ಕಳೆದ ಆರು ತಿಂಗಳ ಅವಧಿಯಲ್ಲೇ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವದ ಮೂರು ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು, ಜಗತ್ತಿನ ಸೆಲೆಬ್ರಿಟಿಗಳ ನಡುವೆಯೂ ಈ ಮದುವೆ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗಷ್ಟೇ, 50 ಜೋಡಿಗಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಿ ವಧು-ವರರಿಗೆ ಭರ್ಜರಿ ಉಡುಗೊರೆ ನೀಡಲಾಗಿದೆ. ಇಂದು (ಜುಲೈ 12) ಅನಂತ್-ರಾಧಿಕಾ ಸಪ್ತಪದಿ ತುಳಿಯಲಿದ್ದು, ಗಣ್ಯಾತಿಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. 1,200 ಕೋಟಿ ರೂ.ಗೂ ಹೆಚ್ಚು ವೆಚ್ಚದೊಂದಿಗೆ ಇದು ಜಗತ್ತಿನ ಅತಿ ದುಬಾರಿ ಮದುವೆಯಾಗಿ ಗಮನ ಸೆಳೆದಿದೆ.
ಮದುವೆಯೆಂದರೆ ಸಂಭ್ರಮ, ಸಡಗರ, ಸಂತಸಗಳ ಸಂಗಮ. ವಿವಾಹ ಕಾರ್ಯಕ್ರಮವನ್ನು ಅವಿಸ್ಮರಣೀಯವಾಗಿಸಲು, ವಿಶೇಷ ಮತ್ತು ವಿಭಿನ್ನವಾಗಿಸಲು ಬಹುತೇಕರು ಶ್ರಮಿಸುತ್ತಾರೆ. ಅದರಲ್ಲೂ, ಭಾರತದಲ್ಲಿ ಮದುವೆ ಎಂದರೆ ಬರೀ ಸಮಾರಂಭವಲ್ಲ. ಅದೊಂದು ಭಾವನಾತ್ಮಕ ಕಾರ್ಯಕ್ರಮ. ಜೀವನದ ಹೊಸ ಅಧ್ಯಾಯ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿಯೇ ಶ್ರೀಸಾಮಾನ್ಯರು ಕೂಡ ಮದುವೆಯ ವಿಷಯದಲ್ಲಿ ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ಸೂತ್ರವನ್ನು ಗಾಳಿಗೆ ತೂರಿ ಧಾರಾಳವಾಗಿ ಖರ್ಚು ಮಾಡುತ್ತಾರೆ. ಈಗ ಭಾರತ, ಜಗತ್ತಿನ ಅತ್ಯಂತ ದುಬಾರಿ ಮದುವೆಗೆ ಸಾಕ್ಷಿಯಾಗುತ್ತಿದೆ. ಹೌದು, ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಇಂದು (ಜುಲೈ 12) ಸಪ್ತಪದಿ ತುಳಿಯಲಿದ್ದಾರೆ. ಮೂರು ದಿನಗಳ ವಿವಾಹ ಸಮಾರಂಭಕ್ಕೆ 1,200 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದ್ದು, ಜಗತ್ತಿನಲ್ಲಿ ಈವರೆಗೆ ಮದುವೆಗೆ ಇಷ್ಟು ಭಾರಿ ಮೊತ್ತ ಖರ್ಚು ಮಾಡಿದ ನಿದರ್ಶನಗಳಿಲ್ಲ.
