ಕೋಲ್ಕತ:ನನ್ನ ಪತ್ನಿ ಕಿಟಕಿ ಹಾರಿ ಮಗುವಿನ ಜತೆ ಪರಾರಿಯಾಗಿದ್ದಾಳೆ… ಆಕೆಯನ್ನ ಹುಡುಕಿ ಕೊಟ್ಟವರಿಗೆ 5 ಸಾವಿರ ರೂಪಾಯಿ ಕೊಡ್ತೀನಿ… ಪ್ಲೀಸ್​ ಯಾರಾದರೂ ಹುಡುಕಿಕೊಡಿ ಎಂದು ವ್ಯಕ್ತಿಯೊಬ್ಬ ತನ್ನ ಫೇಸ್​ಬುಕ್ ಖಾತೆಯಲ್ಲಿ ಘೋಷಿಸಿದ್ದಾನೆ.
“ನಾನು ವೃತ್ತಿಯಲ್ಲಿ ಬಡಗಿ. ಹೈದರಾಬಾದ್​ನಲ್ಲಿ ಕೆಲಸಕ್ಕೆ ಹೋಗಿದ್ದೆ. ಡಿ.9ರಂದು ಗ್ರಾಮದಿಂದ ನನಗೆ ಕರೆ ಬಂತು. ನಿನ್ನ ಪತ್ನಿ ಮಗುವಿನೊಂದಿಗೆ ಕಿಟಕಿ ಹಾರಿ ಪರಾರಿ ಆಗಿದ್ದಾಳೆ ಎಂದು ತಿಳಿಸಿದ್ರು. ಮರುದಿನವೇ ಊರಿಗೆ ಹೋಗಿ ನೋಡಿದೆ. ಅಲ್ಲಿ ಪತ್ನಿ ಮತ್ತು ಮಗು ಇರಲಿಲ್ಲ. ಅವರಿಬ್ಬರಿಗಾಗಿ ಹುಡುಕಾಡಿದೆ, ಸಿಗಲಿಲ್ಲ. ಪತ್ನಿ ತನ್ನ ಮತ್ತು ಮಗುವಿನ ಎಲ್ಲ ದಾಖಲೆ ಪತ್ರದ ಜತೆಗೆ ಮನೆಯಲ್ಲಿದ್ದ ಚಿನ್ನಾಭರಣವನ್ನೂ ಕೊಂಡೊಯ್ದಿದ್ದಾಳೆ. ನನಗೆ ಸಿಕ್ಕ ಮಾಹಿತಿ ಪ್ರಕಾರ ಡಿ.9ರ ರಾತ್ರಿ ನಂಬರ್​ ಪ್ಲೇಟ್​ ಇಲ್ಲದ ನ್ಯಾನೊ ಕಾರೊಂದು ನನ್ನ ಮನೆ ಸಮೀಪ ಬಂದಿತ್ತಂತೆ. ಮಗುವಿನ ಜತೆ ನನ್ನ ಪತ್ನಿ ಆ ಕಾರಿನಲ್ಲಿ ಹೋಗಿದ್ದಾಳೆ. ಒಬ್ಬಾತ ಆಕೆಗೆ ಮೊಬೈಲ್​ ಕೊಡಿಸಿದ್ದ. ಅದುವೇ ಆಕೆಯನ್ನು ಮನೆಯಿಂದ ಹೊರ ಹೋಗುವಂತೆ ಮಾಡಿದೆ. ಅನಕ್ಷರಸ್ಥಳಾದ ನನ್ನ ಪತ್ನಿಗೆ ಆತ ಆಮಿಷವೊಡ್ಡಿ ಮರುಳುಮಾಡಿ ಕರದೊಯ್ದಿದ್ದಾನೆ…” ಎಂದು ಅಳಲು ತೋಡಿಕೊಂಡಿರುವ ಪತಿ, ‘ನನ್ನ ಮಗು ಮತ್ತು ಪತ್ನಿಯನ್ನು ಪತ್ತೆಮಾಡಿ ಕೊಟ್ಟವರಿಗೆ 5,000 ರೂಪಾಯಿ ಬಹುಮಾನ ನೀಡುವೆ” ಎಂದು ಘೋಷಿಸಿದ್ದಾನೆ.
ಇಂತಹ ಘಟನೆ ಪಶ್ಚಿಮ ಬಂಗಾಳದ ಪಿಂಗ್ಲ ಗ್ರಾಮದಲ್ಲಿ ನಡೆದಿದ್ದು, ಮಗು-ತಾಯಿ ನಾಪತ್ತೆ ಸಂಬಂಧ ದೂರು ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಕಿಟಕಿ ಹಾರಿ ಮಗುವಿನೊಂದಿಗೆ ಪರಾರಿಯಾದ ಪತ್ನಿಯನ್ನು ಹುಡುಕಿ ಕೊಟ್ಟವರಿಗೆ 5,000 ರೂಪಾಯಿ ಇನಾಮು ಕೊಡುವುದಾಗಿ ಘೋಷಣೆ ಮಾಡಿರುವ ಹತಾಶ ಗಂಡನ ಕಂಡ ನೆಟ್ಟಿಗರು ಮರುಗಿದ್ದಾರೆ.
ಅರ್ಚನಾ ರೆಡ್ಡಿ ಕೊಲೆ ಕೇಸ್​ಗೆ ಸ್ಫೋಟಕ ತಿರುವು: ಮಲತಂದೆ ಜತೆ ಸೇರಿ ಮಗಳೇ ಸ್ಕೆಚ್​ ಹಾಕಿದ್ಲಾ?

ಲೈಂಗಿಕ ಕ್ರಿಯೆ ವಿಚಾರಕ್ಕೆ ಹಿಂಸಿಸುತ್ತಾಳೆ, ಊಟ ಹಾಕ್ತಿಲ್ಲ, ಅವಳ ಕಾಟ ಸಹಿಸಲಾಗ್ತಿಲ್ಲ… ಎಂದು ಠಾಣೆಗೆ ಬಂದ ಪತಿ

ಚೇಳು ಕಡಿತಕ್ಕೆ ಯುವಕ ಬಲಿ! ಬದುಕುವ ಚಾನ್ಸ್​ ಇದ್ದರೂ ಆ 3 ದಿನ ಆತ ಬಳಸಿಕೊಳ್ಳಲೇ ಇಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
