ನವದೆಹಲಿ:ಜಗತ್ತಿನ ವಿವಿಧ ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿರುವ ಜಿ-20 ಶೃಂಗಸಭೆ ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯ ಭಾರತ ಮಂಟಪದಲ್ಲಿ ನಿನ್ನೆಯಿಂದ ಎರಡು ದಿನಗಳ ಕಾಲ ನಡೆಯುತ್ತಿದೆ. ಈ ಮಧ್ಯೆ ಶೃಂಗಸಭೆ ಕುರಿತಂತೆ ಅಪಪ್ರಚಾರವೊಂದು ನಡೆಯುತ್ತಿದೆಯೇ ಎಂಬ ಪ್ರಶ್ನೆಯೊಂದು ಮೂಡಿದೆ.
ಜಿ-20 ಶೃಂಗಸಭೆ ನಡೆಯುತ್ತಿರುವ ಸ್ಥಳದಲ್ಲಿ ಮಳೆನೀರು ತುಂಬಿಕೊಂಡಿದೆ, ಕೆಲವು ಜಾಗಗಳಿಗೆ ನೀರು ನುಗ್ಗಿದೆ. 4000 ಕೋಟಿ ರೂ. ಖರ್ಚು ಮಾಡಿದ್ದರೂ ಯಾಕೆ ಈ ಅವ್ಯವಸ್ಥೆ? ಎಂಬಿತ್ಯಾದಿ ರೀತಿಯಲ್ಲಿ ಕೆಲವು ಪೋಸ್ಟ್​ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ಕುರಿತು ಪ್ರೆಸ್​ ಇನ್​ಫಾರ್ಮೇಷನ್ ಬ್ಯೂರೋ ಫ್ಯಾಕ್ಟ್​ಚೆಕ್ ವರದಿ ಪ್ರಕಟಿಸಿದೆ.
ಜಿ-20 ಶೃಂಗಸಭೆ ಜಾಗದಲ್ಲಿ ಮಳೆನೀರು ತುಂಬಿಕೊಂಡಿದೆ ಎಂಬ ವಿಡಿಯೋ ಹರಿದಾಡುತ್ತಿದೆ. ಆದರೆ ಅದು ಉತ್ಪ್ರೇಕ್ಷಿತ ಹಾಗೂ ದಿಕ್ಕುತಪ್ಪಿಸುವಂಥ ಪೋಸ್ಟ್​ ಆಗಿದೆ. ರಾತ್ರಿಯ ಜೋರು ಮಳೆಯಿಂದ ಸಣ್ಣ ಪ್ರಮಾಣದ ಮಳೆನೀರು ಕೆಲವು ಪ್ರದೇಶಗಳಲ್ಲಿ ಕಂಡುಬಂದಿದೆ, ಅದನ್ನು ಮೋಟರ್​ಗಳ ಮೂಲಕ ಹೊರಹರಿಸಲಾಗಿದೆ. ಮುಖ್ಯವಾದ ವೇದಿಕೆ ಬಳಿಕ ಮಳೆನೀರು ಕಂಡುಬಂದಿಲ್ಲ ಎಂದು ಪಿಐಬಿ ಫ್ಯಾಕ್ಟ್​ಚೆಕ್ ವರದಿ ಪ್ರಕಟಿಸಿದೆ.
A video claims that there is waterlogging at venue of#G20Summit#PIBFactCheck:
✔️This claim is exaggerated and misleading
✔️Minor water logging in open area was swiftly cleared as pumps were pressed into action after overnight rains
✔️No water logging at venue presentlypic.twitter.com/JiWzWx1riZ
— PIB Fact Check (@PIBFactCheck)September 10, 2023

ಕೂದಲಿನ ಕಾರಣಕ್ಕೇ ಸುದ್ದಿಯಾದ ಅಮ್ಮ-ಮಗ; ಶಾಲೆಯಲ್ಲೂ ಪ್ರವೇಶಕ್ಕೆ ಆಕ್ಷೇಪ!

‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight − one =
Remember me
