ಮುಂಬೈ:ಬಾಲಿವುಡ್​ ನಟ ಅರುಣ್​ ಬಾಲಿ(79) ಶುಕ್ರವಾರ ನಿಧನರಾದರು. ಕೆಲ ತಿಂಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅರುಣ್​ ಬಾಲಿ ಅವರು ಇಂದು ಮುಂಜಾನೆ ಮುಂಬೈ ಉಪನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳದರು.
ಇನ್ನು 1989ರಲ್ಲಿ ಶಾರುಕ್​​ ಖಾನ್ ನಟನೆಯ​ ‘ದೂರ್ಸಾ ಕೇವಲ್​’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅರುಣ್​, ಕನ್ನಡದ ‘ಎಕೆ 47’ ಸಿನಿಮಾದಲ್ಲಿ ಮುಂಬೈ ಪೊಲೀಸ್ ಕಮಿಷ​​ನರ್ ಪಾತ್ರಧಾರಿಯಾಗಿ ಬಣ್ಣಹಚ್ಚಿದ್ದರು. ಚಾಣಕ್ಯ, ಮರ್ಯಾದಾ, ದೇಸ್ ಮೇ ನಿಕ್ಲಾ ಹೋಗಾ ಚಂದ್, ಮಾಯ್ಕಾ, ದೇವನ್ ಕೆ ದೇವ್ ಮಹಾದೇವ್, ಸ್ವಾಭಿಮಾನ್, ಶಕ್ತಿಮಾನ್​ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಅರುಣ್ ಬಾಲಿ ಅವರು 3 ಈಡಿಯಟ್ಸ್, ಕೇದಾರನಾಥ್, ಪಾಣಿಪತ್, ಹೇ ರಾಮ್, ದಂಡ ನಾಯಕ, ರೆಡಿ, ಜಮೀನ್, ಪೊಲೀಸ್ ವಾಲಾ ಗುಂಡಾ, ಫೂಲ್ ಔರ್ ಅಂಗಾರ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಹೇ ರಾಮ್‌’ ಸಿನಿಮಾದಲ್ಲಿ ಅವಿಭಜಿತ ಬಂಗಾಳದ ಮುಖ್ಯಮಂತ್ರಿ ಹುಸೇನ್ ಶಹೀದ್ ಸುಹ್ರವರ್ದಿ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದಿದ್ದರು. ಅಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಇದೇ ಅರುಣ್​ ಅಭಿನಯಿಸಿದ ಕೊನೇ ಸಿನಿಮಾ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 7 =
Remember me
