ಪಟನಾ:ಬಿಹಾರದಲ್ಲಿ ನಿತೀಶ್​ ಕುಮಾರ್​ ನೇತೃತ್ವದ ಹೊಸ ಸರ್ಕಾರ ರಚನೆಯಾಗಿದೆ. ಅತ್ಯಂತ ಕಡಿಮೆ ಮತದಲ್ಲಿ ಮುನ್ನಡೆ ಸಾಧಿಸಿದ ಎನ್​ಡಿಎ ಸರ್ಕಾರದ ಬಗ್ಗೆ ವಿರೋಧ ಪಕ್ಷಗಳು ಸಾಲು ಸಾಲು ದೂರು ನೀಡಲಾರಂಭಿಸಿದೆ. ಆಡಳಿತ ಪಕ್ಷದ ಶಾಸಕರೊಬ್ಬರಿಗೆ ರಾಷ್ಟ್ರಗೀತೆಯೇ ಬರುವುದಿಲ್ಲ ಎನ್ನುವ ದೂರನ್ನೂ ಮಾಡಿದೆ. ಅದಕ್ಕೆ ಸಾಕ್ಷಿಯಾಗಿ ಶಾಸಕರು ತಪ್ಪಾಗಿ ರಾಷ್ಟ್ರಗೀತೆ ಹಾಡುವ ವಿಡಿಯೋವನ್ನೂ ಶೇರ್​ ಮಾಡಲಾಗಿದೆ.
ಇದನ್ನೂ ಓದಿ:ಬಿಹಾರದ ನಿತೀಶ್​ ಸರ್ಕಾರದಲ್ಲಿ ಮೊದಲ ವಿಕೆಟ್​ ಪತನ; ಎನ್​ಡಿಎಗೆ ಬಂತು ಸಂಕಷ್ಟ
ಎನ್​ಡಿಎ ಸರ್ಕಾರದ ಶಿಕ್ಷಣ ಸಚಿವರಾಗಿ ಮೇವಾಲಾಲ್​ ಚೌಧರಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಅವರ ಮೇಲೆ 2017ರ ಭ್ರಷ್ಟಾಚಾರ ಆರೋಪವಿರುವ ಹಿನ್ನೆಲೆ ಅವರಿಗೆ ಸಚಿವ ಸ್ಥಾನ ಕೊಡುವಂತಿಲ್ಲ ಎಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಅದರ ಬೆನ್ನಲ್ಲೇ ಮೇವಾಲಾಲ್​ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಕೂಡ. ಆದರೆ ಇದೀಗ ಅವರೇ ಮತ್ತೊಮ್ಮೆ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ನಿಜ ಹೇಳಬೇಕೆಂದರೆ ಮೇವಾಲಾಲ್​ ಅವರಿಗೆ ನಮ್ಮ ರಾಷ್ಟ್ರಗೀತೆಯೇ ಬರುವುದಿಲ್ಲ. ಯಾವುದೋ ಗ್ರಾಮದಲ್ಲಿ ಧ್ವಜಾರೋಹಣ ಮಾಡಿದ ಅವರು ರಾಷ್ಟ್ರಗೀತೆ ಹಾಡಿದ್ದಾರೆ. ಅವರು ಹಾಡಿರುವ ಗೀತೆಯನ್ನು ಕೇಳಿದರೆ, ಅವರಿಗೆ ರಾಷ್ಟ್ರಗೀತೆ ಬರುವುದಿಲ್ಲ ಎನ್ನುವುದನ್ನು ಯಾರಾರದೂ ಹೇಳುವಂತಿದೆ. ಆ ವಿಡಿಯೋವನ್ನು ಇದೀಗ ವಿರೋಧ ಪಕ್ಷವಾದ ಆರ್​ಜೆಡಿ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದೆ.
ಇದನ್ನೂ ಓದಿ:ಅತ್ಯಾಚಾರ ವಿರೋಧಿಸಿದ್ದಕ್ಕೆ ಮೂಗನ್ನೇ ಕತ್ತರಿಸಿದರು
‘ಹಗರಣಗಳ ಗೂಡಾಗಿರುವ ಶಿಕ್ಷಣ ಸಚಿವ ಮೇವಾಲಾಲ್​ ಅವರಿಗೆ ರಾಷ್ಟ್ರಗೀತೆಯೇ ಬರುವುದಿಲ್ಲ. ನಿತೀಶ್​ ಕುಮಾರ್​ ಅವರಿಗೆ ನಿಮಗೆ ಇದಕ್ಕಿಂತ ಇನ್ನೂ ಅವಮಾನ ಆಗುವುದು ಬಾಕಿಯಿದೆಯೇ?’ ನಿಮ್ಮ ಆತ್ಮಸಾಕ್ಷಿ ಎಲ್ಲಿ ಮುಳುಗಿ ಹೋಗಿದೆ? ಎಂದು ಆರ್​ಜೆಡಿ ಪ್ರಶ್ನಿಸಿದೆ. (ಏಜೆನ್ಸೀಸ್​)
भ्रष्टाचार के अनेक मामलों के आरोपी बिहार के शिक्षा मंत्री मेवालाल चौधरी को राष्ट्रगान भी नहीं आता।
नीतीश कुमार जी शर्म बची है क्या? अंतरात्मा कहाँ डुबा दी?pic.twitter.com/vHYZ8oRUVZ
— Rashtriya Janata Dal (@RJDforIndia)November 18, 2020

ಮುಂಬೈನಲ್ಲಿ ಶಿವಸೇನೆಗೆ ಉಲ್ಟಾ ಹೊಡೆದ ಕಾಂಗ್ರೆಸ್​; ಸ್ವತಂತ್ರವಾಗಿ ಸ್ಪರ್ಧಿಸೋಕೆ ಕಾಂಗ್ರೆಸ್​ ರೆಡಿ

ರೈಲಿನ ಮೇಲೆ ಸೆಲ್ಫೀಗೆ ಫೋಸ್​ ಕೊಡುತ್ತಿದ್ದ ಬಾಲಕ ವಿದ್ಯುತ್​ ತಗುಲಿ ಸತ್ತೇ ಹೋದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 11 =
Remember me