ಎಲ್ಲಿ ನಡೆಯಲಿದೆ?:ಮುಂಬೈಯಲ್ಲಿನ ಬಾಂದ್ರಾ ಕುರ್ಲಾ ಪ್ರದೇಶದಲ್ಲಿ ಮುಕೇಶ್ ಅಂಬಾನಿ ಅವರ 27 ಅಂತಸ್ತುಗಳ ಭವ್ಯ ಮಹಲು ಆಂಟಿಲಿಯಾ ಇದೆ. ಈ ಬಂಗಲೆ ಜಗತ್ತಿನ ಎಲ್ಲ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ. ಆಂಟಿಲಿಯಾಗೆ ಹೊಂದಿಕೊಂಡೇ ಇರುವ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್​ನಲ್ಲಿ್ಲ ಮದುವೆಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ. ಈ ಸಭಾಂಗಣ ಏಕಕಾಲದಲ್ಲಿ 16 ಸಾವಿರ ಜನರು ಪಾಲ್ಗೊಳ್ಳಬಹುದಾದಷ್ಟು ವಿಶಾಲವಾಗಿದೆ. ಈಗಾಗಲೇ ಆಂಟಿಲಿಯಾ ಸುತ್ತಮುತ್ತಲ ಪ್ರದೇಶದಲ್ಲಿ ಜುಲೈ 14ರವರೆಗೆ ಅನ್ವಯಿಸುವಂತೆ ವಾಹನ ಸಂಚಾರ ನಿಷೇಧಿಸಲಾಗಿದ್ದು, ಮದುವೆಗೆ ಬರುವ ಗಣ್ಯರ ವಾಹನಗಳಿಗಷ್ಟೇ ಸಂಚಾರಕ್ಕೆ ಅವಕಾಶ ಸಿಗಲಿದೆ.
ಹೇಗೆ ನಡೆಯಲಿದೆ?:ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಮದುವೆ ಹಿಂದು ವಿವಾಹ ಸಂಪ್ರದಾಯದ ಪ್ರಕಾರ ನಡೆಯಲಿದೆ. ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರ, ವಿವಾಹ ಶಾಸ್ತ್ರಗಳು ಕ್ರಮವಾಗಿ ನಡೆಯಲಿದ್ದು, ಬಳಿಕ ಆಶೀರ್ವಾದ ಸಮಾರಂಭ ಮತ್ತು ವಿವಾಹ ಆರತಕ್ಷತೆ ಜರುಗಲಿದೆ. 12 ಜ್ಯೋತಿರ್ಲಿಂಗಗಳ ಕ್ಷೇತ್ರಗಳಿಂದ ಆಗಮಿಸುವ ತಲಾ ಒಬ್ಬೊಬ್ಬ ವೇದವಿದ್ವಾಂಸರು ಮದುವೆ ಶಾಸ್ತ್ರಗಳನ್ನು ನಡೆಸಿಕೊಡಲಿದ್ದಾರೆ.

ವೈಶಿಷ್ಟ್ಯಗಳು
. ಮದುವೆಗೆ ಕೆಲ ದಿನ ಮುನ್ನವೇ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಜಗತ್ತಿನ ಖ್ಯಾತ ಪಾಪ್ ಹಾಡುಗಾರ ಕೆನೆಡಾದ ಜಸ್ಟಿನ್ ಬೀಬರ್ ಪಾಲ್ಗೊಂಡರು. ಈ ಕಾರ್ಯಕ್ರಮದಲ್ಲಿ ಹಾಡಲು ಜಸ್ಟಿನ್ ಬೀಬರ್ ಪಡೆದುಕೊಂಡ ಸಂಭಾವನೆ 83 ಕೋಟಿ ರೂ. ಇದು ಭಾರತದಲ್ಲಿ ಗಾಯಕನೊಬ್ಬನಿಗೆ ಒಂದೇ ದಿನದ ಅವಧಿಯಲ್ಲಿ ನೀಡಿದ ಗರಿಷ್ಠ ಸಂಭಾವನೆ.
. ಮದುವೆ ಸಮಾರಂಭಕ್ಕಾಗಿ ಅಂಬಾನಿ ಕುಟುಂಬದ ಎಲ್ಲ ಸದಸ್ಯರಿಗೆ ಜಗತ್ತಿನ ಪ್ರಮುಖ ವಸ್ತ್ರವಿನ್ಯಾಸಕರಿಂದ ದಿರಿಸುಗಳನ್ನು ತಯಾರಿಸಲಾಗಿದೆ.

