2020ರ ಮೇ ತಿಂಗಳಲ್ಲಿ ಮೊದಲ ಕೋವಿಡ್​ ಲಾಕ್​ಡೌನ್​ನಲ್ಲಿ ಇರುವಾಗ ಲಂಡನ್​ನ 10 ಡ್ರೌವ್ನಿಂಗ್ ಸ್ಟ್ರೀಟ್​ನಲ್ಲಿ ಪ್ರಧಾನಿ ಜಾನ್ಸನ್​ ಮದ್ಯದ ಪಾರ್ಟಿ ನಡೆಸಿದ್ದರು. ಇದನ್ನು ಸ್ವತಃ ಪ್ರಧಾನಿಯೇ ಒಪ್ಪಿಕೊಂಡಿದ್ದು, 2020ರ ಬೇಸಿಗೆಯಲ್ಲಿ ತನ್ನ ಕಚೇರಿಯಲ್ಲಿ ಪಾರ್ಟಿ ಆಯೋಜಿಸಿದ್ದಾಗಿ ಹೇಳಿದ್ದರು. ಆದರೆ, ಕರೊನಾ ಸಂಕಷ್ಟ ಕಾಲದಲ್ಲಿ ತಮ್ಮ ಸಿಬ್ಬಂದಿಯ ಶ್ರಮಕ್ಕೆ ಪ್ರತಿಫಲವಾಗಿ ಈ ಕಾರ್ಯಕ್ರಮ ನಡೆಸಲಾಯಿತು ಎಂದು ಜಾನ್ಸನ್​ ಸಮರ್ಥಿಸಿಕೊಂಡಿದ್ದರು. ಇನ್ನು ಪಾರ್ಟಿಗೆ ಸಂಬಂಧಿಸಿದ ವಿಡಿಯೋವೊಂದು ಸಹ ಇತ್ತೀಚೆಗಷ್ಟೇ ವೈರಲ್​ ಆಗಿತ್ತು. ಪ್ರತಿಪಕ್ಷ ಲೇಬರ್​ ಪಾರ್ಟಿ ಮತ್ತು ತಮ್ಮದೇ ಕನ್ಸರ್ವೇಟಿವ್​ ಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಬ್ರಿಟನ್​ ಜನರ ಕೆಂಗಣ್ಣಿಗೂ ಜಾನ್ಸನ್​ ಅವರ ನಡೆ ಗುರಿಯಾಗಿತ್ತು. ಇವರ ವಿರುದ್ಧ ಅಕ್ರಮಗಳ ಆರೋಪವೂ ಇದೆ.
ರಾಜೀನಾಮೆಗೆ ಒಪ್ಪಿದ ಬ್ರಿಟನ್​ ಪ್ರಧಾನಿ ಬೋರಿಸ್​​​​ ಜಾನ್ಸನ್​: ಇಂದೇ ಪ್ರಧಾನಿ ಹುದ್ದೆ ತೊರೆಯುವ ಸಾಧ್ಯತೆ

ಕೆಎಸ್ಸಾರ್ಟಿಸಿ ಬಸ್​-ಕಾರಿನ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − two =
Remember me
