ಚೆನ್ನೈ:ಮದುವೆ ಸೀಸನ್ ಶುರುವಾಗಿದೆ. ನವ ಜೋಡಿಗಳು ಹಸೆಮಣೆ ಏರುತ್ತಿದ್ದಾರೆ. ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಹೀಗಾಗಿ ಕ್ರಿಯೇಟಿವ್ ಯೋಚನೆಯೊಂದಿಗೆ ಮದುವೆ ಫೋಟೋ/ವಿಡಿಯೋ ಮಾಡಿಕೊಡುವ ಛಾಯಾಗ್ರಾಹಕರಿಗೆ ಎಲ್ಲಿಲ್ಲದ ಬೇಡಿಕೆ.
ಪ್ರೀ ವೆಡ್ಡಿಂಗ್ ಮತ್ತು ಪೋಸ್ಟ್​ ವೆಡ್ಡಿಂಗ್ ಫೋಟೋಶೂಟ್ ಸದ್ಯದ ಟ್ರೆಂಡ್. ವಿಭಿನ್ನ ಕಾನ್ಸೆಪ್ಟ್ ಮೂಲಕ ಫೋಟೋಶೂಟ್ ಮಾಡ್ತಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಸಂಭ್ರಮ ಪಡುತ್ತಾರೆ. ವಿಶೇಷವಾಗಿ ಮೂಡಿ ಬಂದಿರುವ ಫೋಟೋಶೂಟ್​ಗಳು ನೆಟ್ಟಿಗರ ಮೆಚ್ಚುಗೆಗೂ ಪಾತ್ರವಾಗುತ್ತದೆ. ಇದೀಗ ಇಂತದ್ದೇ ವೆಡ್ಡಿಂಗ್ ಫೋಟೋಶೂಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮದುಮಗಳೊಬ್ಬಳು ಜಿಮ್​ನಲ್ಲಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ. ಕಾಂಜೀವರಂ ಸೀರೆಯುಟ್ಟು, ಮದುವೆ ಹೆಣ್ಣಿನಂತೆ ಸಿಂಗರಿಸಿಕೊಂಡು ಜಿಮ್​ನಲ್ಲಿ ಕಸರತ್ತು ನಡೆಸಿದ್ದಾಳೆ. 25 ಕೆ.ಜಿ ಡಂಬಲ್ಸ್​​ ಎತ್ತಿಕೊಂಡು ಫೋಟೋಗೆ ಫೋಸ್​ ಕೊಟ್ಟಿದ್ದಾಳೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಟ್ವಿಟರ್​​ನಲ್ಲಿ ಈ ವೀಡಿಯೋವನ್ನು 17 ಸಾವಿರ ಜನರು ನೋಡಿದ್ದಾರೆ.
ಜಿಮ್​ನಲ್ಲಿ ಕಸರತ್ತು ಮಾಡಿಕೊಂಡು ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿರುವ ವಧುವಿಗೆ ನೆಟ್ಟಿಗರು ಮೆಚ್ಚುಗೆ ನೀಡಿದ್ದಾರೆ. ಈಕೆ ಮಹಿಳೆಯರ ಶಕ್ತಿಯನ್ನು ಮತ್ತು ಸೌಂದರ್ಯವನ್ನು ಪ್ರತಿನಿಧಿಸುತ್ತಿದ್ದಾಳೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)
Pre-wedding shoot…👇Aaj raaz khula himmat ka…….pic.twitter.com/1d9bJDVMqa— Rupin Sharma IPS (@rupin1992)November 19, 2021
Pre-wedding shoot…👇Aaj raaz khula himmat ka…….pic.twitter.com/1d9bJDVMqa
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + ten =
Remember me