ಸಿರಿವಂತೆ ರಾಧಿಕಾ:ಖ್ಯಾತ ಉದ್ಯಮಿ, ರಿಲಯನ್ಸ್ ಸಮೂಹಗಳ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರತದ ನಂ.1 ಶ್ರೀಮಂತ ವ್ಯಕ್ತಿ ಎಂಬುದು ಗೊತ್ತಿರುವಂಥದ್ದೇ. ಆದರೆ, ರಾಧಿಕಾ ಮರ್ಚೆಂಟ್ ತಂದೆ ವಿರೇನ್ ಮರ್ಚೆಂಟ್ ಕೂಡ ಖ್ಯಾತ ಉದ್ಯಮಿಯಾಗಿದ್ದು, ಅವರ ಸಿರಿವಂತಿಕೆಗೂ ಏನೂ ಕಡಿಮೆಯಿಲ್ಲ. ಅಮೆರಿಕದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿರುವ ರಾಧಿಕಾ ತಂದೆಯ ಉದ್ಯಮವನ್ನು ನೋಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಅವರು ಭರತನಾಟ್ಯ ಕಲಾವಿದೆಯೂ ಹೌದು. ರಾಧಿಕಾ ಮತ್ತು ಅನಂತ್ ಅಂಬಾನಿ ಬಾಲ್ಯದಿಂದ ಗೆಳೆಯರಾಗಿದ್ದು, ಈಗ ಸತಿ-ಪತಿಗಳಾಗುತ್ತಿದ್ದಾರೆ.
. ಜುಲೈ 12 (ಶುಕ್ರವಾರ)- ಮದುವೆ ಶಾಸ್ತ್ರಗಳು
. ಜುಲೈ 13 (ಶನಿವಾರ)- ಆಶೀರ್ವಾದ ಸಮಾರಂಭ
. ಜುಲೈ 14 (ಭಾನುವಾರ)- ವಿವಾಹ ಆರತಕ್ಷತೆ
ವಿವಾಹದ ಆಹ್ವಾನ ಪತ್ರಿಕೆ ವೈಶಿಷ್ಟ್ಯದಿಂದ ಕೂಡಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ, ಅಂಬಾನಿ ಕುಟುಂಬ ಮಾಡಿಸಿರುವ ವಿವಾಹ ಆಮಂತ್ರಣದ ಬೆಲೆ 7 ಲಕ್ಷ ರೂ.ಗಳ ಆಸುಪಾಸು. ಕೆಲ ದಿನಗಳ ಹಿಂದಷ್ಟೇ ನೀತಾ ಅಂಬಾನಿ ವಾರಾಣಸಿಗೆ ತೆರಳಿ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಮೊದಲ ಆಮಂತ್ರಣ ಪತ್ರವನ್ನು ಸಮರ್ಪಿಸಿದ್ದರು.
ಪ್ರಧಾನಿ ಭಾಗಿ?:ಪ್ರಧಾನಿ ನರೇಂದ್ರ ಮೋದಿಯವರಿಗೆ ಅಂಬಾನಿ ಕುಟುಂಬ ಸಾಕಷ್ಟು ಮುಂಚೆಯೇ ಆಮಂತ್ರಣ ನೀಡಿದ್ದು, ಮೋದಿ ವಿವಾಹ ಅಥವಾ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಮದುವೆಗೆ 1,200 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡುತ್ತಿರುವ ಮುಕೇಶ್ ಅಂಬಾನಿ ಪುತ್ರ ಅನಂತ್ ಮತ್ತು ಸೊಸೆ ರಾಧಿಕಾ ಮರ್ಚೆಂಟ್ ಅವರಿಗೆ ಭರ್ಜರಿ ಉಡುಗೊರೆಯನ್ನೂ ನೀಡಿದ್ದಾರೆ. ದುಬೈನ ಷಾಮ್ ಜಮೈರಾಹ್​ದಲ್ಲಿ 3 ಸಾವಿರ ಅಡಿ ವಿಸ್ತೀರ್ಣದ, 640 ಕೋಟಿ ರೂ. ಮೌಲ್ಯದ ವಿಲ್ಲಾವನ್ನು ಉಡುಗೊರೆಯಾಗಿ ನೀಡಲಾಗಿದೆ. ಇದು ದುಬೈನಲ್ಲಿ ನಡೆದ ಎರಡನೇ ದುಬಾರಿ ಖರೀದಿ ಎನ್ನಲಾಗಿದೆ. ಈ ವಿಲ್ಲಾ ವಿಶಾಲವಾದ 10 ಬೆಡ್​ರೂಮ್ಳನ್ನು ಹೊಂದಿದೆ. ಅಲ್ಲದೆ, 70 ಮೀಟರ್​ನಷ್ಟು ಖಾಸಗಿ ಬೀಚ್​ನ್ನು ಒಳಗೊಂಡಿದೆ.
