ಮಧ್ಯಪ್ರದೇಶ:ಒಂದೇ ಸಿರಿಂಜ್​ನಿಂದ 39 ಮಕ್ಕಳಿಗೆ ಕೋವಿಡ್​-19 ವ್ಯಾಕ್ಸಿನ್​ ನೀಡಿರುವ ಪ್ರಕರಣ ಖಾಸಗಿ ಶಾಲೆಯೊಂದರಲ್ಲಿ ಬೆಳಕಿಗೆ ಬಂದಿದ್ದು, ಒಂದೇ ಸಿರಿಂಜ್​ನಿಂದ ವ್ಯಾಕ್ಸಿನ್ ನೀಡಿದ ಆರೋಪಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ಇಂತಹ ಘಟನೆ ಮಧ್ಯಪ್ರದೇಶದ ಸಾಗರ್​ ನಗರದ ಜೈನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದ್ದು, ಪಾಲಕರು ಆತಂಕಕ್ಕೀಡಾಗಿದ್ದಾರೆ. ಕೋವಿಡ್​​ ಲಸಿಕೆ ಮಹಾ ಅಭಿಯಾನದ ವೇಳೆ ಈ ಘಟನೆ ಸಂಭವಿಸಿದ್ದು, ಆರೋಪಿ ಜಿತೇಂದ್ರ ಅಹಿರ್ವಾರ್ ತಲೆಮರೆಸಿಕೊಂಡಿದ್ದಾನೆ.
ವಿದ್ಯಾರ್ಥಿಗಳಿಗೆ ಕೋವಿಡ್​ ವ್ಯಾಕ್ಸಿನ್​ ನೀಡಲಾಗಿದೆ. ಒಂದೇ ಸಿರಿಂಜ್​ನಿಂದ ಎಲ್ಲ ಮಕ್ಕಳಿಗೂ ಲಸಿಕೆ ಕೊಡುವುದನ್ನ ನೋಡಿ ಸ್ಥಳದಲ್ಲಿದ್ದ ಪಾಲಕರು ಆಕ್ಷೇಪ ವ್ಯಕ್ತಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ 39 ಮಕ್ಕಳಿಗೆ ಒಂದೇ ಸಿರಿಂಜ್​ ಬಳಸಿರುವುದು ಗೊತ್ತಾಗಿದೆ. ಪಾಲಕರು ಪ್ರತಿಭಟನೆ ನಡೆಸುತ್ತಿದ್ದಂತೆ ಸ್ಥಳಕ್ಕೆ ಬಂದ ಸಾಗರ್​ ಇನ್​-ಚಾರ್ಜ್​ ಕಲೆಕ್ಟರ್ ಕ್ಷಿತಿಜ್ ಸಿಂಘಾಲ್ ಮತ್ತು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ. ಡಿ.ಕೆ. ಗೋಸ್ವಾಮಿ ಅವರು ಪರಿಶೀಲನೆ ನಡೆಸಿದರು. ಆರೋಪಿ ಅಹಿರ್ವಾರ್ ಪರಾರಿಯಾಗಿದ್ದು, ಆತನ ಮೊಬೈಲ್ ಸ್ವಿಚ್ಡ್​ ಆಫ್ ಆಗಿದೆ.
ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದ್ದು, 19 ಮಕ್ಕಳ ವರದಿ ನಾರ್ಮಲ್​ ಎಂದು ಬಂದಿದೆ. ಉಳಿದ ಮಕ್ಕಳ ಆರೋಗ್ಯ ತಪಾಸಣಾ ವರದಿ ಬರಬೇಕಿದೆ. ಇನ್ನು ಒಂದೇ ಸಿರಿಂಜ್​ನಲ್ಲಿ ಲಸಿಕೆ ಪಡೆದ 39 ಮಕ್ಕಳು 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು. ಇವರಲ್ಲಿ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿದ್ದಾರೆ.
ಪ್ರವೀಣ್​ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಬಿಜೆಪಿ ನಿರ್ಧಾರ

ಮಧುಚಂದ್ರಕ್ಕೆ ಹೋಗಬೇಕಿದ್ದ ನವವಿವಾಹಿತ ಆಸ್ಪತ್ರೆಗೆ… ತಡರಾತ್ರಿ ಕುಸಿದುಬಿದ್ದ ಮನೆಯ ಗೋಡೆ, ಛಾವಣಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
