COVID-19 ನಿಂದ ದೂರವಿರಲು ಹೊರಗೆ ಹೋಗುವಾಗ ಫೇಸ್ ಮಾಸ್ಕ್ ಧರಿಸಲು ಆರೋಗ್ಯ ತಜ್ಞರು ಸೂಚಿಸುತ್ತಾರೆ.ಎರಡು ಪುಟಾಣಿಗಳು ಒಂದೇ ಸಂದೇಶ ಸಾರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ವಾಕ್ ಮಾಡಲು ಹೋಗುವಾಗ ಇಬ್ಬರು ಪುಟ್ಟಾಣಿಗಳು ಮಾಸ್ಕ್ ಧರಿಸಿರುವ ದೃಶ್ಯಾವಳಿ ಅದರಲ್ಲಿದೆ. ಈ ವಿಡಿಯೋವನ್ನು ಮಾಜಿ ಬಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ಹಂಚಿಕೊಂಡಿದ್ದಾರೆ.“ಮ್ಯಾಕ್ಸ್ ವೆಲ್ ಮತ್ತು ಫಿನ್ನೆಗನ್ ಮಾಸ್ಕ್​​ಗಳನ್ನು ಧರಿಸಿದ್ದಾರಾದರೆ.. ನೀವೂ ಮಾಸ್ಕ್​​ ಧರಿಸಿ ಆನಂದಿಸಬಹುದು…” ಎಂದು ಚಾಪ್ಮನ್ ವೀಡಿಯೊದೊಂದಿಗೆ ಬರೆದಿದ್ದಾರೆ.
If Maxwell and Finnegan can wear their masks and be happy about it you can too…https://t.co/cjCaXC42e7
— Rex Chapman🏇🏼 (@RexChapman)July 9, 2020

ವೀಡಿಯೊದಲ್ಲಿ, ಮಾಸ್ಕ್​​ಗಳನ್ನು ತೆಗೆದುಹಾಕಲು ಯಾವುದೇ ರೀತಿ ಪ್ರಯತ್ನಿಸದೆ ಖುಷಿಯಿಂದಲೇ ಮಕ್ಕಳು ನಡೆದುಕೊಂಡು ಹೋಗುತ್ತಿರುವ ದೃಶ್ಯ ಇದೆ.ವೈರಲ್ ಆದ ವೀಡಿಯೊ 2.2 ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಳಪಟ್ಟಿದೆ, 1.38 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು 29,000 ರಿಟ್ವೀಟ್‌ಗಳನ್ನು ಗಳಿಸಿದೆ. ಹೆಚ್ಚಿನ ನೆಟ್ಟಿಗರು ವೀಡಿಯೊದಿಂದ ಪ್ರಭಾವಿತರಾಗಿದ್ದಾರೆ.ಬಹಳಷ್ಟು ಪುಟ್ಟ ಮಕ್ಕಳು ಮಾಸ್ಕ್​​ಗಳನ್ನು ಯಾವುದೇ ಗಡಿಬಿಡಿಯಿಲ್ಲದೆ ಧರಿಸುವುದನ್ನು ನಾನು ಗಮನಿಸಿದ್ದೇನೆ. ಅವರ ಅಮ್ಮಂದಿರು, ಅಪ್ಪಂದಿರು, ಅಜ್ಜಿಯರೊಂದಿಗೆ ಸಂತೋಷದಿಂದ ಹೋಗುತ್ತಿದ್ದುದನ್ನು ಗಮನಿಸಿದ್ದಾಗಿ ಒಬ್ಬ ಬಳಕೆದಾರರು ಅನುಭವ ಹಂಚಿಕೊಂಡಿದ್ದಾರೆ. ವಯಸ್ಕರಿಗಿಂತ ಹೆಚ್ಚಾಗಿ ಪುಟಾಣಿಗಳೇ ಮಾಸ್ಕ್​​ಗೆಹೊಂದಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಸ್ನೇಹಿತನ ಸಾರೀ ಡಾನ್ಸ್ ವಿಡಿಯೋ : ತಾರಕಕ್ಕೇರಿದ ವಾಗ್ವಾದ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
