ಬಿಹಾರ:ಮನೆ, ಜಮೀನು, ಆರಭರಣ, ಪಾತ್ರೆ, ಜಾನುವಾರು… ಇವುಗಳನ್ನು ಕುಟುಂಸ್ಥರು ಭಾಗ ಮಾಡಿಕೊಳ್ಳುವುದು ಸಹಜ. ಇನ್ನೂ ಮುಂದುವರಿದು ಮನೆಯಲ್ಲಿನ ಹಿರಿಯರ ಜವಾಬ್ದಾರಿಯನ್ನ ತಲಾ ಮೂರ್ನಾಲ್ಕು ತಿಂಗಳು ಇಲ್ಲವೇ ಒಂದೊಂದು ವರ್ಷ ಎಂದು ಮಕ್ಕಳು ವಹಿಸಿಕೊಳ್ಳೋದನ್ನೂ ನೋಡಿದ್ದೇವೆ. ಆದರಿಲ್ಲಿ ಇಬ್ಬರು ಪತ್ನಿಯರು ಗಂಡನನ್ನು ಹಂಚಿಕೆ ಮಾಡಿಕೊಂಡಿದ್ದಾರೆ. ಅದೂ ತಿಂಗಳಲ್ಲಿ 15 ದಿನ ಒಬ್ಬಾಕೆ ಜತೆ, ಇನ್ನುಳಿದ 15 ದಿನ ಮೊತ್ತೊಬ್ಬಾಕೆ ಜತೆ ಗಂಡ ಇರಬೇಕು!
ಇಂತಹ ವಿಚಿತ್ರ ಘಟನೆ ಬಿಹಾರದಲ್ಲಿ ಪೂರ್ಣಿಯಾ ಎಂಬಲ್ಲಿ ನಡೆದಿದೆ. ಆ ವ್ಯಕ್ತಿಗೆ ಈಗಾಗಲೇ ಮದುವೆ ಆಗಿ 6 ಮಕ್ಕಳಿದ್ದಾರೆ. ಆದರೂ ಗುಟ್ಟಾಗಿ ಮತ್ತೊಬ್ಬಾಕೆ ಜತೆ 2ನೇ ಮದುವೆ ಆಗಿದ್ದ. 2ನೇ ಪತ್ನಿಗೂ ಒಂದು ಮಗು ಇದೆ. ಈ ವಿಚಾರ ತಿಳಿಯುತ್ತಿದ್ದಂತೆ 2ನೇ ಪತ್ನಿ ಜಗಳ ಮಾಡಿದ್ದಳು. ಅತ್ತ ಮೊದಲ ಪತ್ನಿಗೂ ಈ ವಿಚಾರ ಆಘಾತ ನೀಡಿತ್ತು. ಇಬ್ಬರು ಪತ್ನಿಯರೂ ಗಂಡನನ್ನು ಬಿಟ್ಟುಕೊಡಲು ಒಪ್ಪಲಿಲ್ಲ. ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು. ಗಂಡ ಮತ್ತು ಪತ್ನಿಯರಿಬ್ಬರನ್ನೂ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಆಗ ಗಂಡನೂ ತನಗೆ ಇಬ್ಬರು ಪತ್ನಿಯರು ಬೇಕು ಎಂದಿದ್ದಾನೆ. ಅತ್ತ ನನ್ನ ಗಂಡ ನನಗೇ ಬೇಕು, ನನ್ನೊಂದಿಗೇ ಇರಬೇಕು ಎಂದು ಪತ್ನಿಯರಿಬ್ಬರೂ ಪಟ್ಟು ಹಿಡಿದಿದ್ದರು.
ಕೊನೆಗೆ ಪರಸ್ಪರ ಮಾತುಕತೆ ನಡೆಸಿದ ಪೂರ್ಣಿಯಾ ಪೊಲೀಸ್ ಕುಟುಂಬ ಸಲಹಾ ಕೇಂದ್ರವು (ಪರಿವಾರ ಪ್ರಮರ್ಶ್ ಕೇಂದ್ರ) ಮೊದಲ ಪತ್ನಿಯೊಂದಿಗೆ ತಿಂಗಳ ಆರಂಭದ 15 ದಿನ ಹಾಗೂ 2ನೇ ಪತ್ನಿಯೊಂದಿಗೆ ತಿಂಗಳ ಕೊನೆಯ 15 ದಿನ ಇರುವಂತೆ ಗಂಡನಿಗೆ ಸೂಚಿಸಿದೆ. ಈ ಒಪ್ಪಿಗೆ ಪತ್ರಕ್ಕೆ ಮೂವರೂ ಸಹಿ ಹಾಕಿದ್ದಾರೆ. ಕೌಟುಂಬಿಕ ಸಲಹಾ ಕೇಂದ್ರದ ಈ ನಿರ್ಧಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಶಂಕರಣ್ಣನ ಆತ್ಮಹತ್ಯೆಗೆ ಕಾರಣ ಬಯಲು! ಅಯ್ಯೋ, ಸ್ವಲ್ಪ ಅರ್ಡ್ಜೆಸ್ಟ್​ ಮಾಡ್ಕೊಂಡಿದ್ರೆ ಇಷ್ಟೆಲ್ಲಾ ಆಗ್ತಿರ್ಲಿಲ್ಲ ತಾಯಿ…

ಡೆತ್​ನೋಟ್​ ಬರೆದಿಟ್ಟು ಶಂಕರಪ್ಪ ಆತ್ಮಹತ್ಯೆ! ಮದ್ವೆಯಾದ 5 ತಿಂಗಳಲ್ಲೇ ದುರಂತ, ಪತ್ನಿ ಮೇಘನಾಳ ಗೋಳಾಟ ನೋಡಲಾಗ್ತಿಲ್ಲ…

ಸಾವಲ್ಲೂ ಪತ್ನಿಯನ್ನು ಹಿಂಬಾಲಿಸಿದ ಪತಿ: ಮೈಸೂರಿನ ದಂಪತಿಯ ಸ್ಟೋರಿ ಕೇಳಿದ್ರೆ ಕರುಳು ಚುರ್​ ಅನ್ನುತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − seventeen =
Remember me
