ನವದೆಹಲಿ:ಬಿಜೆಪಿ ತನ್ನ ಸಂಪೂರ್ಣ ಬಹುಮತವನ್ನು ಕಳೆದುಕೊಂಡು ಸಕಾFರ ರಚಿಸಲು ಮಿತ್ರಪಕ್ಷಗಳ ಮೇಲೆ ಅವಲಂಬಿತವಾಗಿದೆ, ಈ ಪರಿಸ್ಥಿತಿಯು ಭೂಮಿ ಮತ್ತು ಕಾರ್ಮಿಕರಂತಹ ಸುಧಾರಣಾ ಕಾರ್ಯಸೂಚಿಯ ಮಹತ್ವಾಕಾಂಕ್ಷೆಯ ಅಂಶಗಳಿಗೆ ಸವಾಲುಗಳನ್ನು ಒಡ್ಡಬಹುದು ಎಂದು ಫಿಚ್ ರೇಟಿಂಗ್ಸ್ ಬುಧವಾರದ ಟಿಪ್ಪಣಿಯಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2014 ರ ನಂತರ ಮೊದಲ ಬಾರಿಗೆ ತನ್ನ ಬಹುಮತವನ್ನು ಕಳೆದುಕೊಂಡಿತು, 543 ಸ್ಥಾನಗಳ ಲೋಕಸಭೆಯಲ್ಲಿ 240 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಹೀಗಾಗಿ, ಎನ್​ಡಿಎ ಮೈತ್ರಿಕೂಟದಲ್ಲಿ ಸಣ್ಣ ಪಕ್ಷಗಳೊಂದಿಗೆ ಸರ್ಕಾರವನ್ನು ರಚಿಸಲು ಮುಂದಾಗಿದೆ.
“ಬಿಜೆಪಿ ನೇತೃತ್ವದ ಎನ್‌ಡಿಎ ಮುಂದಿನ ಸರ್ಕಾರವನ್ನು ರಚಿಸುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಮೂರನೇ ಅವಧಿಗೆ ವಾಪಸಾಗಲಿದ್ದಾರೆ, ಆದರೆ, ದುರ್ಬಲ ಬಹುಮತದೊಂದಿಗೆ ಸರ್ಕಾರದ ಸುಧಾರಣಾ ಕಾರ್ಯಸೂಚಿಯ ಹೆಚ್ಚು ಮಹತ್ವಾಕಾಂಕ್ಷೆಯ ಅಂಶಗಳಿಗೆ ಸವಾಲುಗಳನ್ನು ಒಡ್ಡಬಹುದು” ಎಂದು ಫಿಚ್ ಹೇಳಿದೆ.
ಬಿಜೆಪಿಯು ಸಂಪೂರ್ಣ ಬಹುಮತದ ಕೊರತೆಯಿಂದಾಗಿ ಮತ್ತು ಅದರ ಸಮ್ಮಿಶ್ರ ಪಾಲುದಾರರ ಮೇಲೆ ಹೆಚ್ಚು ಅವಲಂಬಿತವಾಗಬೇಕಾಗಿರುವುದರಿಂದ, “ವಿವಾದಾತ್ಮಕ ಸುಧಾರಣೆಗಳನ್ನು ಅಂಗೀಕರಿಸುವುದು ಹೆಚ್ಚು ಕಷ್ಟಕರ ಎಂದು ಅದು ಹೇಳಿದೆ. ಆದರೂ, ಕನಿಷ್ಠ ಬಹುಮತದ ಹೊರತಾಗಿಯೂ ನೀತಿಯ ನಿರಂತರತೆಯನ್ನು ನಿರೀಕ್ಷಿಸಲಾಗಿದೆ. ಕ್ಯಾಪೆಕ್ಸ್ ಪುಶ್, ವ್ಯವಹಾರವನ್ನು ಸುಲಭಗೊಳಿಸುವ ಕ್ರಮಗಳು ಮತ್ತು ಕ್ರಮೇಣ ಹಣಕಾಸಿನ ಬಲವರ್ಧನೆಯ ಮೇಲೆ ಸರ್ಕಾರವು ತನ್ನ ಗಮನವನ್ನು ಉಳಿಸಿಕೊಳ್ಳುತ್ತದೆ ಎಂದು ಅದು ನಿರೀಕ್ಷಿಸಿದೆ.
ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಅಲ್ಪ ಬಹುಮತವು ಹಣಕಾಸಿನ ಬಲವರ್ಧನೆಯ ಪ್ರಗತಿಗೆ ಅಡ್ಡಿಯಾಗಬಹುದಾಗಿದೆ. ಹೆಚ್ಚು ದೂರಗಾಮಿ ಆರ್ಥಿಕ ಮತ್ತು ಹಣಕಾಸಿನ ಸುಧಾರಣೆಗಳನ್ನು ವಿಳಂಬಗೊಳಿಸಬಹುದು ಎಂದು ಮೂಡೀಸ್ ರೇಟಿಂಗ್ಸ್ ಅಂದಾಜಿಸಿದೆ.
ಎನ್‌ಡಿಎದ ಕಡಿಮೆ ಅಂತರದ ಗೆಲುವು, ಹಾಗೆಯೇ ಸಂಸತ್ತಿನಲ್ಲಿ ಬಿಜೆಪಿ ತನ್ನ ಸಂಪೂರ್ಣ ಬಹುಮತ ಕಳೆದುಕೊಂಡಿರುವುದು, ಹಣಕಾಸಿನ ಬಲವರ್ಧನೆಯ ಪ್ರಗತಿಗೆ ಅಗತ್ಯವಿರುವ ಹೆಚ್ಚು ದೂರಗಾಮಿ ಆರ್ಥಿಕ ಮತ್ತು ಹಣಕಾಸಿನ ಸುಧಾರಣೆಗಳನ್ನು ವಿಳಂಬಗೊಳಿಸಬಹುದು ಎಂದು ಮೂಡೀಸ್​ ತನ್ನ ಟಿಪ್ಪಣಿಯಲ್ಲಿ ಹೇಳಿದೆ.
3 ದಿನಗಳ ಆರ್​ಬಿಐ ಎಂಪಿಸಿ ಸಭೆ ಆರಂಭ: ಬಡ್ಡಿ ದರ ಯಥಾಸ್ಥಿತಿ ಮುಂದುವರಿಯುವ ಸಾಧ್ಯತೆ

ವರ್ಷಾಂತ್ಯದೊಳಗೆ ಏರ್​ ಇಂಡಿಯಾ- ವಿಸ್ತಾರಾ ವಿಲೀನ ಪೂರ್ಣ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 2 =
Remember me