ಹೋಟೆಲ್​ಗಳಿಗೆ ಡಿಮ್ಯಾಂಡ್:ಮದುವೆ ಸಮಾರಂಭಕ್ಕೆ ಭಾರತ ಮಾತ್ರವಲ್ಲದೆ ಜಗತ್ತಿನ ಹಲವು ದೇಶಗಳ ಗಣ್ಯರು ಆಗಮಿಸಿದ್ದು, ಮುಂಬೈನ ಬಹುತೇಕ ಹೋಟೆಲ್​ಗಳು ಬುಕ್ ಆಗಿವೆ. ಹೋಟೆಲ್​ಗಳ ಬಾಡಿಗೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದು ರಾತ್ರಿಯ ವಾಸ್ತವ್ಯಕ್ಕೆ ಕೆಲವು ಹೋಟೆಲ್​ಗಳು 91,350 ರೂ. ಚಾರ್ಜ್ ಮಾಡುತ್ತಿವೆ. ಇನ್ನು ಸರಾಸರಿ ಹೋಟೆಲ್ ಕೋಣೆಗಳ ಬೆಲೆ ಒಂದು ರಾತ್ರಿಯ ವಾಸ್ತವ್ಯಕ್ಕೆ 13ರಿಂದ 15 ಸಾವಿರದಷ್ಟಿದೆ.
. ರಾಮನಾಥ ಕೋವಿಂದ, ಮಾಜಿ ರಾಷ್ಟ್ರಪತಿ
. ರಾಜನಾಥ್ ಸಿಂಗ್, ರಕ್ಷಣಾ ಸಚಿವ
. ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಕೃಷಿ ಸಚಿವ
. ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ
. ಏಕನಾಥ್ ಶಿಂಧೆ, ಮಹಾರಾಷ್ಟ್ರ ಮುಖ್ಯಮಂತ್ರಿ
. ಎನ್. ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಸಿಎಂ
. ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
. ಎಂಕೆ ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ
. ಪವನ್ ಕಲ್ಯಾಣ್, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ
. ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಡಿಸಿಎಂ
. ದಿಗ್ವಿಜಯ್ ಸಿಂಗ್, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ
. ಉದ್ಧವ್ ಠಾಕ್ರೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ
. ಬಾಲಿವುಡ್ ನಟರಾದ ಶಾರುಖ್ ಖಾನ್, ಆಮೀರ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅಮಿತಾಭ್ ಬಚ್ಚನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಕಟ್ರಿನಾ ಕೈಫ್, ಆಲಿಯಾ ಭಟ್, ಶಾಹೀದ್ ಕಪೂರ್, ರಣಬೀರ್ ಕಪೂರ್, ರಾಮ್ರಣ್, ಸಂಜಯ್ ದತ್ತ, ಪ್ರಿಯಾಂಕಾ ಚೋಪ್ರಾ-ನೀಲ್ ದಂಪತಿ.
. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ದಂಪತಿ
. ಸಮಿಯಾ ಸುಲುಹು ಹಸನ್, ತಂಜಾನಿಯಾ ಅಧ್ಯಕ್ಷರು
. ಶಾಂತನು ನಾರಾಯಣ್, ಎಡೋಬ್ ಸಿಇಒ
. ಟೋನಿ ಬ್ಲೆರ್, ಬ್ರಿಟನ್ ಮಾಜಿ ಪ್ರಧಾನಿ
. ಬೊರಿಸ್ ಜಾನ್ಸನ್, ಬ್ರಿಟನ್ ಮಾಜಿ ಪ್ರಧಾನಿ
. ಸೆಬೆಸ್ಟ್ರಿಯನ್ ಕುರ್ಜ್, ಆಸ್ಟ್ರಿಯಾದ ಮಾಜಿ ಪ್ರಧಾನಿ
. ಸ್ಟಿಫನ್ ಹಾರ್ಪರ್, ಕೆನೆಡಾ ಮಾಜಿ ಪ್ರಧಾನಿ
. ಮೊಹಮದ್ ನಶೀದ್, ಮಾಲ್ದೀವ್ಸ್ ಮಾಜಿ ರಾಷ್ಟ್ರಪತಿ
. ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ, ಉದ್ಯಮಿ ಅನಂತ್ ಪಿರಾಮಲ್- -ಠಿ;700 ಕೋಟಿ
. ಸಹಾರಾ ಸಮೂಹದ ಮುಖ್ಯಸ್ಥರಾಗಿದ್ದ ದಿ.ಸುಬ್ರತೋ ರಾಯ್ ಪುತ್ರ ಸುಶಾಂತೋ ರಾಯ್ ಮತ್ತು ಸಿಮಂತೋ ರಾಯ್-554 ಕೋಟಿ ರೂ.
. ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ರೆಡ್ಡಿ ಮತ್ತು ರಾಜೀವ್ ರೆಡ್ಡಿ-500 ಕೋಟಿ ರೂ.
. ಸೃಷ್ಟಿ ಮಿತ್ತಲ್ ಮತ್ತು ಗುಲಾಜ್ ಭೇಲ್–490 ಕೋಟಿ ರೂ.
. ವನೀಶಾ ಮಿತ್ತಲ್, ಅಮಿತ್ ಭಾಟಿಯಾ–240 ಕೋಟಿ ರೂ.
. ಸೋನಮ್ ವಶ್ವಾನಿ, ನವೀನ್ ಫ್ಯಾಬಿಯಾನಿ–210 ಕೋಟಿ ರೂ.
. ಅದೇಲ್ ಖಾನ್ ಮತ್ತು ಸನಾ ಖಾನ್–200 ಕೋಟಿ ರೂ.
. ಖ್ಯಾತ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ವ-100 ಕೋಟಿ ರೂ.
.  ಬಾಲಿವುಡ್​ನ ಖ್ಯಾತ ನಟ ರಣ್​ವೀರ್​ಸಿಂಗ್-ನಟಿ ದೀಪಿಕಾ ಪಡುಕೋಣೆ-77 ಕೋಟಿ ರೂ.
. ಮುಕೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಮತ್ತು ಶ್ಲೋಕ ಮೆಹ್ತಾ-70 ಕೋಟಿ ರೂ.
ಅತಿಥಿಗಳಿಗಾಗಿ 100 ಪ್ರೖೆವೇಟ್ ಜೆಟ್:ಮದುವೆಯಲ್ಲಿ ಪಾಲ್ಗೊಳ್ಳಲಿರುವ ಗಣ್ಯಾತಿಗಣ್ಯ ಅತಿಥಿಗಳ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅತಿಥಿಗಳನ್ನು ಕರೆತರಲು 100 ಖಾಸಗಿ ಜೆಟ್ ವಿಮಾನ ಮತ್ತು 3 ಫಾಲ್​ಕಾನ್-2000 ಏರ್​ಕ್ರಾಫ್ಟ್​ಗಳ ವ್ಯವಸ್ಥೆ ಮಾಡಲಾಗಿದೆ. ಜಗತ್ತಿನ ಬೇರೆ ಬೇರೆ ದೇಶಗಳಿಂದ ಅತಿಥಿಗಳು ಆಗಮಿಸುತ್ತಿದ್ದು, ಅವರು ಭಾರತಕ್ಕೆ ಬಂದಿಳಿದ ನಂತರ ಮುಂಬೈಗೆ ಕರೆತರಲು ಈ ಪ್ರೖೆವೇಟ್ ಜೆಟ್​ಗಳ ಬಳಕೆ ಮಾಡಲಾಗುತ್ತದೆ ಎಂದು ಚಾರ್ಟರ್ ಕಂಪನಿ ಕ್ಲಬ್ ಒನ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜನ್ ಮೆಹ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಚ್ಚಕನ್ನಡದ ನಿರೂಪಕಿ, ಅಪರ್ಣಾ ವಸ್ತಾರೆ ಇನ್ನು ನೆನಪು ಮಾತ್ರ! ಹೇಗಿತ್ತು ನೋಡಿ ಬಣ್ಣದ ಲೋಕದ ಪಯಣ

ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ; ಕ್ಯಾನ್ಸರ್​ನಿಂದ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
