ಮುಂಬೈ:ಈಗೆಲ್ಲ ಲಗ್ನ ಪತ್ರಿಕೆಗಳಲ್ಲೂ ತರೇವಾರು ವೆರೈಟಿ ಬಂದುಬಿಟ್ಟಿದೆ. ಕಾಯಿಯಲ್ಲಿ ಆಹ್ವಾನ, ಪುಸ್ತಕದ ಮೂಲಕ ಆಹ್ವಾನ ಹೀಗೆ ಅನೇಕ ರೀತಿ ಹೊಸ ಐಡಿಯಾಗಳೊಂದಿಗೆ ಜನರು ಮದುವೆಗೆ ಕರೆಯಲಾರಂಭಿಸಿದ್ದಾರೆ. ಆದರೆ ಇಲ್ಲೊಂದು ಕುಟುಂಬ ಮಾತ್ರ, ತೀರಾ ವಿಶೇಷವಾಗಿ, ಲಗ್ನ ಪತ್ರಿಕೆ ಜತೆ ವೈನ್​ ಬಾಟಲ್​ನ್ನೇ ಕಳುಹಿಸಿಕೊಟ್ಟಿದೆ. ಅದರ ಜತೆ ಸ್ನಾಕ್ಸ್​ನ್ನೂ ಇಟ್ಟಿರುವ ಈ ವಿಡಿಯೋ ಇದೀಗ ಸಕತ್​ ವೈರಲ್​ ಆಗಿದೆ.
ಇದನ್ನೂ ಓದಿ:ಶಾಲೆಯ ಟಾಯ್ಲೆಟ್​ನಲ್ಲೇ ಪಾರ್ಟಿ ಆಯೋಜಿಸಿದ ಬಾಲಕ! ವಿಚಾರ ತಿಳಿದ ಅಮ್ಮ ನಕ್ಕಿದ್ದೇಕೆ?
ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಇಂತದ್ದೊಂದು ಲಗ್ನಪತ್ರಿಕೆಯನ್ನು ಮಾಡಿಸಲಾಗಿದೆ. ದೊಡ್ಡದೊಂದು ಬಾಕ್ಸ್​, ಅದರ ಮೇಲೆ ಗಣಪತಿ ಚಿತ್ರ. ಬಾಕ್ಸ್​ ತೆರೆದಾಕ್ಷಣ, ಮದುವೆಯ ಮಾಹಿತಿ ಕೊಡುವ ಪತ್ರಿಕೆ. ಅದನ್ನು ತೆರೆದರೆ ಅಲ್ಲಿ ಕಾಣಿಸುತ್ತದೆ ನಿಜವಾದ ಖುಷಿ. ಒಂದು ವೈನ್​ ಬಾಟಲ್​, ಒಂದು ಸ್ನಾಕ್ಸ್ ಪ್ಯಾಕೆಟ್​ ಮತ್ತೊಂದು ವಾಟರ್​ ಬಾಟಲ್​. ಮದುವೆಗೆ ಬರುವವರಿಗೆ ಲಗ್ನ ಪತ್ರಿಕೆ ಕೊಡುವಾಗಲೇ ಇಂತದ್ದೊಂದು ವಿಶೇಷ ಉಡುಗೊರೆಯನ್ನು ಕೊಡಲಾಗಿದೆ.
ಈ ಲಗ್ನ ಪತ್ರಿಕೆಯ ವಿಡಿಯೋವನ್ನು ಯಾರೋ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಕತ್​ ವೈರಲ್​ ಆಗಿದೆ. ಮದುವೆಗೆ ಹೋಗದಿದ್ದರೂ ಪರವಾಗಿಲ್ಲ, ಇಂತದ್ದೊಂದು ಲಗ್ನ ಪತ್ರಿಕೆ ಆಗಾಗ ಮನೆಗೆ ಬಂದರೆ ಚೆನ್ನಾಗಿರುತ್ತದೆ ಎಂದು ನೆಟ್ಟಿಗರು ಕಾಮೆಂಟ್​ ಮಾಡಲಾರಂಭಿಸಿದ್ದಾರೆ.
ಇದನ್ನೂ ಓದಿ:ಇದಪ್ಪಾ ಅದೃಷ್ಟ ಅಂದ್ರೆ! ಬಡ ಮೀನುಗಾರನನ್ನು ಕೋಟ್ಯಾಧಿಪತಿ ಮಾಡಿದ ತಿಮಿಂಗಿಲ ವಾಂತಿ
ಚಂದ್ರಾಪುರದಲ್ಲಿ ಮದ್ಯವನ್ನು ನಿಷೇಧಿಸಲಾಗಿದೆ. ಹಾಗಿರುವಾಗ ಇಂತಹ ಲಗ್ನ ಪತ್ರಿಕೆ ಮಾಡಿಸಿದ್ದೇಕೆ ಎನ್ನುವ ಪ್ರಶ್ನೆಗಳು ಕೇಳಿಬಂದಿದ್ದವು. ಈ ಪ್ರಶ್ನೆಗೆ ಉತ್ತರಿಸಿರುವ ಕುಟುಂಬ, “ಮದುವೆ ಚಂದ್ರಾಪುರದಲ್ಲೇ ನಡೆದಿದೆ. ಚಂದ್ರಾಪುರ ಜಿಲ್ಲೆಯವರಿಗೆ ಲಗ್ನ ಪತ್ರಿಕೆಯಲ್ಲಿ ವೈನ್​ ಬದಲಾಗಿ ಡ್ರೈಫ್ರೂಟ್ಸ್​ ಹಾಕಿಕೊಡಲಾಗಿತ್ತು. ಬೇರೆ ಜಿಲ್ಲೆಯ ಬಂಧುಗಳಿಗೆ ಮಾತ್ರವೇ ವೈನ್​ ಕೊಟ್ಟು ಆಹ್ವಾನಿಸಲಾಗಿದೆ” ಎಂದು ಸ್ಪಷ್ಟೀಕರಣ ನೀಡಿದೆ. (ಏಜೆನ್ಸೀಸ್​)
ವಿಡಿಯೋ ಕಾಲ್ ಮೂಲಕವೇ ಯುವಕನ ಬಟ್ಟೆ ಬಿಚ್ಚಿಸಿದ ಚಾಲಾಕಿ ಹುಡುಗಿಯರು!

ಪೊಲೀಸ್​ ಪೇದೆ ಮತ್ತು ಹೆಂಡತಿಯ ಕೊಲೆ! ಅಪ್ಪ ಅಮ್ಮ ಚೀರಿಕೊಳ್ಳುತ್ತಿದ್ದರೆ ಏನೂ ಗೊತ್ತಿಲ್ಲದವಳಂತೆ ಸುತ್ತಾಡಿದ ಮಗಳು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − 12 =
Remember me
