ಟ್ರಾಫಿಕ್​ ಪೊಲೀಸರ ಲಂಚದ ಕರಾಮತ್ತು! ಹೇಗೆಲ್ಲ ದುಡ್ಡನ್ನ ಜೇಬಿಗಿಳಿಸ್ತಾರೆ ನೋಡಿ!ಮುಂಬೈ:ಟ್ರಾಫಿಕ್​ ಉಲ್ಲಂಘನೆ ಮಾಡಿದಾಗ ದಂಡ ಕಟ್ಟುವವರಿಗಿಂತ, ಆ ಪೊಲೀಸರಿಗೆ ದುಡ್ಡು ಕೊಟ್ಟು ಎಸ್ಕೇಪ್​ ಆಗುವವರೇ ಜಾಸ್ತಿ ಎನ್ನುವ ಮಾತಿದೆ. ಇದಕ್ಕೆ ಸಾಕ್ಷಿ ಎನ್ನುವಂತಹ ವಿಡಿಯೋ ಒಂದು ಇದೀಗ ಸಕತ್​ ವೈರಲ್​ ಆಗಿದೆ. ಮಹಿಳಾ ಟ್ರಾಫಿಕ್​ ಪೊಲೀಸ್​ ಒಬ್ಬರು, ಟ್ರಾಫಿಕ್​ ನಿಯಮ ಉಲ್ಲಂಘಿಸಿದ ಮಹಿಳೆಯ ಕೈಯಿಂದ ನೇರವಾಗಿ ತನ್ನ ಪಾಕೆಟ್​ಗೆ ಹಣ ಇಳಿಸಿಕೊಂಡಿರುವ ವಿಡಿಯೋ ನೋಡಿರುವ ಇದೀಗ ಆ ಪೊಲೀಸ್​ ಅಧಿಕಾರಿಗೆ ಛೀ, ಥೂ ಎನ್ನಲಾರಂಭಿಸಿದ್ದಾರೆ.
ಇದನ್ನೂ ಓದಿ:ಟಿಎಂಸಿ, ಕಾಂಗ್ರೆಸ್​, ಕಮ್ಯುನಿಷ್ಟರ 11 ಶಾಸಕರು ಸೇರಿ 13 ನಾಯಕರು ಬಿಜೆಪಿ ಸೇರ್ಪಡೆ; ಇದಿನ್ನೂ ಶುರು ಎಂದ ಅಮಿತ್​ ಷಾ!
ಮಹಾರಾಷ್ಟ್ರದ ಪುಣೆಯ ಸಾಯಿ ಚೌಕ್​ನಲ್ಲಿ ಚಿತ್ರೀಕರಿಸಲಾಗಿದೆ ಎನ್ನುವ ವಿಡಿಯೋವೊಂದು ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಸ್ಕೂಟರ್​ನಲ್ಲಿ ಬರುತ್ತಿದ್ದ ಮಹಿಳೆಯರಿಬ್ಬರನ್ನು ಟ್ರಾಫಿಕ್​ ಪೊಲೀಸರು ಸೈಡಿನಲ್ಲಿ ನಿಲ್ಲಿಸಿದ್ದಾರೆ. ಮಹಿಳಾ ಪೊಲೀಸ್​ ಸಿಬ್ಬಂದಿಯು, ಗಾಡಿಯಲ್ಲಿದ್ದ ಮಹಿಳೆಯನ್ನು ಸೈಡಿಗೆ ಕರೆದು ಏನೋ ವಿಚಾರವನ್ನು ಗುಟ್ಟಾಗಿ ಹೇಳುತ್ತಾರೆ. ಅದಕ್ಕೆ ಸಮ್ಮತಿಸಿದಂತೆ ಮಾಡುವ ಮಹಿಳೆ, ದುಡ್ಡನ್ನು ತಂದು ಹಿಂದಿನಿಂದ ಮಹಿಳಾ ಅಧಿಕಾರಿಯ ಜೇಬಿಗೆ ಇರಿಸುತ್ತಾಳೆ. ನಂತರ ತನಗೇನೂ ಗೊತ್ತೇ ಇಲ್ಲ ಎನ್ನುವಂತೆ ಬೈಕ್​ ಹತ್ತಿ ಹೊರಟು ಹೋಗುತ್ತಾಳೆ. ಇತ್ತ ಜೇಬಿಗೆ ಬಿದ್ದ ದುಡ್ಡು ಭದ್ರವಾಗಿರಲಿ ಎಂದು ಮಹಿಳಾ ಅಧಿಕಾರಿ ಅದನ್ನು ಇನ್ನಷ್ಟು ಕೆಳಗಿಳಿಸಿಕೊಳ್ಳುತ್ತಾಳೆ.
ಇದನ್ನೂ ಓದಿ:ಮದುವೆಯಾಗಿ ಎರಡೇ ತಿಂಗಳಲ್ಲಿ ಗರ್ಭಿಣಿಯಾಗಿದ್ದು ಹೇಗೆ? ಹೊಟ್ಟೆ ಹಿಂದಿನ ಸತ್ಯ ಬಿಚ್ಚಿಟ್ಟ ಗಾಯಕಿ!
ಟ್ರಾಫಿಕ್​ ಪೊಲೀಸರ ಈ ವಿಡಿಯೋ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಲಾರಂಭಿಸಿದೆ. ಎಲ್ಲ ಪೊಲೀಸರದ್ದೂ ಇದೇ ಹಣೆಬರಹ ಎಂದು ಅನೇಕರು ಬೈಯಲಾರಂಭಿಸಿದ್ದಾರೆ. (ಏಜೆನ್ಸೀಸ್​)
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ:
ಟ್ರಾಫಿಕ್​ ಪೊಲೀಸರ ಲಂಚದ ಕರಾಮತ್ತು! ಹೇಗೆಲ್ಲ ದುಡ್ಡನ್ನ ಜೇಬಿಗಿಳಿಸ್ತಾರೆ ನೋಡಿ!
ವಿಡಿಯೋ ಕಾಲ್ ಮೂಲಕವೇ ಯುವಕನ ಬಟ್ಟೆ ಬಿಚ್ಚಿಸಿದ ಚಾಲಾಕಿ ಹುಡುಗಿಯರು!

ಪೊಲೀಸ್​ ಪೇದೆ ಮತ್ತು ಹೆಂಡತಿಯ ಕೊಲೆ! ಅಪ್ಪ ಅಮ್ಮ ಚೀರಿಕೊಳ್ಳುತ್ತಿದ್ದರೆ ಏನೂ ಗೊತ್ತಿಲ್ಲದವಳಂತೆ ಸುತ್ತಾಡಿದ ಮಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 4 =
Remember me
