ಅಯೋಧ್ಯೆ:ಜನವರಿ 22 ರಂದು ಭಗವಾನ್ ರಾಮನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ದೇಶ ಮತ್ತು ವಿದೇಶಗಳಿಂದ ರಾಮಲಲ್ಲಾಗೆ ಉಡುಗೊರೆಗಳು ಬರುತ್ತಲಿವೆ. ಅಂದಹಾಗೆ ಲಕ್ನೋದಲ್ಲಿ ವಾಸಿಸುವ ತರಕಾರಿ ವ್ಯಾಪಾರಿ, 5 ವರ್ಷಗಳ ಕಠಿಣ ಪರಿಶ್ರಮದ ನಂತರ ಒಂಬತ್ತು ದೇಶಗಳ ಸಮಯವನ್ನು ಏಕಕಾಲದಲ್ಲಿ ಹೇಳುವ ವಿಶ್ವ ಗಡಿಯಾರವನ್ನು ಸಿದ್ಧಪಡಿಸಿದ್ದಾರೆ.
ಭಾರತ ಸರ್ಕಾರದಿಂದ ಪೇಟೆಂಟ್ ಪಡೆದ ನಂತರ, ತರಕಾರಿ ವ್ಯಾಪಾರಿ ಈ ವಿಶ್ವ ಗಡಿಯಾರವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಶ್ವ ಗಡಿಯಾರವನ್ನು ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಇರಿಸಲು ದಾನಿ ವಿನಂತಿಸಿದ್ದಾರೆ. ಚಂಪತ್ ರೈ ಅವರು ಇದನ್ನು ಕರಸೇವಕ ಪುರಂನಲ್ಲಿರುವ ಕಚೇರಿಯಲ್ಲಿ ಸ್ವೀಕರಿಸಿದ್ದಾರೆ.
ಲಕ್ನೋದಲ್ಲಿ ವಾಸಿಸುವ ಅನಿಲ್ ಕುಮಾರ್ ಸಾಹು ಅವರು ತರಕಾರಿ ವ್ಯಾಪಾರ ಮಾಡುತ್ತಾರೆ. ಅವರು ರಾಮನಲ್ಲಿ ಆಳವಾದ ನಂಬಿಕೆಯನ್ನು ಹೊಂದಿದ್ದು, 5 ವರ್ಷಗಳ ಕಠಿಣ ಪರಿಶ್ರಮ ವಹಿಸಿ ಅವರು ಗಡಿಯಾರವನ್ನು ಪ್ರಸ್ತುತಪಡಿಸಿದ್ದಾರೆ. ಏಕಕಾಲದಲ್ಲಿ ಒಂಬತ್ತು ದೇಶಗಳ ಸಮಯವನ್ನು ಹೇಳುವ ಗಡಿಯಾರವನ್ನು ತಯಾರಿಸಿರುವುದಾಗಿ ಅನಿಲ್ ಕುಮಾರ್ ಸಾಹು ತಿಳಿಸಿದ್ದಾರೆ. ಇದನ್ನು ನಿರ್ಮಿಸಲು 5 ವರ್ಷಗಳ ಶ್ರಮ ಬೇಕಾಯಿತು. ಇದಲ್ಲದೇ ಭಾರತ ಸರ್ಕಾರದಿಂದ ಪೇಟೆಂಟ್ ಕೂಡ ಪಡೆದೆ. ಭಾರತವನ್ನು ಹೊರತುಪಡಿಸಿ, ಈ ಗಡಿಯಾರವು ಏಕಕಾಲದಲ್ಲಿ ಮೆಕ್ಸಿಕೊ, ಜಪಾನ್, ಟೋಕಿಯೊ, ದುಬೈ, ವಾಷಿಂಗ್ಟನ್ ಸಮಯವನ್ನು ಹೇಳುತ್ತದೆ ಎಂದು ಸಾಹು ಹೇಳಿದರು.
Ayodhya, Uttar Pradesh: A vegetable seller from Lucknow Anil Kumar Sahu dedicated one patented world clock to Ram Temple, Ayodhya Junction and Hanumangarhi temple each, which show the time of nine countries simultaneously.
World Clock was handed over to the General Secretary of…pic.twitter.com/bjUZEDYIkJ
— ANI UP/Uttarakhand (@ANINewsUP)December 25, 2023

ಅನಿಲ್ ಕುಮಾರ್ ಸಾಹು ಅವರು ರಾಮ ಜನ್ಮಭೂಮಿಯಲ್ಲದೆ, ಪ್ರಸಿದ್ದ ಸಿದ್ದ ಪೀಠ ಹನುಮಾನ್ ಗರ್ಹಿ ಮತ್ತು ಅಯೋಧ್ಯೆ ಜಂಕ್ಷನ್​​​ ರೈಲು ನಿಲ್ದಾಣಕ್ಕೂ ಈ ಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಭಾರತ ಮತ್ತು ವಿದೇಶಗಳಿಂದ ಬರುವ ಭಕ್ತರು ಸುಲಭವಾಗಿ ಸಮಯವನ್ನು ನೋಡಬಹುದು. ಚಂಪತ್ ರೈ ಅವರು ಅನಿಲ್ ಕುಮಾರ್ ಸಾಹು ಅವರ ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಪ್ರತಿ ದಿನ 5 ಸಾವಿರ ಕರೊನಾ ಟೆಸ್ಟ್, ಸದ್ಯಕ್ಕೆ ಮಾಸ್ಕ್ ಕಡ್ಡಾಯವಿಲ್ಲ: ದಿನೇಶ್ ಗುಂಡೂರಾವ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 8 =
Remember me
