ರೂರ್ಕೆಲಾ(ಒಡಿಶಾ):ಲಾಕ್​ಡೌನ್​ ನಡುವೆಯೂ ನೆರವೇರಿದ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಅವರ ವಿವಾಹದ ಬಗ್ಗೆ ಪರ-ವಿರೋಧದ ಚರ್ಚೆಯಾಗುತ್ತಿರುವ ನಡುವೆಯೇ ಒಡಿಶಾದ ಸುಂದರ್​ಗಢದ ನವಜೋಡಿಯೊಂದು ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿದೇ, ಸಾಮಾಜಿಕ ಅಂತರಕ್ಕೆ ಒತ್ತು ನೀಡುವ ಮೂಲಕ ಸರಳ ಮದುವೆಯಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.​ಕುಟುಂಬದ ಕೆಲವೇ ಸದಸ್ಯರ ಸಮ್ಮುಖದಲ್ಲಿ ಶುಕ್ರವಾರ ಸುಂದರ್​ಗಢದ ಝಾರ್ಗೋನ್​ ಗ್ರಾಮದಲ್ಲಿ ಅಮೃತ್​ ಪಟೇಲ್​ ಮತ್ತು ಸುಭಶ್ರೀ ಪಟೇಲ್ ಜೋಡಿ ಸರಳ ವಿವಾಹವಾದರು.​
ವಿವಾಹ ಸಂದರ್ಭದಲ್ಲಿ ಕರೊನಾ ಲಾಕ್​ಡೌನ್​ ಮಾರ್ಗಸೂಚಿಗಳನ್ನು ಬಿಟ್ಟುಕೊಡದ ವಧು-ವರರ ಕುಟುಂಬ ಸಾಮಾಜಿಕ ಅಂತರವನ್ನು ಕಾಯ್ದುಕೊಂಡರು. ಅಲ್ಲದೇ, ವಧು-ವರ ಸೇರಿದಂತೆ ಸಮಾರಂಭಕ್ಕೆ ಆಗಮಿಸಿದ್ದವರೆಲ್ಲ ಮಾಸ್ಕ್​ ಧರಿಸಿದ್ದರು.
ವೃತ್ತಿಯಲ್ಲಿ ಇಂಜಿನಿಯರ್​ ಆಗಿರುವ ಅಮೃತ್​ ಪಟೇಲ್​, ಬಿಇಡಿ ವಿದ್ಯಾರ್ಥಿ ಸುಭಶ್ರೀ ಜತೆ ಸಪ್ತಪದಿ ತುಳಿದರು. ಅಮೃತ್​ ಪಟೇಲ್​ ತಾಯಿ ಸ್ನೇಹಲತಾ ಅವರು ಮಾತನಾಡಿ, ಲಾಕ್​ಡೌನ್​ ಏಪ್ರಿಲ್​ 14ಕ್ಕೆ ಕೊನೆಗೊಳ್ಳುತ್ತದೆ ಅಂದುಕೊಂಡಿದ್ದೆವು. ಹೀಗಾಗಿ ಏಪ್ರಿಲ್​ 17ಕ್ಕೆ ಮದುವೆಯನ್ನು ಮರುನಿಗದಿ ಪಡಿಸಲಾಗಿತ್ತು. ಮತ್ತೆ ಲಾಕ್​ಡೌನ್​ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಅಮೃತ್​ ಅವರಿಗೆ ರಜೆ ಇರದ ಕಾರಣ ಕೋವಿಡ್​-19 ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ ಎಂದು ಸುಂದರಗಢ ಆಡಳಿತ ಮಂಡಳಿಗೆ ಮನವರಿಕೆ ಮಾಡಿ ಏಪ್ರಿಲ್​ 17ರಂದೇ ವಿವಾಹ ಕಾರ್ಯ ನೆರವೇರಿಸಲು ಒಪ್ಪಿಗೆ ಪಡೆದರು.
ಇಡೀ ವಿವಾಹ ಸಮಾರಂಭದ ಉದ್ದಕ್ಕೂ ವಧು-ವರ ಸೇರಿದಂತೆ ಕುಟುಂಬ ವರ್ಗದವರು ಮತ್ತು ತುಂಬಾ ಬೇಕಾದ ಬಂಧು ಬಳಗವದರು ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡೆ ಸಂಪ್ರದಾಯಗಳನ್ನು ಮುಗಿಸಿದರು. ಅಲ್ಲದೆ, ಮದುವೆಗೂ ಮುನ್ನ ಮಹಾಮಾರಿ ಕರೊನಾ ತೊಲಗಲಿ ಎಂದು ಎರಡು ಕುಟುಂಬದ ಸದಸ್ಯರು ಅಮೃತ್​ ಮನೆಯಲ್ಲಿ ಗಾಯತ್ರಿ ಯಜ್ಞವನ್ನು ನೇರವೇರಿಸಿದ್ದಾರೆ.
ಇನ್ನು ಮಾಜಿ ಸಿಎಂ ಎಚ್​ಡಿಕೆ ಪುತ್ರ ನಿಖಿಲ್​ ಮದುವೆ ವಿಚಾರಕ್ಕೆ ಬಂದರೆ, ಕೆಲವು ಸಂದರ್ಭಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡರೂ, ಹಲವು ಸಂದರ್ಭಗಳಲ್ಲಿ ಮಾಸ್ಕ್​ ಧರಿಸದೇ ಒಟ್ಟಾಗಿ ಸೇರಿ ಲಾಕ್​ಡೌನ್​ ನಿಯಮವನ್ನು ಉಲ್ಲಂಘಿಸಿದರು ಎಂಬ ಆರೋಪವು ಕೇಳಿಬಂತು. ಅಲ್ಲದೇ, ಸಾಮಾಜಿಕ ಜಾಲತಾಣದಲ್ಲೂ ಪರ-ವಿರೋಧದ ಚರ್ಚೆಯಾಯಿತು. ಇದರ ನಡುವೆ ಸಿಎಂ ಬಿ.ಎಸ್​. ಯಡಿಯೂರಪ್ಪನವರು ಎಚ್​ಡಿಕೆ ಪರ ಬ್ಯಾಟ್​ ಬೀಸಿ ಅನುಮತಿಯನ್ನು ಪಡೆದೇ ವಿವಾಹ ನೆರವೇರಿಸಿದ್ದಾರೆ ಎಂದರು. ಇದಕ್ಕೆ ಮಾಜಿ ಸಿಎಂ ಎಚ್​ಡಿಕೆ ಸಹ ಟ್ವೀಟ್​ ಮೂಲಕ ಧನ್ಯವಾದ ತಿಳಿಸಿದ್ದಾರೆ.(ಏಜೆನ್ಸೀಸ್​)
FACT CHECK |ನಿಖಿಲ್​ ಕುಮಾರಸ್ವಾಮಿ ವಿವಾಹದಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸಿದ್ದರೆ? ಫ್ಯಾಕ್ಟ್​ಚೆಕ್​ನಲ್ಲಿ ನೈಜ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
