ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರ ಫಿಟ್​ನೆಸ್​ ಚಾಲೆಂಜ್​ ನಿಮಗೆಲ್ಲರಿಗೂ ಗೊತ್ತೇ ಇದೆ. ಹಮ್​ ಫಿಟ್​ಥೋ ಇಂಡಿಯಾ ಫಿಟ್​ ಹೇ ಎಂದು ಹೇಳಿದ್ದರು ಪ್ರಧಾನಿಯವರು. ಇದೀಗ ಸಾರ್ವಜನಿಕರು ಫಿಟ್​ ಆಗಿರಲಿ ಎಂದು ಕಾಳಜಿ ತೋರಿಸಿರುವ ದೆಹಲಿಯ ರೈಲ್ವೆ ನಿಲ್ದಾಣವೊಂದು ಬಸ್ಕಿ ಹೊಡೆದರೆ ಉಚಿತ ಪ್ಲಾಟ್​ಫಾರ್ಮ್​ ಟಿಕೆಟ್​ ಕೊಡುವ ಮಷಿನ್​ನ್ನು ಇರಿಸಿದೆ.
ದೆಹಲಿಯ ಆನಂದ ವಿಹಾರ್​ ರೈಲ್ವೆ ನಿಲ್ದಾಣದಲ್ಲಿ ಒಂದು ವಿಶೇಷವಾದ ಮಷಿನ್​ನ್ನು ಇಡಲಾಗಿದೆ. ಈ ಮಷಿನ್​ನ ಮುಂದೆ ನೀವು ಬಸ್ಕಿ ಹೊಡೆದರೆ ನಿಮಗೆ ಅದು ಉಚಿತ ಪ್ಲಾಟ್​ಫಾರ್ಮ್​ ಟಿಕೆಟ್​ನ್ನು ನೀಡುತ್ತದೆ.
ಈ ಮಷಿನ್​ನ ಕುರಿತಾಗಿ ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ರೈಲ್ವೆ ಸಚಿವ ಪಿಯೂಷ್​ ಗೋಯಲ್​, “ಫಿಟ್​ನೆಸ್​ನೊಂದಿಗೆ ಉಳಿತಾಯ: ದೆಹಲಿಯ ಆನಂದ್​ ವಿಹಾರ್​ ರೈಲ್ವೆ ನಿಲ್ದಾಣದಲ್ಲಿ ಫಿಟ್​ನೆಸ್​ನ್ನು ಉತ್ತೇಜಿಸಲು ವಿಶಿಷ್ಟ ಪ್ರಯೋಗವೊಂದನ್ನು ಮಾಡಲಾಗಿದೆ. ಇಲ್ಲಿ ಸ್ಥಾಪಿಸಲಾಗಿರುವ ಯಂತ್ರದ ಮುಂದೆ ಬಸ್ಕಿ ಹೊಡೆದರೆ ಅದು ನಿಮಗೆ ಉಚಿತ ಪ್ಲಾಟ್​ಫಾರ್ಮ್​ ಟಿಕೆಟ್​ಗಳನ್ನು ನೀಡುತ್ತದೆ” ಎಂದು ಬರೆದುಕೊಂಡಿದ್ದಾರೆ.(ಏಜೆನ್ಸೀಸ್​)
फिटनेस के साथ बचत भी: दिल्ली के आनंद विहार रेलवे स्टेशन पर फिटनेस को प्रोत्साहित करने के लिए अनूठा प्रयोग किया गया है।
यहां लगाई गई मशीन के सामने एक्सरसाइज करने पर प्लेटफार्म टिकट निशुल्क लिया जा सकता है।pic.twitter.com/RL79nKEJBp
— Piyush Goyal (@PiyushGoyal)February 21, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 9 =
Remember me
